ಚಂಡೀಗಢ : ಇಲ್ಲೋರ್ವ ಆಸಾಮಿ ವೇಗವಾಗಿ ಸಂಚರಿಸುತ್ತಿದ್ದ ಕಸದ ವಾಹನದ ಮೇಲೆಗೆ ಹುಚ್ಚಾಟದ ಭಾಗವಾಗಿ ದೇಹದಾರ್ಢ್ಯ ಪ್ರದರ್ಶನ ಮಾಡಿ ಕೊನೆಗೆ ಕೆಳಗೆ ಬಿದ್ದು ಅನಾಹುತ ಮಾಡಿಕೊಂಡಿದ್ದಾನೆ.
ಚಂಡೀಗಢ ಸೇರಿದಂತೆ ಹಲವಾರು ಭಾಗದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಕಸ ಸಂಗ್ರಹಿಸುವವ ವೇಗವಾಗಿ ಸಾಗುತ್ತಿರುವ ಕಸದ ಗಾಡಿಯ ಮೇಲೆ ನಿಂತು ಪುಷ್-ಅಪ್ ಮಾಡುತ್ತಿದ್ದಾನೆ. ಇದಾದ ನಂತರ ಆತ ಧೈರ್ಯದಿಂದ ಕಾರಿನ ಮೇಲೆ ನಿಂತಿದ್ದಾನೆ. ಇದಾದ ಮೇಲೆ ಸಮತೋಲನವನ್ನು ಕಳೆದುಕೊಂಡು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.
ರಾತ್ರಿ ವೇಳೆ ಈ ಘಟನೆ ಜರುಗಿದೆ. ಕಸ ಸಂಗ್ರಹಿಸುವ ವಾಹನದ ಹಿಂದೆ ಕಾರಿನಲ್ಲಿ ಬರುತ್ತಿದ್ದವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ಕಸದ ವಾಹನ ಯಾವ ಮಹಾನಗರ ಪಾಲಿಕೆಗೆ ಸೇರಿದ್ದು, ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಡಿಯೋದಲ್ಲಿ ಶಕ್ತಿಮಾನ್ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಸೇರಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಕ್ರೈಂ ಧಾರಾವಾಹಿಯಿಂದ ಪ್ರೇರಣೆ: ಬಾಲಕನ ಕಿಡ್ನಾಪ್ ಮಾಡಿ ಕೊಲೆಗೈದ 10ನೇ ಕ್ಲಾಸ್ ವಿದ್ಯಾರ್ಥಿಗಳು!