ETV Bharat / bharat

Video: ಹೆಲಿಕಾಪ್ಟರ್ ಮೂಲಕ ಮಾವನ ಮನೆಗೆ ಹಾರಿ ಬಂದ ಸೊಸೆ! - ವಧು ವರ್ಮಾ

ಕುದುರೆ ಏರಿ, ಟ್ರ್ಯಾಕ್ಟರ್ ಏರಿ ಬರುವ ವಧುಗಳನ್ನು ನೋಡಿದ್ದೇವೆ. ಆದರೆ, ಇಲ್ಲೋರ್ವ ವಧು ತನ್ನ ಮಾವನ ಮನೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾಳೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಹೆಲಿಕಾಪ್ಟರ್ ಮೂಲಕ ಮಾವನ ಮನೆಗೆ ಬಂದ ಸೊಸೆ!
ಹೆಲಿಕಾಪ್ಟರ್ ಮೂಲಕ ಮಾವನ ಮನೆಗೆ ಬಂದ ಸೊಸೆ!
author img

By

Published : Jul 6, 2021, 7:06 AM IST

ಬರೇಲಿ(ಉತ್ತರಪ್ರದೇಶ): ಜಿಲ್ಲೆಯ ಹಳ್ಳಿಯೊಂದರಲ್ಲಿ ವಧು ತನ್ನ ಮಾವನ ಮನೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾಳೆ. ಬಿಜೆಪಿಯ ನಗರ ಉಪಾಧ್ಯಕ್ಷ ಬಾದಾನ್​ ವೆದ್ರಾಮ್ ಲೋಧಿಯವರ ಪುತ್ರಿ ಈ ರೀತಿ ಕಾಪ್ಟರ್​ನಲ್ಲಿ ಬಂದು ಗಮನ ಸೆಳೆದಿರುವ ವಧು.

ಹೆಲಿಕಾಪ್ಟರ್ ಮೂಲಕ ಮಾವನ ಮನೆಗೆ ಬಂದ ಸೊಸೆ!

ಅಯೋನ್ಲಾ ಪಟ್ಟಣದ ಆಲಂಪುರ್ ಕೋಟ್ ಗ್ರಾಮದ ಅಧ್ಯಕ್ಷರ ಹುದ್ದೆಗೆ ವಧು ವರ್ಮಾ ಸ್ಪರ್ಧಿಸಬೇಕಿತ್ತು. ನಾಮಪತ್ರ ಸಲ್ಲಿಸಬೇಕೆಂದರೆ, ಅವರು ಆ ಗ್ರಾಮದ ಮತದಾರರಾಗಿರಬೇಕಿತ್ತು. ಆದ್ದರಿಂದ 2020 ರ ಡಿಸೆಂಬರ್​ನಲ್ಲಿ ಒಮೇಂದ್ರ ಸಿಂಗ್​​ರನ್ನು ಕೋರ್ಟ್​ನಲ್ಲಿ ವಿವಾಹವಾಗಿದ್ದರು.

ಉಮೇದುವಾರಿಕೆ ಸಲ್ಲಿಕೆ ಬಳಿಕ ವರ್ಮಾ, ಅವರ ತವರೂರು ಬಡಾನ್​ಗೆ ಮರಳಿದ್ದರು. ಚುನಾವಣಾ ಪ್ರಚಾರವನ್ನು ಮಾಡಲಿಲ್ಲ, ಪತಿ ಒಮೇಂದ್ರ ಸಿಂಗ್​ ಕ್ಯಾನ್ವಸ್ ಮಾಡಿದ್ದರಿಂದ ಅವರು ಭರ್ಜರಿ ಜಯಭೇರಿ ಬಾರಿಸಿದರು.

ಇದನ್ನೂ ಓದಿ:ಭೀಕರ ಅಪಘಾತ: ಹೊತ್ತಿ ಉರಿದ ಲಾರಿಗಳು, ಚಾಲಕ ಸಜೀವ ದಹನ

ವರ್ಮಾ ಅವರ ಮಾವ ಶ್ರೀಪಾಲ್ ಲೋಧಿಯವರು ಬ್ಲಾಕ್​ನ ಮಾಜಿ ಮುಖ್ಯಸ್ಥರಾಗಿದ್ದು, ಅತ್ತೆ ಎರಡು ಬಾರಿ ಗ್ರಾಮದ ಅಧ್ಯಕ್ಷರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.