ETV Bharat / bharat

ಮಗುಚಿ ಬಿದ್ದ ಬೋಟ್​: ನಾಲ್ವರ ಮೃತದೇಹ ಪತ್ತೆ, 14 ಮಂದಿ ನಾಪತ್ತೆ

ಸುಮಾರು 18 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಘಟನೆ ಜಾರ್ಖಂಡ್‌ನ ಜಮ್ತಾರಾ ಜಿಲ್ಲೆಯ ಬರಾಕರ್ ನದಿಯಲ್ಲಿ ನಡೆದಿದೆ. ಇದುವರೆಗೆ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದು, 14 ಮಂದಿ ನಾಪತ್ತೆಯಾಗಿದ್ದಾರೆ.

Boat capsizes in Jharkhand's Jamtara
ಮಗುಚಿ ಬಿದ್ದ ಬೋಟ್​
author img

By

Published : Feb 24, 2022, 9:43 PM IST

ಜಮ್ತಾರಾ: ಜಾರ್ಖಂಡ್‌ನ ಜಮ್ತಾರಾ ಜಿಲ್ಲೆಯ ಬರಾಕರ್ ನದಿಯಲ್ಲಿ ಸುಮಾರು 18 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಇದುವರೆಗೆ ನಾಲ್ಕು ಮೃತದೇಹಗಳು ಪತ್ತೆಯಾಗಿವೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ.

NDRF ತಂಡವು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗುರುವಾರ ಸಂಜೆ ಬೋಟ್ ಜಮ್ತಾರಾದಿಂದ ನಿರ್ಸಾಗೆ ಪ್ರಯಾಣಿಸುತ್ತಿದ್ದಾಗ ಬಾರ್ಬೆಂಡಿಯಾ ಸೇತುವೆ ಬಳಿ ಈ ಘಟನೆ ಸಂಭವಿಸಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರ್ಘಟನೆಗೆ ಗುಡುಗು ಸಹಿತ ಮಳೆಯೇ ಕಾರಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿಬಿ ಲಸಿಕೆ ಹೊರ ತರುವ ಚಿಂತನೆಯಲ್ಲಿ ಭಾರತ್​​ ಬಯೋಟೆಕ್

ಮಾಹಿತಿ ಪ್ರಕಾರ ಮುಖ್ಯಮಂತ್ರಿ ಹೇಮಂತ್​ ಸೊರೆನ್​ ಅವರು ಡಿಐಜಿ ದುಮ್ಕಾ ಹಾಗೂ ಸ್ಥಳೀಯ ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.