ಔರಂಗಾಬಾದ್: ವಿವಿಧ ಮಾಧ್ಯಮಗಳಲ್ಲಿ ದೇವರ ಹೆಸರಿನಲ್ಲಿ ಜಾಹೀರಾತು ನೀಡುವುದನ್ನು ನಿಷೇಧಿಸುವಂತೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ನ್ಯಾಯಪೀಠ ಆದೇಶಿಸಿದೆ.
ನ್ಯಾಯಮೂರ್ತಿ ಟಿ.ವಿ.ನಲವಾಡೆ ಮತ್ತು ಎಂ.ಜಿ. ಶೆವಾಲಿಕರ್ ಅವರ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ದೇವರ ಹೆಸರಿನ ಸಾಧನ ಮಾರಾಟ ಮಾಡುವ, ತಯಾರಿಸುವ, ಪ್ರಸಾರ ಮಾಡುವವರ ಮೇಲೆ ಅಘೋರಿ ಕಾಯ್ದೆ ಮತ್ತು ಬ್ಲ್ಯಾಕ್ ಮ್ಯಾಜಿಕ್ ತಡೆ ಕಾಯ್ದೆ 2013 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಪೀಠ ತಿಳಿಸಿದೆ.
ಮೂವತ್ತು ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ? ಎಂಬುದರ ಬಗ್ಗೆ ಔರಂಗಾಬಾದ್ ಪೀಠಕ್ಕೆ ಒಂದು ತಿಂಗಳೊಳಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಧರ್ಮದ ಹೆಸರಿನಲ್ಲಿ, ಹನುಮಾನ್ ಚಾಲೀಸಾ, ದೇವಿಯ ಯಂತ್ರ ಇತ್ಯಾದಿ ಜಾಹೀರಾತುಗಳು ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿವೆ. ಕಾಯ್ದೆಯ ಪ್ರಕಾರ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ. ಈ ಬಗ್ಗೆ ಸಿಡ್ಕೊ ಪ್ರದೇಶದ ನಿವಾಸಿ ರಾಜೇಂದ್ರ ಗಣಪಟ್ಟ್ರಾವ್ ಅಂಬೋರ್ ಎಂಬುವರು 2015 ರಲ್ಲಿ ಔರಂಗಾಬಾದ್ ಪೀಠದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಮೂಢನಂಬಿಕೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ 2013 ರ ಸಂಬಂಧಿತ ಕಾನೂನನ್ನು ರಚಿಸಲಾಗಿದೆ. ಇಂತಹ ವಿಷಯಗಳನ್ನು ತಡೆಗಟ್ಟಲು ಪ್ರತಿ ಪೊಲೀಸ್ ಠಾಣೆಯಲ್ಲಿ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ಅರ್ಜಿದಾರರು ಈ ಮೂಢನಂಬಿಕೆಗಳನ್ನು ಕಾನೂನಿನ ಮೂಲಕ ನಿರ್ಬಂಧಿಸಬೇಕೆಂದು ಅಂಬೋರ್ ಒತ್ತಾಯಿಸಿದ್ದರು.