ETV Bharat / bharat

ಉಚಿತ ಬಸ್​ ಸೇವೆಗಾಗಿ ಹುಡುಗಿಯಾದ ಯುವಕ.. ಕಂಡಕ್ಟರ್​ ಕೈಗೆ ಸಿಕ್ಕಿಬಿದ್ದಿದ್ದು ಹೀಗೆ.. ವಿಡಿಯೋ! - ದೆಹಲಿಯಲ್ಲಿ ಮಹಿಳೆಯರಿಗೆ ಬಸ್​ ಸೇವೆ ಉಚಿತ

ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸುವ ಸಂಬಂಧ ಯುವತಿಯ ವೇಷದಲ್ಲಿ ಬಸ್​ಗೆ ಏರಿದ್ದಾನೆ. ಆದರೆ ಕಂಡಕ್ಟರ್​ ಕೈಗೆ ಸಿಕ್ಕ ಅವನ ಫಜೀತಿ ಏನಾಯ್ತು ಎಂಬುದನ್ನು ನೀವೇ ನೋಡಿ.

free bus service delhi  delhi bus service  man becomes women to travel in bus  delhi dtc free bus  ದೆಹಲಿಯಲ್ಲಿ ಉಚಿತ ಬಸ್​ ಸೇವೆಗಾಗಿ ಹುಡುಗಿಯಾದ ಯುವಕ  ನವದೆಹಲಿಯಲ್ಲಿ ಕಂಡಕ್ಟರ್​ ಕೈಗೆ ಸಿಕ್ಕಿಬಿದ್ದ ಹುಡುಗಿ ವೇಷದ ಯುವಕ  ದೆಹಲಿಯಲ್ಲಿ ಮಹಿಳೆಯರಿಗೆ ಬಸ್​ ಸೇವೆ ಉಚಿತ  ದೆಹಲಿ ಸುದ್ದಿ
ಉಚಿತ ಬಸ್​ ಸೇವೆಗಾಗಿ ಹುಡುಗಿಯಾದ ಯುವಕ
author img

By

Published : Mar 24, 2022, 10:34 AM IST

ನವದೆಹಲಿ: ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ಸರ್ಕಾರ ಮಹಿಳೆಯರಿಗೆ ಉಚಿತ ಬಸ್​ ಸೇವೆ ಆರಂಭಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಉಚಿತ ಬಸ್​ ಸೇವೆ ಆನಂದಿಸಲು ಯುವಕನೊಬ್ಬ ತನ್ನ ಎಲ್ಲ ಮಿತಿಗಳನ್ನು ದಾಟಿದ್ದಾನೆ. ಹುಡುಗಿಯಂತೆ ರೆಡಿಯಾದ ಯುವಕ ಬಸ್​ವೊಂದಕ್ಕೆ ಹತ್ತಿ ಪ್ರಯಾಣಿಸುತ್ತಿದ್ದನು. ಆದರೆ ಆತ ಕಂಡಕ್ಟರ್​ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಉಚಿತ ಬಸ್​ ಸೇವೆಗಾಗಿ ಹುಡುಗಿಯಾದ ಯುವಕ

ಹೌದು, ಉಚಿತ ಬಸ್​ ಸೌಲಭ್ಯ ಆನಂದಿಸಲು ಯುವಕನೊಬ್ಬ ಹುಡುಗಿಯಂತೆ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಸ್​​​​ನಲ್ಲಿ ಪ್ರಯಾಣಿಸುತ್ತಿದ್ದ. ಬಸ್​ನಲ್ಲಿ ಬಾಲಕಿಯಂತೆ ಕಾಣುತ್ತಿದ್ದ ಯುವಕನ ವರ್ತನೆ ಬದಲಾಗಿದೆ. ಆತನ ವರ್ತನೆ ಬಗ್ಗೆ ಅನುಮಾನಗೊಂಡ ಕಂಡಕ್ಟರ್ ಯುವಕನಿಗೆ ಮಾಸ್ಕ್ ತೆಗೆಯುವಂತೆ ಹೇಳಿದ್ದಾನೆ. ಯುವಕ ಮಾಸ್ಕ್ ತೆಗೆದ ತಕ್ಷಣ ಆತನ ಸಂಪೂರ್ಣ ವೇಷ ಸ್ಫೋಟಗೊಂಡಿತು.

ಓದಿ: ಇನ್​​ಸ್ಟಾಗ್ರಾಮ್​ನಲ್ಲಿ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಂತಾ.. ಆದ್ರೆ ನಾಗಚೈತನ್ಯ...?

ಈ ಸಂಪೂರ್ಣ ವಿಷಯದ ಬಗ್ಗೆ ಕಂಡಕ್ಟರ್ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಮಾಸ್ಕ್ ತೆಗೆಯುವಂತೆ ಕಂಡಕ್ಟರ್ ಪದೇ ಪದೆ ಕೇಳುತ್ತಿದ್ದರೂ ಮಾಸ್ಕ್ ತೆಗೆಯುವ ಬದಲು ಯುವಕ ಕಂಡಕ್ಟರ್ ಬಳಿ ಕ್ಷಮೆ ಯಾಚಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸ್ವಲ್ಪ ಸಮಯದ ನಂತರ, ಕಂಡಕ್ಟರ್‌ನ ಕೋಪಕ್ಕೆ ಹೆದರಿದ ಯುವಕನು ಭಯದಿಂದ ಮಾಸ್ಕ್​ ತೆಗೆದಿದ್ದಾನೆ. ಈ ವೇಳೆ ಮುಖದ ಮೇಲೆ ಮೀಸೆ-ಗಡ್ಡ ಕಂಡಿದ್ದೇವೆ. ಅಚ್ಚರಿ ಎಂದರೆ ಸಿಕ್ಕಿಬಿದ್ದ ನಂತರವೂ ಯುವಕ ಮಹಿಳೆಯ ದನಿಯಲ್ಲಿಯೇ ಮಾತನಾಡುತ್ತಿದ್ದಾನೆ.

ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು 2019 ರಿಂದ ಮಹಿಳೆಯರಿಗೆ ಉಚಿತ ಬಸ್ ಸೇವೆಯ ಯೋಜನೆಯನ್ನು ನಡೆಸುತ್ತಿದೆ. ಅದರ ದುರಾಸೆಯಲ್ಲಿ ಈ ಯುವಕ ಉಚಿತ ಬಸ್ ಪ್ರಯಾಣಕ್ಕಾಗಿ ಹುಡುಗಿಯ ವೇಷದಲ್ಲಿ ಪ್ರಯಾಣಿಸಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.