ETV Bharat / bharat

ರೆಡ್​​​ಲೈಟ್​​​​​​​​​ ಏರಿಯಾದಲ್ಲಿ ಹುಟ್ಟಿ ಬೆಳೆದ ಮಹಿಳೆಗೆ ಮಾನವ ಹಕ್ಕುಗಳ ಆಯೋಗದ ಸಲಹಾ ಗುಂಪಿನಲ್ಲಿ ಸ್ಥಾನ - ಯಾರಿವರು ನಸೀಮಾ ಖಾತೂನ್

ನನ್ನ ಹಿರಿಯರು ಮತ್ತು ಸಮುದಾಯದ ಆಶೀರ್ವಾದದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ತೀರಾ ಕೆಳಹಂತದಲ್ಲಿರುವ ಜನರ ಹಕ್ಕುಗಳಿಗಾಗಿ ಹೋರಾಡಲು ನಾನು ಈ ಮಾನ್ಯತೆ ಮತ್ತು ಜವಾಬ್ದಾರಿಯನ್ನು ಪಡೆದುಕೊಂಡಿದ್ದೇನೆ ಎಂದು ಖಾತೂನ್ ಸಂತಸ ವ್ಯಕ್ತಪಡಿಸಿದ್ದಾರೆ.

born is red light area girl becomes member of nor advisory group
ರೆಡ್​​​ಲೈಟ್​​​​​​​​​ ಏರಿಯಾದಲ್ಲಿ ಹುಟ್ಟಿ ಬೆಳೆದ ಮಹಿಳೆಗೆ ಮಾನವ ಹಕ್ಕುಗಳ ಆಯೋಗದ ಸಲಹಾ ಗುಂಪಿನಲ್ಲಿ ಸ್ಥಾನ
author img

By

Published : Nov 11, 2022, 9:59 PM IST

ಮುಜಾಫರ್‌ಪುರ (ಬಿಹಾರ): ಇಲ್ಲಿನ ರೆಡ್ ಲೈಟ್ ಏರಿಯಾದಲ್ಲಿ ಹುಟ್ಟಿ ಬೆಳೆದ ನಸೀಮಾ ಖಾತೂನ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಸಲಹಾ ಗುಂಪಿನ ಸದಸ್ಯೆಯಾಗಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ (NHRC) ಸಲಹಾ ಸಮಿತಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ಖಾತೂನ್ ಸ್ಥಾನ ಪಡೆದುಕೊಂಡಿದ್ದಾರೆ.

ಸಂತಸ ವ್ಯಕ್ತಪಡಿಸಿರುವ ಖಾತೂನ್​: ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಆಯೋಗವು ರಾಷ್ಟ್ರೀಯ ಮಟ್ಟದ ಸಮಿತಿ ರಚಿಸಿದೆ. ಇದರಲ್ಲಿ ನನಗೂ ಸ್ಥಾನ ನೀಡಲಾಗಿದೆ. ಈಗ ದೇಶದ ಅತಿ ದೊಡ್ಡ ನ್ಯಾಯಾಂಗ ವೇದಿಕೆಯಲ್ಲಿ ನಿಮ್ಮ ಧ್ವನಿ ಬಲವಾಗಿ ಕೇಳಿ ಬರಲಿದೆ. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಿಮ್ಮೆಲ್ಲರ ಪ್ರಯತ್ನದಿಂದ ನಾನು ನನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತೇವೆ ಎಂದು ನಸೀಮಾ ಖಾತೂನ್ ಹೇಳಿದ್ದಾರೆ.

ನನ್ನ ಹಿರಿಯರು ಮತ್ತು ಸಮುದಾಯದ ಆಶೀರ್ವಾದದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ತೀರಾ ಕೆಳಹಂತದಲ್ಲಿರುವ ಜನರ ಹಕ್ಕುಗಳಿಗಾಗಿ ಹೋರಾಡಲು ನಾನು ಈ ಮಾನ್ಯತೆ ಮತ್ತು ಜವಾಬ್ದಾರಿಯನ್ನು ಪಡೆದುಕೊಂಡಿದ್ದೇನೆ ಎಂದು ಖಾತೂನ್ ಸಂತಸ ವ್ಯಕ್ತಪಡಿಸಿದ್ದಾರೆ.

ಯಾರಿವರು ನಸೀಮಾ ಖಾತೂನ್​: ನಸೀಮಾ ಖಾತೂನ್ ಬಿಹಾರದ ಮುಜಾಫರ್‌ಪುರದ ಚತುರ್ಭುಜ್ ಸ್ಥಾನಾದಲ್ಲಿ ಜನಿಸಿದರು. ಇವರ ತಂದೆಯನ್ನು ಬಾಲ್ಯದಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರು ದತ್ತು ಪಡೆದಿದ್ದರು. ಈ ಅಜ್ಜಿಯೇ ಖಾತೂನ್​ ಅವರ ಆರೈಕೆ ಮಾಡಿದರು. 1995 ರಲ್ಲಿ ಐಎಎಸ್ ಅಧಿಕಾರಿ ರಾಜಬಾಲಾ ವರ್ಮಾ ಅವರು ಲೈಂಗಿಕ ಕಾರ್ಯಕರ್ತರು ಮತ್ತು ಅವರ ಕುಟುಂಬಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ನಿರ್ಧರಿಸಿದಾಗ, ಇವರಿಗೆಲ್ಲ ಹೊಸ ಬದುಕು ಹುಟ್ಟಿಕೊಂಡಿತು.

ಹೊಸ ಯೋಜನೆಯಡಿ ಜಾರಿಯಾದ "ಬೆಟರ್ ಲೈಫ್ ಆಯ್ಕೆ" ಎಂದು ಕರೆಯಲ್ಪಡುವ ಕಾರ್ಯಕ್ರಮಯೊಂದಕ್ಕೆ ನಸೀಮಾ ಸೇರಿಕೊಂಡರು. ಇಲ್ಲಿ ಅವರು ಕ್ರೋಚೆಟ್ ಕೆಲಸಕ್ಕಾಗಿ ತಿಂಗಳಿಗೆ 500 ಪಡೆದುಕೊಂಡರು. ಆ ಸಂಬಳದಿಂದ ಅವರು ಬಡತನದಿಂದ ಹೊರಬಂದು ಸ್ವಾವಲಂಬಿ ಇತರರಿಗೆ ಮಾದರಿಯಾದರು.

ಹಲವು ಜನೋಪಯೋಗಿ ಕಾರ್ಯಕ್ರಮ: ನಸೀಮಾ ಅವರು ಈಗ ಪರ್ಚಮ್ ಎಂಬ ಸಂಸ್ಥೆಯ ಸಹಾಯದಿಂದ ಶಿಕ್ಷಣ ಮತ್ತು ಹಕ್ಕುಗಳ ಜಾಗೃತಿ ಕಾರ್ಯಕ್ರಮ ಮುನ್ನಡೆಸುತ್ತಿದ್ದಾರೆ. ಇದರೊಂದಿಗೆ ಅವರು ಕೈಬರಹದ ಮಾಸಿಕ ಪತ್ರಿಕೆಯೊಂದನ್ನೂ ಪ್ರಕಟಿಸುತ್ತಾರೆ. ಇತ್ತೀಚಿಗೆ ಮುಜಾಫರ್‌ಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸಂದೀಪ್ ಅಗ್ನಿಹೋತ್ರಿ ಅವರ ಸಹಯೋಗದಲ್ಲಿ ಕ್ಷೇತ್ರದ ಜನರಲ್ಲಿ ಕಾನೂನು ಅರಿವು ಅಭಿಯಾನ ನಡೆಸಿದರು.

ಇದಲ್ಲದೇ ಮುಜಾಫರ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಣವ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಧರ್ಮೇಂದ್ರ ಕುಮಾರ್ ಸಿಂಗ್ ಅವರ ಸಹಯೋಗದೊಂದಿಗೆ ಪ್ರದೇಶದ ಮಹಿಳೆಯರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವ ಪ್ರಯತ್ನ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನು ಓದಿ:ನೌಕರರು ಅವಲಂಬಿತರನ್ನು ಪೋಷಿಸದಿದ್ದರೆ ಅನುಕಂಪ ನೇಮಕ ವಾಪಸ್: ಹೈಕೋರ್ಟ್​ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.