ETV Bharat / bharat

ಮದುವೆ ಮಂಟಪದಲ್ಲೂ ರಕ್ತದಾನ: ಇಂಡಿಯಾ ಬುಕ್​ ಆಫ್​ ರೆಕಾರ್ಡ್ ಸೇರಿದ ನವಜೋಡಿ

ಮದುವೆ ಸಮಾರಂಭದಲ್ಲಿ ವಿಭಿನ್ನ ಸಾಮಾಜಮುಖಿ ಕಾರ್ಯ ಮಾಡುವುದು ಸರ್ವೆ ಸಾಮಾನ್ಯ ಆದರೆ, ಇಲ್ಲೊಂದು ಜೋಡಿ ರಕ್ತದಾನ ಮಾಡುವ ಮೂಲಕ ಇಂಡಿಯಾ ಬುಕ್​ ಆಫ್​ ರೆಕಾರ್ಡ್ ಸೇರಿದ್ದಾರೆ.

ರಕ್ತದಾನ ಮಾಡಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ ಸೇರಿದ ಜೋಡಿ

author img

By

Published : Aug 28, 2021, 8:09 PM IST

ನರಸಿಂಗಪುರ(ಮಧ್ಯಪ್ರದೇಶ) : ಕಳೆದ ಒಂದು ತಿಂಗಳ ಹಿಂದೆ ನಡೆದ ಮದುವೆ ಸಮಾರಂಭವೊಂದರಲ್ಲಿ ವಧು-ವರ ರಕ್ತದಾನ ಮಾಡಿದ್ದು, ಅವರ ಈ ನಡೆ ಇಂಡಿಯಾ ಬುಕ್​ ಆಫ್​ ರೆಕಾರ್ಡ್​​ಗೆ ಸೇರಿದೆ.

ರಕ್ತದಾನ ಮಾಡಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ ಸೇರಿದ ಜೋಡಿ

ಜಿಲ್ಲೆಯ ತಹಸಿಲ್​ ಗದರ್ವಾರಾದಲ್ಲಿ ಒಂದು ತಿಂಗಳ ಹಿಂದೆ ಆಶಿಶ್​ ರೈ ಮತ್ತು ಖುಷ್ಬೂ ರೈ ಮದುವೆಯಾದರು. ಈ ಸಮಯದಲ್ಲಿ ಇಬ್ಬರೂ ರಕ್ತದಾನ ಮಾಡಿದ್ದು, ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಆಶಿಶ್​ ರೈ ಕಳೆದ 12 ವರ್ಷಗಳಿಂದ ಶ್ರೀ ಸಾಯಿ ಶ್ರದ್ಧಾ ಸೇವಾ ಸಮಿತಿಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದು, ಈವರೆಗೆ 18 ಬಾರಿ ರಕ್ತದಾನ ಮಾಡಿದ್ದಾರೆ. ಮದುವೆಯ ಶುಭ ಸಮಾರಂಭದಲ್ಲೂ ಆಶಿಶ್ ಮಾತ್ರವಲ್ಲದೆ, ಆತನ ಕೈ ಹಿಡಿಯುವ ಯುವತಿಯೂ ರಕ್ತದಾನ ಮಾಡಿದ್ದಾಳೆ.

ಕಳೆದ ತಿಂಗಳು ರಕ್ತದಾನ ಮಾಡಿ, 6 ಗಂಟೆ 17 ನಿಮಿಷಗಳವರೆಗೆ ಭಗವದ್ಗೀತೆ ಓದಿದ ಬಳಿಕ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.

ಇದನ್ನೂ ಓದಿ: ಕ್ರೂರಿ ಗಂಡ: ಪತ್ನಿಯ ಶೀಲ ಶಂಕಿಸಿ ಖಾಸಗಿ ಭಾಗಕ್ಕೆ ಹೊಲಿಗೆ ಹಾಕಿದ!

ನಮ್ಮ ಈ ಕಾರ್ಯವು ಇಷ್ಟೊಂದು ಜನಪ್ರಿಯವಾಗುತ್ತೆ ಎಂದು ತಿಳಿದಿರಲಿಲ್ಲ ಎಂದು ನವದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.