ETV Bharat / bharat

ಅಸದ್​ ಶವಸಂಸ್ಕಾರ ಪೂರ್ಣ.. ಕೊನೆಗೂ ಮಗನ ಕೊನೆಯ ನೋಟ ನೋಡದ ತಂದೆ - ತಾಯಿ

ಗ್ಯಾಂಗ್​ಸ್ಟಾರ್​ ಅತೀಕ್ ಅಹ್ಮದ್ ಪುತ್ರ ಅಸದ್ ಅಂತ್ಯಕ್ರಿಯೆ ಇಂದು ಪ್ರಯಾಗರಾಜ್​ನಲ್ಲಿ ವಿಧಿವಿಧಾನಗಳ ಮೂಲಕ ನಡೆಯಿತು. ಸಮಾಧಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ನಿಕಟ ಸಂಬಂಧಿಗಳಿಗೆ ಮಾತ್ರ ಅವಕಾಶ ನೀಡಿದ್ದರು.

Bodies of Gangster Atiq Ahmed son Asad  aide Ghulam taken to mortuary in Prayagraj  Gangster Atiq Ahmed  ತಂದೆ ಮಗ ಜೈಲುಪಾಲು  ಅಸದ್​ ಶವಸಂಸ್ಕಾರಕ್ಕೆ ಭಾಗಿ  ಗ್ಯಾಂಗ್​ಸ್ಟಾರ್​ ಕುಟುಂಬ  ಅತೀಕ್ ಅಹ್ಮದ್ ಪುತ್ರ ಅಸದ್ ಅಂತ್ಯಕ್ರಿಯೆ  ಅಸದ್ ಎನ್‌ಕೌಂಟರ್‌ನಲ್ಲಿ ಹತ  4 ಬಾರಿ ಶಾಸಕ ಮತ್ತು ಒಂದು ಬಾರಿ ಸಂಸದ  ಅತೀಕ್ ಅಹ್ಮದ್ ಮತ್ತು ಅವರ ಪುತ್ರ ಅಲಿ ಅಹ್ಮದ್
ಅಸದ್​ ಶವಸಂಸ್ಕಾರಕ್ಕೆ ಭಾಗಿಯಾಗಲಿದ್ದೇಯಾ ಗ್ಯಾಂಗ್​ಸ್ಟಾರ್​ ಕುಟುಂಬ?
author img

By

Published : Apr 15, 2023, 9:37 AM IST

Updated : Apr 15, 2023, 11:59 AM IST

ಪ್ರಯಾಗರಾಜ್, ಉತ್ತರಪ್ರದೇಶ: ಗ್ಯಾಂಗ್​ಸ್ಟರ್​​​ ಬಾಹುಬಲಿ ಅತೀಕ್ ಅಹ್ಮದ್ ಪುತ್ರ ಅಸದ್ ಎನ್‌ಕೌಂಟರ್‌ನಲ್ಲಿ ಹತನಾದ ನಂತರ ಆತನ ಅಂತ್ಯಕ್ರಿಯೆ ವಿಧಿವಿಧಾನಗಳ ಪ್ರಕಾರ ನಡೆಯಿತು. 4 ಬಾರಿ ಶಾಸಕ ಮತ್ತು ಒಂದು ಬಾರಿ ಸಂಸದ ಆಗಿರುವ ಅತೀಕ್ ಅವರ ಬೆಂಬಲಿಗರು ಅವರ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆದ್ರೆ ಸಮಾಧಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ನಿಕಟ ಸಂಬಂಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಅಸ್ಸಾದ್ ಅವರ ತಾಯಿಯ ಅಜ್ಜ ಸೇರಿದಂತೆ ಕೆಲ ಸಂಬಂಧಿಗಳು ಭಾಗಿಯಾಗಿದ್ದರು.

  • #WATCH | Uttar Pradesh: Mortal remains of Mafia-turned-politician Atiq Ahmed's son Asad brought to Prayagraj's Kasari Masari graveyard, where his last rites will be performed.

    Asad and his aide Ghulam were killed in an encounter on April 12 by UP STF. pic.twitter.com/2d2mEsFQyi

    — ANI (@ANI) April 15, 2023 " class="align-text-top noRightClick twitterSection" data=" ">

ಶನಿವಾರ ಬೆಳಗ್ಗೆ ಝಾನ್ಸಿಯಿಂದ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತರಾದ ಅಸದ್‌ನ ಮೃತದೇಹದೊಂದಿಗೆ ಪ್ರಯಾಗರಾಜ್‌ನ ಕಸರಿ ಮಸಾರಿ ಸ್ಮಶಾನಕ್ಕೆ ತಲುಪಿದರು. ಸ್ವಲ್ಪ ಸಮಯದ ನಂತರ, ಅಸದ್ ಮೃತದೇಹವನ್ನು ಅತೀಕ್ ಅಹ್ಮದ್ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಪೊಲೀಸರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ 35 ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಿದ್ದರು. ಅತೀಕ್ ಅಹಮದ್‌ಗೆ ತನ್ನ ಮಗ ಅಸದ್‌ನ ಕೊನೆಯ ನೋಟವನ್ನು ನೋಡಲು ಸಾಧ್ಯವಾಗಲಿಲ್ಲ. ಅತೀಕ್ ಅಹಮದ್ ಮನೆಯಿಂದ ಸ್ಮಶಾನದವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾದ ಅಸದ್ ಅಹಮದ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜೈಲಿನಲ್ಲಿರುವ ಅತೀಕ್ ಅಹಮದ್ ಮತ್ತು ಅವರ ಪುತ್ರ ಅಲಿ ಅಹಮದ್ ಪರವಾಗಿ ಶನಿವಾರ ಬೆಳಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರವೇ ಅತೀಕ್ ಮತ್ತು ಅವರ ಪುತ್ರನ ಪರವಾಗಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಆದರೆ ಶುಕ್ರವಾರದಂದು ಅಂಬೇಡ್ಕರ್ ಜಯಂತಿ ಇದ್ದ ಕಾರಣ ನ್ಯಾಯಾಲಯಕ್ಕೆ ರಜೆಯಿತ್ತು. ಹೀಗಾಗಿ ಅವರ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಶನಿವಾರ ಬೆಳಗ್ಗೆ ಅತೀಕ್ ಅಹಮದ್ ಪರ ವಕೀಲರ ಪರವಾಗಿ ನ್ಯಾಯಾಲಯ ತೆರೆಯುತ್ತಿದ್ದಂತೆ ಅಸದ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

  • #WATCH | Uttar Pradesh: Last rites of Mafia-turned-politician Atiq Ahmed's son Asad being performed at Prayagraj's Kasari Masari graveyard.

    Asad and his aide Ghulam were killed in an encounter on April 13 by UP STF. pic.twitter.com/IX1R9Qf8yg

ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಅತೀಕ್ ಅಹ್ಮದ್ ಅವರನ್ನು ಪೊಲೀಸ್ ಕಸ್ಟಡಿಯಿಂದ ಅವರ ಮಗನ ಅಂತ್ಯಕ್ರಿಯೆಗೆ ಕರೆದೊಯ್ಯಬಹುದಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಮುನ್ನ ಮೃತದೇಹವು ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ ತಲುಪಿದ್ದು, ಅಂತ್ಯಕ್ರಿಯೆಯ ವಿಧಿವಿಧಾನಗಳು ಪೂರ್ಣಗೊಂಡಿದ್ದಾವೆ. ಕೊನೆಗೂ ಅತೀಕ್ ಅಹಮದ್‌ಗೆ ತನ್ನ ಮಗ ಅಸದ್‌ನ ಕೊನೆಯ ನೋಟವನ್ನು ನೋಡಲು ಸಾಧ್ಯವಾಗಲೇ ಇಲ್ಲ.

ಮಗನ ಅಂತಿಮ ದರ್ಶನಕ್ಕೆ ತಂದೆ ಮನವಿ: ಏಪ್ರಿಲ್ 13 ರ ರಾತ್ರಿಯಿಂದ ಪೊಲೀಸರು ಅತೀಕ್ ಅಹ್ಮದ್​ನನ್ನು ಕಸ್ಟಡಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಎನ್‌ಕೌಂಟರ್‌ನಲ್ಲಿ ಹತನಾದ ಮಗನ ಅಂತಿಮ ದರ್ಶನಕ್ಕಾಗಿ ಅತೀಕ್ ಅಹಮದ್ ಹಲವು ಬಾರಿ ಪೊಲೀಸರಿಗೆ ಮನವಿ ಮಾಡಿದ್ದು, ನ್ಯಾಯಾಲಯದ ಅನುಮತಿ ಇಲ್ಲದೇ ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟವಾಗಿ ಹೇಳಿದ್ದರು. ಅಂದಿನಿಂದ ಅತೀಕ್ ಅಹಮದ್ ಪರ ವಕೀಲರು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿದ್ದರು. ಶುಕ್ರವಾರದ ರಜೆಯ ಕಾರಣ ಈಗ ಆ ಅರ್ಜಿಯನ್ನು ಶನಿವಾರ ಬೆಳಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಶೈಸ್ತಾ ಪರ್ವೀನ್​ಗಾಗಿ ಶೋಧ: ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಾರೆ ಎಂದು ಪೊಲೀಸರು ನಿರೀಕ್ಷಿಸಿದ್ದರು. ಪ್ರಯಾಗರಾಜ್ ಕಡೆಗೆ ಹೋಗುವ ಎಲ್ಲಾ ವಾಹನಗಳನ್ನು ಕೌಶಾಂಬಿ ಗಡಿಯಲ್ಲಿ ಶೋಧಿಸಲಾಗಿತ್ತು. ಆದರೆ ಪೊಲೀಸರು ಇದರಲ್ಲಿ ಯಶಸ್ವಿಯಾಗಲಿಲ್ಲ. ಸ್ಮಶಾನದಲ್ಲಿ ಪೊಲೀಸರು ತುಂಬಾ ಜಾಗರೂಕರಾಗಿದ್ದರು, ಆದರೆ ಯಾರೂ ಶೈಸ್ತಾ ಪರ್ವೀನ್ ಅನ್ನು ನೋಡಲಿಲ್ಲ ಎಂದು ತಿಳಿದುಬಂದಿದೆ.

ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ: ಅತೀಕ್ ಅಹಮದ್ ಪುತ್ರನ ಅಂತ್ಯಕ್ರಿಯೆಗೆ ಜನಸಾಗರವೇ ಸೇರುವ ಸಾಧ್ಯತೆಯ ಹಿನ್ನೆಲೆ ಜಿಲ್ಲೆಯಲ್ಲೂ ಹೆಚ್ಚುವರಿ ಪಡೆ ಕರೆಸಲಾಗಿತ್ತು. ಪೊಲೀಸ್ ಪಿಎಸಿಯಲ್ಲದೆ, ಅತೀಕ್ ಅಹ್ಮದ್ ಅವರ ಚಾಕಿಯಾ ಮನೆ ಮತ್ತು ಕಸರಿ ಮಸಾರಿ ಸ್ಮಶಾನ ಪ್ರದೇಶದಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಆರ್‌ಎಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಓದಿ: Explainer:ಅತೀಕ್ ಅಹಮದ್​​​​ ಪುತ್ರನ ಎನ್​​ಕೌಂಟರ್​​​ ಮರು ದಿನ.. ಉತ್ತರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟ!​​

Last Updated : Apr 15, 2023, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.