ಪಾಟ್ನಾ: ಕೊರೊನಾ ಸಾಂಕ್ರಾಮಿಕ ರೋಗವು ಎಲ್ಲ ಕ್ಷೇತ್ರಗಳಲ್ಲೂ ಪರಿಣಾಮ ಬೀರಿದ್ದು, ವಿವಾಹ ಸಮಾರಂಭದ ಮೇಲೂ ಪ್ರಭಾವ ಬೀರಿದೆ. ಇದು ವಿವಾಹ ಸಮಾರಂಭಗಳ ಶೈಲಿಯನ್ನು ಬದಲಾಯಿಸಿದೆ. ಇನ್ನು ಇಲ್ಲಿನ ಬಿಬ್ಗಂಜ್ನಲ್ಲಿ ವಿವಾಹ ಸಮಾರಂಭ ನಡೆದಿದ್ದು, ಈ ವೇಳೆ, ವಧು-ವರ ಸಾಮಾಜಿಕ ಅಂತರ ಕಾಯ್ದುಕೊಂಡು ಹಾರ ಬದಲಾಯಿಸಿಕೊಂಡಿದ್ದಾರೆ.

ರಾಹುಲ್ ಮತ್ತು ಭಾರತಿ ಎಂಬುವರ ಮದುವೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲದೆ ವಧು ಮತ್ತು ವರನ ಕಡೆಯವರು ಸಾಮಾಜಿಕ ಅಂತರದ ಜೊತೆಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವಧು - ವರರು ಮಾಸ್ಕ್ ಬಳಕೆ ಮಾಡಿ ಕೋಲಿನ ಸಹಾಯದಿಂದ ಹಾರ ಬದಲಾಯಿಸಿಕೊಂಡರು. ಇನ್ನು ಊಟದ ಕೌಂಟರ್ ಬಳಿಯೂ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬಂದ ಅತಿಥಿಗಳು ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಹೊಡೆದೋಡಿಸಲು ಸಾತ್ ನೀಡಿದರು.