ETV Bharat / bharat

ಲಂಚ ಪ್ರಕರಣ: ಜೂನ್ 23 ರವರೆಗೆ ವಾಂಖೆಡೆಗೆ ಮಧ್ಯಂತರ ರಕ್ಷಣೆ ವಿಸ್ತರಿಸಿದ ಬಾಂಬೆ ಹೈಕೋರ್ಟ್​ - ನಟ ಶಾರುಖ್ ಖಾನ್

ಕೋರ್ಡೆಲಿಯಾ ಐಷಾರಾಮಿ ಕ್ರೂಸ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸದಿರಲು ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

Sameer Wankhede
ಸಮೀರ್ ವಾಂಖೆಡೆ
author img

By

Published : Jun 8, 2023, 5:19 PM IST

ಮುಂಬೈ (ಮಹಾರಾಷ್ಟ್ರ): ಸಿಬಿಐನ ಸುಲಿಗೆ ಮತ್ತು ಲಂಚದ ಪ್ರಕರಣದಲ್ಲಿ ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಬಾಂಬೆ ಹೈಕೋರ್ಟ್​ ಜೂನ್​ 23ರ ವರೆಗೆ ವಿಸ್ತರಿಸಿ ಆದೇಶಿಸಿದೆ. ಹೈ ಪ್ರೊಫೈಲ್​ ಡ್ರಗ್ಸ್​ ಆನ್​ ಕ್ರೂಸ್​ ಪ್ರಕರಣದಲ್ಲಿ ನಟ ಶಾರುಖ್​ ಖಾನ್​ ಅವರ ಪುತ್ರ ಆರ್ಯನ್​ ಖಾನ್​ ಅವರನ್ನು ಬಿಡುಗಡೆ ಮಾಡುವ ಬದಲಾಗಿ, ನಟ ಶಾರುಖ್​ ಖಾನ್​ ಅವರ ಬಳಿ ಸಮೀರ್​ ವಾಂಖೆಡೆ ಹಾಗೂ ಇತರ ನಾಲ್ವರು ಆರೋಪಿಗಳು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಸ್ ಜಿ ಡಿಗೆ ಅವರಿದ್ದ ವಿಭಾಗೀಯ ಪೀಠ ಈ ಪ್ರಕರಣ ವಿಚಾರಣೆ ನಡೆಸಿದ್ದು, ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ವಾಂಖೆಡೆ ಸಲ್ಲಿಸಿರುವ ಮನವಿಯನ್ನು ಜೂನ್ 23ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ಹಿಂದೆ ನ್ಯಾಯಾಲಯವು ನಿರ್ದೇಶಿಸಿದಂತೆ ಅವರ ಕಕ್ಷಿದಾರ ಮತ್ತು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯು ವಿಚಾರಣೆಗಾಗಿ ಸಿಬಿಐ ಮುಂದೆ ಹಾಜರಾಗುತ್ತಿದ್ದಾರೆ ಎಂದು ವಾಂಖೆಡೆ ಅವರ ವಕೀಲ ಅಬದ್ ಪೋಂಡಾ ವಿಭಾಗೀಯ ಪೀಠಕ್ಕೆ ತಿಳಿಸಿದರು. ಇದುವರೆಗೆ ವಾಂಖೆಡೆ ಸಿಬಿಐ ಮುಂದೆ ಏಳು ಬಾರಿ ವಿಚಾರಣೆಗೆ ಹಾಜರಾಗಿದ್ದು, ಸಹಕಾರ ನೀಡುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ಸಿಬಿಐ ಪರ ವಕೀಲ ಕುಲದೀಪ್ ಪಾಟೀಲ್ ವಾದ ಮಂಡಿಸಿ, ಪ್ರಕರಣದ ತನಿಖೆ ನಿರ್ಣಾಯಕ ಹಂತದಲ್ಲಿದೆ ಮತ್ತು ವಿಚಾರಣೆಯನ್ನು ರದ್ದುಗೊಳಿಸುವಂತೆ ಐಆರ್‌ಎಸ್ ಅಧಿಕಾರಿಯ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ. ಎರಡೂ ಕಡೆಯ ವಾದವನ್ನು ಆಲಿಸಿದ ಪೀಠವು ಜೂನ್ 23 ರಂದು ಹೆಚ್ಚಿನ ವಿಚಾರಣೆಗೆ ಅರ್ಜಿಯನ್ನು ಮುಂದೂಡಿತು ಮತ್ತು ಮಧ್ಯಂತರ ಪರಿಹಾರವನ್ನು ವಿಸ್ತರಿಸಿ ಆದೇಶ ನೀಡಿದೆ.

ತನ್ನ ಮೇಲಿರುವ ಸುಲಿಗೆ ಮತ್ತು ಲಂಚದ ಆರೋಪ ಹೊತ್ತಿರುವ ಸಿಬಿಐ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವಂತೆ ಹಾಗೂ ಮಧ್ಯಂತರ ರಕ್ಷಣೆಯನ್ನು ನೀಡುವಂತೆ ಸಮೀರ್​ ವಾಂಖೆಡೆ ಕಳೆದ ತಿಂಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಹೈಕೋರ್ಟ್‌ನ ರಜಾಕಾಲದ ಪೀಠ ಜೂನ್ 8 ರವರೆಗೆ ವಾಂಖೆಡೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು ಮತ್ತು ತನಿಖೆಗೆ ಸಹಕರಿಸುವಂತೆ ಅವರಿಗೆ ಸೂಚಿಸಿತ್ತು. ಸಿಬಿಐ ಕಳೆದ ವಾರ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ವಾಂಖೆಡೆ ವಿರುದ್ಧ ಪ್ರಾಥಮಿಕ ಪ್ರಕರಣವಿದ್ದು, ರಕ್ಷಣೆಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿತ್ತು.

ವಾಂಖೆಡೆ ಮತ್ತು ಪ್ರಕರಣದ ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಸುಲಿಗೆ ಬೆದರಿಕೆಗಳು ಮತ್ತು ಲಂಚಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರ್ಯನ್ ಖಾನ್ ಮತ್ತು ಇತರ ಕೆಲವರನ್ನು ಅಕ್ಟೋಬರ್ 2021 ರಲ್ಲಿ ಮಾದಕವಸ್ತುಗಳ ಸ್ವಾಧೀನ, ಸೇವನೆ ಮತ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿತ್ತು. ಮೂರು ವಾರಗಳ ಕಾಲ ಜೈಲಿನಲ್ಲಿದ್ದ ಆರ್ಯನ್ ಖಾನ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ನಂತರದಲ್ಲಿ NCB ತನ್ನ ಚಾರ್ಜ್‌ಶೀಟ್ ಸಲ್ಲಿಸಿದ್ದು, ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಪ್ರಕರಣದಲ್ಲಿ ಆರ್ಯನ್‌ ಖಾನ್​ ಆರೋಪಿ ಎಂದು ಹೇಳಿರಲಿಲ್ಲ. ಮಾದಕ ದ್ರವ್ಯ ನಿಗ್ರಹ ಸಂಸ್ಥೆಯು ಪ್ರಕರಣದ ಬಗ್ಗೆ ಮತ್ತು ತನ್ನದೇ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ಇದನ್ನೂ ಓದಿ: ಆರ್ಯನ್‌ ಖಾನ್ ಡ್ರಗ್‌ ಪ್ರಕರಣ: ಸಿಬಿಐ ಮುಂದೆ ಹಾಜರಾಗುವಾಗ ಸತ್ಯಮೇವ ಜಯತೆ ಎಂದ ಸಮೀರ್ ವಾಂಖೆಡೆ... 5 ಗಂಟೆ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.