ETV Bharat / bharat

ಕೋತಿಗಳ ದಾಳಿ ತಪ್ಪಿಸಲು ಹೋಗಿ ಕಟ್ಟಡದಿಂದ ಬಿದ್ದು ಬಾಲಕ ಸಾವು - ಕಟ್ಟಡದಿಂದ ಬಿದ್ದು ಬಾಲಕ ಸಾವು

ಮಂಗಗಳ ಭಯದಿಂದ ಓಡಿ ಹೋಗುವಾಗ ಕಟ್ಟಡದಿಂದ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Boy died in Monkeys Attack
ಸಾಂದರ್ಭಿಕ ಚಿತ್ರ
author img

By

Published : Aug 22, 2022, 1:21 PM IST

ಮೇದಕ್(ತೆಲಂಗಾಣ): ಮಣಿಕಂಠ ಸಾಯಿ ಎಂಬ 9 ವರ್ಷದ ಮಾನಸಿಕ ಅಸ್ವಸ್ಥ ಬಾಲಕನನ್ನು ಮಂಗಗಳು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಈ ದುರ್ಘಟನೆ ಮೇದಕ್ ಜಿಲ್ಲೆಯ ನರಸಾಪುರದಲ್ಲಿ ನಡೆದಿದೆ.

Boy died in Monkeys Attack
ಮಣಿಕಂಠ ಸಾಯಿ -ಮೃತ ಬಾಲಕ

ಶಿವಾಲಯ ನಗರ ನಿವಾಸಿ ಕಸ್ತೂರಿ ಯಶೋದಾ ಎಂಬುವವರು ಕಟ್ಟಡ ಕಾರ್ಮಿಕರಾಗಿ ದುಡಿದು ಕುಟುಂಬವನ್ನು ಪೋಷಿಸುತ್ತಿದ್ದಾರೆ. ಇವರ ಮಗ(ಮಣಿಕಂಠ ಸಾಯಿ) ಮಾನಸಿಕ ಅಸ್ವಸ್ಥನಾಗಿದ್ದ. ಹಾಗಾಗಿ ತಾಯಿ ಕೆಲಸಕ್ಕೆ ಹೋದಾಗಲೆಲ್ಲ ಆತನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಶನಿವಾರವೂ ಮನೆ ಕಟ್ಟಲು ನರಸಾಪುರಕ್ಕೆ ತೆರಳಿದ್ದಾರೆ.

ಅವರು ಮೊದಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಮಂಗಗಳ ಗುಂಪು ಏಕಾಏಕಿ ದಾಳಿ ನಡೆಸಿವೆ. ಇದರಿಂದ ಗಾಬರಿಗೊಂಡ ಬಾಲಕ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ಬಾಲಕ ಭಾನುವಾರ(ನಿನ್ನೆ) ಮಧ್ಯರಾತ್ರಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಮಕ್ಕಳ ದಾರುಣ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.