ಹೈದರಾಬಾದ್: ಜುಬಿಲಿ ಹಿಲ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ನಂತರ ನಗರದಲ್ಲಿ ದಿನದಿಂದ ದಿನಕ್ಕೆ ಇಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಆದರೆ, ಇಂತಹ ಅಪರಾಧಗಳು ತಡವಾಗಿ ಹೊರಬರುತ್ತಿರುವುದು ಗಮನಾರ್ಹ. ಇತ್ತೀಚೆಗಷ್ಟೇ ಇಂತಹದ್ದೊಂದು ಘಟನೆ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನಲ್ಲಕುಂಟದ ನಿವಾಸಿ ಅಮಿತ್ ವರ್ಧನ್ (19) 15 ವರ್ಷದ ವಿದ್ಯಾರ್ಥಿ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ.
ಬಾಲಕಿ ಇಲ್ಲಿನ ಕಾಲೇಜೊಂದರಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದಾಳೆ. ಕಳೆದ ವರ್ಷ ಇದೇ ಕಾಲೇಜಿನ ಸಹಪಾಠಿ ಅಮಿತ್ ವರ್ದನ್ ಎಂಬಾತ ಬಾಲಕಿಗೆ ಪರಿಚಯವಾಗಿದ್ದ. ಹುಡುಗಿಯ ನಂಬರ್ ಪಡೆದು ಆಗಾಗ ಕರೆ ಮಾಡಿ ತನ್ನ ಪ್ರಪೋಸಲ್ ಸ್ವೀಕರಿಸುವಂತೆ ಹೇಳುತ್ತಿದ್ದ. ಆತನ ಮಾತನ್ನು ನಂಬಿದ ಹುಡುಗಿ 2022ರ ಜನವರಿಯಲ್ಲಿ ವರ್ಧನ್ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ಆ ದಿನದಿಂದ ಫೋನ್ನಲ್ಲಿ ಇಬ್ಬರ ಪ್ರೀತಿ ಮಾತುಗಳು ಜೋರಾಗಿಯೇ ನಡೆದವು.
ಓದಿ: ಹೈದರಾಬಾದ್ನಲ್ಲಿ ಮತ್ತೊಂದು ನೀಚ ಕೃತ್ಯ: 9ರ ಬಾಲೆ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ
ಇವರಿಬ್ಬರ ಪ್ರೇಮ ಪ್ರಕರಣ ಹೀಗೆ ಸಾಗುತ್ತಿರುವಾಗಲೇ.. ಫೆಬ್ರವರಿಯ ಒಂದು ದಿನ ಅವರ ಮನೆಗೆ ಹೋದ ವರ್ಧನ್ ಆಕೆಗೆ ಮದುವೆಯಾಗುವ ಆಸೆ ತೋರಿಸಿ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲ ಏಕಾಂತದ ದೃಶ್ಯಗಳನ್ನು ಸಹ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದನು.
ಬಳಿಕ ವರ್ಧನ್ ತನ್ನ ನಿಜ ಬಣ್ಣವನ್ನು ಬಯಲು ಮಾಡಿದ್ದ, ಸೆರೆ ಹಿಡಿದ ದೃಶ್ಯಗಳನ್ನು ತೋರಿಸಿ ಬಾಲಕಿಯನ್ನು ಹೆದರಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ವಿಷಯ ಹೊರಗೆ ಬಂದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದಾನೆ.
ಇದರಿಂದ ನೊಂದ ಸಂತ್ರಸ್ತೆ ಮೀರ್‌ಪೇಟ್ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಮಿತ್ ವರ್ಧನ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.