ETV Bharat / bharat

ಪ್ರೇಯಸಿಯ ಮದುವೆಯಿಂದ ಬಂದು ಆತ್ಮಹತ್ಯೆಗೆ ಶರಣಾದ ಯುವಕ - etv bharat kannada

ಛತ್ತೀಸ್​ಗಢದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

boy-committed-suicide-in-ambikapur-after-writing-message-for-lover
ಪ್ರಿಯತಮೆ ಸಂತೋಷವಾಗಿರು ಎಂದು ಗೋಡೆ ಮೇಲೆ ಬರೆದು ಆತ್ಮಹತ್ಯೆಗೆ ಶರಣಾದ ಯುವಕ..
author img

By

Published : May 5, 2023, 9:50 PM IST

ಅಂಬಿಕಾಪುರ(ಛತ್ತೀಸ್​ಗಢ): ಇಲ್ಲಿನ ಸುಭಾಷ್ ನಗರ ಬಡಾವಣೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೂ ಮುನ್ನ ಇದ್ದಿಲಿನಿಂದ ಗೋಡೆಯ ಮೇಲೆ ಪ್ರಿಯತಮೆ ಈಗ ನಾನು ಹೋಗುತ್ತಿದ್ದೇನೆ, ನಾನು ಎಂದಿಗೂ ಹಿಂತಿರುಗುವುದಿಲ್ಲ, ನೀನು ಸಂತೋಷವಾಗಿರು ಎಂದು ಬರೆದಿದ್ದಾನೆ. ಮೇಲ್ನೋಟಕ್ಕೆ ಯುಕನ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸದ್ದಾರೆ.

ಪಂಕಜ್ ಟೊಪ್ಪೋ ಆತ್ಮಹತ್ಯೆಗೆ ಶರಣಾದ ಯುವಕ. ಯುವಕ ಜಶ್‌ಪುರ ಜಿಲ್ಲೆಯ ಬಗೀಚಾ ಬ್ಲಾಕ್‌ನ ಭಗವತ್‌ಪುರ ನಿವಾಸಿಯಾಗಿದ್ದಾರೆ. ಯುವಕ ಕೆಲ ದಿನಗಳ ಹಿಂದೆ ತಮ್ಮ ಗ್ರಾಮದಿಂದ ಶಂಕರಗಢಕ್ಕೆ ಕೆಲಸಕ್ಕಾಗಿ ತೆರಳಿದ್ದ. ತನ್ನ ಸ್ನೇಹಿತನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದೆ ಪಂಕಜ್ ಟೊಪ್ಪೊ ತನ್ನ ಪ್ರೇಯಸಿ ಮದುವೆಗೆಂದು ಗ್ರಾಮಕ್ಕೆ ತೆರಳಿದ್ದ. ನಂತರ ಶಂಕರಗಢಕ್ಕೆ ಹಿಂತಿರುಗಿದ್ದ, ಈ ವೇಳೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕರೆ ಮಾಡಿದರೂ ಬಾಗಿಲು ತೆರೆಯದಿದ್ದಾಗ, ಪಂಕಜ್​ನ ಸ್ನೇಹಿತ ಛಾವಣಿಯ ಮೂಲಕ ಒಳಗೆ ಇಣುಕಿ ನೋಡಿದಾಗ ಆತ್ಮಹತ್ಯೆಗೆ ಶರಣಾಗಿದ್ದು ಬೆಳಕಿಗೆ ಬಂದಿದೆ. ಪಂಕಜ್​ನ ಮೃತದೇಹ ನೋಡಿದ ಸ್ನೇಹಿತ ಕೊಡಲೇ ಗಾಂಧಿನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ದಂಪತಿ ನಡುವೆ ಜಗಳ, ಪೆಟ್ರೋಲ್ ಸುರಿದು ಬೆಂಕಿ; ಪತಿ ಸಾವು, ಪತ್ನಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.