ವಿಶಾಖಪಟ್ಟಣ(ಆಂಧ್ರ ಪ್ರದೇಶ): ತಾಳಿ ಕಟ್ಟಲು ಇನ್ನೇನು ಕೆಲವೇ ನಿಮಿಷಗಳು ಬಾಕಿ ಇದ್ದವು.. ಈ ವೇಳೆ ವೀಳ್ಯದೆಲೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ವಧು ದಿಢೀರನೇ ಕುಸಿದುಬಿದ್ದು ಮದುವೆ ಮಂಟಪದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಸೃಜನಾ ಮೃತಪಟ್ಟ ವಧು.
ವಿಶಾಖಪಟ್ಟಣ ಜಿಲ್ಲೆಯ ಮಧುರವಾಡದಲ್ಲಿ ಮದುವೆ ಸಂಭ್ರಮದಿಂದ ನಡೆಯುತ್ತಿತ್ತು. ವಧು ಸೃಜನಾ ಮತ್ತು ವರ ಜೀರಿಗೆ- ಬೆಲ್ಲ(ವೀಳ್ಯದೆಲೆ ಶಾಸ್ತ್ರ)ದ ಆಚರಣೆಯಲ್ಲಿ ತೊಡಗಿದ್ದರು. ಈ ವೇಳೆ ವಧು ಸೃಜನಾ ಇದ್ದಕ್ಕಿದ್ದಂತೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದಿದ್ದಾರೆ. ಆಗ ಅಲ್ಲೇ ಇದ್ದ ಕುಟುಂಬ ಸದಸ್ಯರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಸೃಜನಾ ಅಷ್ಟೊತ್ತಿಗಾಗಲೇ ಇಹಲೋಕ ತ್ಯಜಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ವಧು ಸೃಜನಾ ಬದುಕುಳಿಯಲಿಲ್ಲ. ಸಂಭ್ರಮದಲ್ಲಿದ್ದ ಮನೆಯಲ್ಲಿ ವಧುವಿನ ಸಾವಿನಿಂದ ಸೂತಕದ ಛಾಯೆ ಆವರಿಸಿದೆ.
ಓದಿ: ದೊಡ್ಡಪ್ಪನೊಂದಿಗೆ ಸ್ನಾನಕ್ಕೆ ತೆರಳಿದ್ದ ಅಕ್ಕ-ತಮ್ಮ ನೀರುಪಾಲು.. ಪೋಷಕರ ಆಕ್ರಂದನ