ಜಬಲ್ಪುರ(ಮಧ್ಯಪ್ರದೇಶ) : ಮದುವೆ ಮಾಡಿಕೊಂಡು ಎರಡ್ಮೂರು ದಿನ ಗಂಡನ ಜೊತೆ ಎಂಜಾಯ್ ಮಾಡಿದ ಬಳಿಕ ಹಣ - ಆಭರಣ ದೋಚಿ ಪರಾರಿಯಾಗುತ್ತಿದ್ದ ಸುಂದರಿ ಮತ್ತು ಆಕೆಯ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ.
ಏನಿದು ಘಟನೆ: ಬಂಧಿತ ವಧು ರೇಣುಕಾಳ ನಿಜವಾದ ಹೆಸರು ಉರ್ಮಿಳಾ ಬರ್ಮನ್. ಈಕೆ ಮದುವೆ ಮಾಡಿಕೊಂಡು ವರ ಕುಟುಂಬಕ್ಕೆ ಮೋಸ ಮಾಡುವ ಗ್ಯಾಂಗ್ವೊಂದು ಕಟ್ಟಿಕೊಂಡಿದ್ದಳು. ಉರ್ಮಿಳಾ ಗ್ಯಾಂಗ್ನಲ್ಲಿ ಸುಮಾರು 10ಕ್ಕೂ ಹೆಚ್ಚು ಜನರಿದ್ದಾರೆ. ಉರ್ಮಿಳಾ ಗುರು - ಹಿರಿಯರ ಮಧ್ಯೆ ಮದುವೆ ಮಾಡಿಕೊಂಡು ಒಂದರೆಡು ದಿನಗಳ ಕಾಲ ಗಂಡನೊಂದಿಗೆ ಮನೆಯಲ್ಲಿದ್ದು, ಬಳಿಕ ಸಮಯ ಸಿಕ್ಕಾಗ ಹಣ - ಆಭರಣ ಲೂಟಿ ಮಾಡಿ ತನ್ನ ಗ್ಯಾಂಗ್ ಜೊತೆ ಎಸ್ಕೇಪ್ ಆಗುತ್ತಿದ್ದಳು.
ಓದಿ: ಫೇಸ್‌ಬುಕ್ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ; ಶ್ರೀಮಂತಿಕೆಯಲ್ಲಿ ಅದಾನಿ, ಅಂಬಾನಿ ನಂತರದ ಸ್ಥಾನಕ್ಕೆ ಇಳಿಕೆ..
ವಯಸ್ಸಾದ ಬ್ರಹ್ಮಚಾರಿಗಳಿಗೆ ಗಾಳ: ಈಕೆಯ ಗ್ಯಾಂಗ್ ವಯಸ್ಸಾದ ಮೇಲೂ ಮದುವೆಯಾಗದ ಬ್ರಹ್ಮಚಾರಿಗಳ ಹುಡುಕಾಟದಲ್ಲಿ ಇರುತ್ತಾರೆ. ಬಳಿಕ ಅವರೊಂದಿಗೆ ಪರಿಚಯ ಬೆಳೆಸಿಕೊಳ್ಳುತ್ತಾರೆ. ನಿಮಗೊಂದು ಸುಂದರ ಹುಡುಗಿ ಜೊತೆ ಮದುವೆ ಮಾಡಿಕೊಡುವುದಾಗಿ ವರ ಮತ್ತು ವರನ ಕುಟುಂಬಸ್ಥರಿಗೆ ನಂಬಿಕೆ ಹುಟ್ಟಿಸಿ ಹಣ ಪಡೆಯಲು ಶುರು ಮಾಡುತ್ತಾರೆ.
ವರನೊಂದಿಗೆ ಮದುವೆಯಾದ ಬಳಿಕ ಒಬ್ಬೊಬ್ಬರಾಗಿ ಗಂಡನ ಮನೆಯಿಂದ ತೊರೆಯಲಾರಂಭಿಸುತ್ತಾರೆ. ಕೊನೆಯಾದಾಗಿ ಉರ್ಮಿಳಾ ಬಂಗಾರ - ಹಣ ಲೂಟಿ ಮಾಡಿ ಅಲ್ಲಿಂದ ಎಸ್ಕೇಪ್ ಆಗುತ್ತಾಳೆ. ರಾಜಸ್ಥಾನದ ಜೈಪುರ, ಕೋಟಾ, ಧೋಲ್ ಪುರ ಹಾಗೂ ಮಧ್ಯಪ್ರದೇಶದ ದಾಮೋಹ್, ಸಾಗರ್, ಜಬಲ್ಪುರ ಸೇರಿ ಸುಮಾರು ಎಂಟು ಮದುವೆ ಮಾಡಿಕೊಂಡಿರುವ ಈ ಸುಂದರಿ ವರನ ಕುಟುಂಬಗಳಿಗೆ ವಂಚಿಸಿ ಪರಾರಿಯಾಗುತ್ತಿದ್ದಳು.
ಜಬಲ್ಪುರ ನ್ಯಾಯಾಲಯದಲ್ಲಿ ಮದುವೆ: ಜಿಲ್ಲೆಯ ನಿವಾಸಿ ದಶರತ್ ರಜಪೂತ್ ಕೆಲ ದಿನಗಳ ಹಿಂದೆ ಉರ್ಮಿಳಾನ್ನು ಭೇಟಿಯಾಗಿದ್ದಾನೆ. ಆ ಬಳಿಕ ಇಬ್ಬರೂ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಮದುವೆ ಹಿನ್ನೆಲೆ ಮಂಗಳವಾರದಂದು ದಶರತ್ ರಜಪೂತ್ ಮತ್ತು ಆತನ ಇಡೀ ಕುಟುಂಬವನ್ನು ಜಬಲ್ಪುರದ ಜಿಲ್ಲಾ ನ್ಯಾಯಾಲಯಕ್ಕೆ ತೆರಳಿದ್ದರು.
ವಧುವಿನ ಕುಟುಂಬವೂ ನ್ಯಾಯಾಲಯಕ್ಕೆ ತಲುಪಿತ್ತು. ನ್ಯಾಯಾಲಯದಲ್ಲಿ ಇಬ್ಬರು ಮದುವೆಯಾದರು. ಬಳಿಕ ವಕೀಲರಿಗೆ ಶುಲ್ಕ ಪಾವತಿಸುವ ನೆಪದಲ್ಲಿ 30 ಸಾವಿರ ಮತ್ತು ಮದುವೆಗೂ ಮುನ್ನ ದಶರತ್ ಕುಟುಂಬವೂ ವಧುವಿಗೆ 2.5 ಲಕ್ಷ ಮೌಲ್ಯದ ಆಭರಣ ನೀಡಿದ್ದರು.
ಓದಿ: World Cancer Day 2022: 'ಕ್ಲೋಸ್ ದಿ ಕೇರ್ ಗ್ಯಾಪ್' ಈ ಬಾರಿ ವಿಶ್ವ ಕ್ಯಾನ್ಸರ್ ದಿನದ ಘೋಷ ವಾಕ್ಯ
ಪೊಲೀಸರಿಗೆ ಸಿಕ್ಕ ಅವಕಾಶ: ಹಣ, ಚಿನ್ನಾಭರಣ ತೆಗೆದುಕೊಂಡು ಕಳ್ಳಿ ವಧು ಏಕಾಏಕಿ ಪರಾರಿಯಾಗಿದ್ದಳು. ಆದ್ರೆ ವಧುವಿನ ಚಿಕ್ಕಮ್ಮ ದಶರತ್ ಕುಟುಂಬದ ಕೈಗೆ ಸಿಕ್ಕಿ ಬಿದ್ದಿದ್ದಳು. ದಶರತ್ ಕುಟುಂಬ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ವಿಚಾರಣೆ ವೇಳೆ ನಕಲಿ ಮದುವೆ ಗ್ಯಾಂಗ್ ಬಗ್ಗೆ ತಿಳಿದಿದೆ.
ಎಚ್ಚೆತ್ತ ಓಮತಿ ಪೊಲೀಸ್ ಠಾಣಾ ಪೊಲೀಸರು ಕೂಡಲೇ ಉರ್ಮಿಳಾ, ಅರ್ಚನಾ ಬರ್ಮಾನ್, ಭಾಗಚಂದ್ ಕೋರಿ ಮತ್ತು ಅಮರ್ ಸಿಂಗ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದ ಸದಸ್ಯರ ಪತ್ತೆಗೆಗಾಗಿ ಜಾಲ ಬೀಸಿದ್ದಾರೆ. ಈ ಘಟನೆ ಕುರಿತು ಓಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.