ETV Bharat / bharat

23ರ ಹರೆಯದ ಗರ್ಭಿಣಿ ಪ್ರಿಯತಮೆಗೆ ತಾಳಿ ಕಟ್ಟಿದ 54ರ ಶಿಕ್ಷಣಾಧಿಕಾರಿ.. BEO ಎರಡನೇ ಮದುವೆ! - ಛತ್ತೀಸ್​ಗಢ ಸುದ್ದಿ

ಯುವತಿ ಜೊತೆ ಏಳು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿ, ಆಕೆಯ ಹೊಟ್ಟೆಯಲ್ಲಿ ಮಗು ಬೆಳೆಯಲು ಕಾರಣನಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಇದೀಗ ತುಂಬು ಗರ್ಭಿಣಿಯನ್ನ ವರಿಸಿದ್ದಾರೆ. ಛತ್ತೀಸ್​ಗಢದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಗರ್ಭಿಣಿ ಪ್ರಿಯತಮೆ ಜೊತೆ ಸಪ್ತಪದಿ ತುಳಿದ ಶಿಕ್ಷಣಾಧಿಕಾರಿ

author img

By

Published : Sep 6, 2021, 5:31 PM IST

Updated : Sep 6, 2021, 7:01 PM IST

ಮುಂಗೇಲಿ (ಛತ್ತೀಸ್​ಗಢ): ಮದುವೆಯಾಗಿದ್ದರೂ ಮತ್ತೊಂದು ಯುವತಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಛತ್ತೀಸ್​ಗಢದ ಮುಂಗೇಲಿಯ ಬ್ಲಾಕ್ ಶಿಕ್ಷಣಾಧಿಕಾರಿ ಇದೀಗ ಆಕೆಯನ್ನು ಸಹ ಮದುವೆಯಾಗಿದ್ದಾರೆ. ಅವರು ಸಪ್ತಪದಿ ತುಳಿಯುವ ವೇಳೆ ಆಕೆ ತುಂಬು ಗರ್ಭಿಣಿಯಾಗಿದ್ದಳು ಎಂಬುದೇ ಇಲ್ಲಿ ವಿಶೇಷ.

ಮುಂಗೇಲಿಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪಿ.ಎಸ್. ಬೇಡಿ (54) ಅವರು 23 ವರ್ಷದ ಯುವತಿ ಜೊತೆ ಏಳು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದು, ಆಕೆ ಹೊಟ್ಟೆಯಲ್ಲಿ ಅಧಿಕಾರಿಯ ಮಗು ಬೆಳೆಯುತ್ತಿತ್ತು. ಮದುವೆಗೆ ನಿರಾಕರಿಸಿದ್ದ ಬೇಡಿ ವಿರುದ್ಧ ಯುವತಿ ಜರಗಾಂವ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಳು.

ಇದನ್ನೂ ಓದಿ: ಕುಟುಂಬದ ನಾಲ್ವರ ಹತ್ಯೆ ಕೇಸ್​.. ಮನೆ ಮಗನೇ ಬಾಯ್ಬಿಟ್ಟ ಮರ್ಡರ್ ಮಿಸ್ಟರಿ​!

ಪೊಲೀಸರು ಕರೆಯಿಸಿ ವಿಚಾರಣೆ ನಡೆಸುವ ವೇಳೆ ಮದುವೆಯಾಗುವ ಭರವಸೆಯೊಂದಿಗೆ ಪೊಲೀಸ್ ಠಾಣೆಯಿಂದ ಆಕೆಯನ್ನು ಕಳುಹಿಸಿದ್ದ ಬಿಇಒ ಇದೀಗ ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟಿದ್ದಾರೆ. ಆದರೆ ಮದುವೆಗೆ ಬೇಡಿ ಸಂಬಂಧಿಕರು ಯಾರೂ ಹಾಜರಾಗಿಲ್ಲ.

Last Updated : Sep 6, 2021, 7:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.