ಔರಂಗಾಬಾದ್(ಬಿಹಾರ): ಕೊರೊನಾ ಮಹಾಮಾರಿ ಹಾವಳಿ ಹೆಚ್ಚಾಗಿರುವ ಕಾರಣ ಬಿಹಾರದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಕೂಡ ಇಲ್ಲಿನ ಮದನ್ಪುರ ಪೊಲೀಸ್ ಠಾಣೆಯ ಸಿಂಧುರಾ ಗ್ರಾಮದಲ್ಲಿ ವಿವಾಹ ಸಮಾರಂಭವೊಂದು ನಡೆದಿತ್ತು.
ಚಂದನ್ ಕುಮಾರ್-ಶ್ವೇತಾ ಕುಮಾರಿ ಬಹಳ ಆಡಂಬರದಿಂದ ವಿವಾಹ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಂದನ್ ಕುಮಾರ್ ತನ್ನ ಪತ್ನಿಯನ್ನ ಬಲಗಂಜ್ನಿಂದ ಸಿಂಧುರಾ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆಕೆ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾಳೆ.
ಗಂಡ ಚಂದನ್ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಶಿವಗಂಜ್ ಪೆಟ್ರೋಲ್ ಪಂಪ್ ಬಳಿ ವಧು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿದ್ದಾಳೆ. ಹೀಗಾಗಿ ವಾಹನ ನಿಲ್ಲಿಸಲಾಗಿದೆ. ತಕ್ಷಣವೇ ಆಕೆ ತನ್ನ ಪ್ರೇಮಿ ಜೊತೆ ಪರಾರಿಯಾಗಿದ್ದಾಳೆ.
ಇದನ್ನೂ ಓದಿ: ತಮಿಳುನಾಡು ಸಿಎಂ ಆಗಿ ನಾಳೆ ಸ್ಟಾಲಿನ್ ಪದಗ್ರಹಣ: ಸಚಿವ ಸಂಪುಟದಲ್ಲಿ ಗಾಂಧಿ, ನೆಹರು!
ಪ್ರಕರಣದ ಸಂಪೂರ್ಣ ವಿವರ
ಏಪ್ರಿಲ್ 21ರಂದು ಶ್ವೇತಾ ಕುಮಾರಿ ಹಾಗೂ ಚಂದನ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರಿಂದ ಎರಡು ಕುಟುಂಬ ಸಂತೋಷದಲ್ಲಿದ್ದವು. ಕೆಲ ದಿನಗಳ ನಂತರ ಅತ್ತೆ-ಮಾವನ ಮನೆಯಿಂದ ಮಹಿಳೆ ತವರು ಮನೆಗೆ ತೆರಳಿದ್ದಾಳೆ. ಆಕೆಯನ್ನ ಕರೆದುಕೊಂಡು ಬರಲು ಚಂದನ್ ತೆರಳಿದ್ದನು. ಮರಳಿ ಗಂಡನ ಮನೆಗೆ ಬರುವಾಗಿ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ವಾಹನ ನಿಲ್ಲಿಸಿದ್ದಾಳೆ. ಈ ವೇಳೆ, ತನ್ನ ಲವರ್ ಜೊತೆ ಪರಾರಿಯಾಗಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಈಗಾಗಲೇ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.