ಫಿಲಿಬಿತ್ (ಉತ್ತರ ಪ್ರದೇಶ) : ರಾಜ್ಯದ ದುಧ್ವಾದಲ್ಲಿ ವ್ಯಕ್ತಿವೋರ್ವನನ್ನು ಮೊಸಳೆ ತಿಂದು ಹಾಕಿದ ಬೆನ್ನಲ್ಲೇ, ಅಂತಹದ್ದೇ ಘಟನೆ ಫಿಲಿಬಿತ್ ಜಿಲ್ಲೆಯಲ್ಲಿ ಮರುಕಳಿಸಿದೆ.
ನಾಪತ್ತೆಯಾಗಿದ್ದ 15 ವರ್ಷದ ಬಾಲಕನೋರ್ವನ ಅರ್ಧ ದೇಹ ಜಿಲ್ಲೆಯ ಖಾಖರಾ ನದಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಸ್ಥಿತಿ ನೋಡಿದೆ, ಇದು ಮೊಸಳೆ ತಿಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಮೃತ ಬಾಲಕನನ್ನು ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಸೆಮಾರ್ಖೆಡಾ ಗ್ರಾಮದ ಓಂ ಪ್ರಕಾಶ್ ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಈತ ತನ್ನ ಎಮ್ಮೆಯ ಮೈತೊಳೆಯಲು ಹೋದಾಗ ಮೊಸಳೆ ನೀರಿನಾಳಕ್ಕೆ ಎಳೆದುಕೊಂಡಿದೆ.
ಓದಿ : ಬೈಕ್ ಸ್ಕಿಡ್ ಆಗಿ ಬಿದ್ದವರ ಮೇಲೆ ಹರಿದ ಲಾರಿ.. ಹಾರಿಹೋಯ್ತು ಮೂವರ ಪ್ರಾಣಪಕ್ಷಿ!
ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ ಬಳಿಕ ಮೊಸಳೆಗಳು ಇರುವಂತಹ ಜಾಗವನ್ನು ಗುರುತಿಸಿ, ಅಲ್ಲಿ ಎಚ್ಚರಿಕೆ ಬೋರ್ಡ್ಗಳನ್ನು ಅಳವಡಿಸುತ್ತೇವೆ. ಜನರನ್ನು ಆ ಜಾಗದಿಂದ ದೂರು ಇರುವಂತೆ ಸೂಚಿಸುತ್ತೇವೆ. ಅರಣ್ಯ ಇಲಾಖೆ ಈ ಸಂಬಂಧ ಜಾಗೃತಿ ಕಾರ್ಯಕ್ರಮ ನಡೆಸಲಿದೆ ಎಂದು ಫಿಲಿಬಿತ್ ಎಸ್ಪಿ ಕ್ರಿತಿಕ್ ಕುಮಾರ್ ತಿಳಿಸಿದ್ದಾರೆ.