ಮೊರಾದಾಬಾದ್ : ಅಚ್ಚರಿ ಎನಿಸಿದರೂ ಇದು ಸತ್ಯ.. ಉತ್ತರಪ್ರದೇಶದ ಮೊರಾದಾಬಾದ್(Moradabad)ನಲ್ಲಿ ಅಪಘಾತವೊಂದರಲ್ಲಿ ಸತ್ತಿದ್ದ ವ್ಯಕ್ತಿ 7 ಗಂಟೆಗಳ ನಂತರ ಜೀವಂತ(Man Alive after 7 hours) ವಾಗಿದ್ದಾನೆ.
ಮಜೋಲಾ ಪೊಲೀಸ್ ಠಾಣೆ(Majola Police Station) ವ್ಯಾಪ್ತಿಯ ಶ್ರೀಕೇಶ್ ಎಂಬುವರು ತಡರಾತ್ರಿ ಹಾಲು ತರಲು ಹೋಗುತ್ತಿದ್ದಾಗ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕುಟುಂಬಸ್ಥರು ಆತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಶ್ರೀಕೇಶ್ ಮೃತಪಟ್ಟಿದ್ದಾನೆ ಎಂದು ಘೋಷಿಸಿ ಶವಾಗಾರದಲ್ಲಿ ಇರಿಸಿದ್ದಾರೆ.
ಇಂದು ಬೆಳಗ್ಗೆ ಪೊಲೀಸರು ಮೃತದೇಹದ ಪಂಚನಾಮೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಆಗ ಮೃತದೇಹದ ಮೇಲಿನ ಗಾಯದ ಗುರುತುಗಳನ್ನು ನೋಡಿ ವ್ಯಕ್ತಿ ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ನಂತರ ಶ್ರೀಕೇಶ್ ದೇಹವನ್ನು ತಪಾಸಣೆ ನಡೆಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದಾದ ನಂತರ ಅವರು ಜೀವಂತವಾಗಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಸಂಸಾರದಲ್ಲಿ ಸಂತಸದ ಅಲೆ ಎದ್ದಿದೆ..
ಶ್ರೀಕೇಶ್ ನಿಧನದ ಸುದ್ದಿಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿತ್ತು. ಅವರ ಮೃತದೇಹದ ಪಂಚನಾಮೆಯ ನಂತರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಕಾಯುತ್ತಿದ್ದರು. ಆಗ ಶ್ರೀಕೇಶ್ ಸತ್ತಿಲ್ಲ, ಬದುಕಿದ್ದಾನೆ ಎಂದು ಮನೆಯವರಿಗೆ ತಿಳಿದಿದೆ. ಇದರಿಂದ ಅವರೆಲ್ಲರೂ ಸಂತಸಗೊಂಡಿದ್ದಾರೆ.
ಜಿಲ್ಲಾಸ್ಪತ್ರೆಯ ಸಿಎಂಎಸ್ ವೈದ್ಯ ಶಿವಸಿಂಗ್ ಮಾತನಾಡಿ, ಶ್ರೀಕೇಶ್ ಎಂಬುವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಡಾ. ಮನೋಜ್ ಯಾದವ್ ಅವರು ಸಂಪೂರ್ಣ ತಪಾಸಣೆ ನಡೆಸಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ತಡರಾತ್ರಿ ಶವಾಗಾರದಲ್ಲಿ ಇರಿಸಲಾಗಿತ್ತು. ಇದೀಗ ಅವರು ಬದುಕುಳಿದಿದ್ದಾರೆ ಎಂದರು.
ಓದಿ: ACB Raid : ಬಿಡಿಎ ಕಚೇರಿ ಮೇಲೆ 40ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ, ಕಡತಗಳ ಪರಿಶೀಲನೆ