ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಜೆ ಬ್ಲಿಂಕೆನ್ ಪ್ರಾದೇಶಿಕ ಸವಾಲುಗಳು, ಕೋವಿಡ್ -19 ನಿರ್ವಹಣೆಯಲ್ಲಿ ಸಹಕಾರ, ಹವಾಮಾನ ಬದಲಾವಣೆ, ಪ್ರಾದೇಶಿಕ ಭದ್ರತೆ, ಪ್ರಜಾಪ್ರಭುತ್ವ ತತ್ವಗಳ ಕುರಿತು ಚರ್ಚೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಯುಎಸ್ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, ಯುಎಸ್ ವಿದೇಶಾಂಗ ಕಾರ್ಯದರ್ಶಿ ಜೆ ಬ್ಲಿಂಕೆನ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಅವರು ಅಮೆರಿಕ ಮತ್ತು ಭಾರತದ ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಗಟ್ಟಿಗೊಳಿಸುವ ಕುರಿತು ಮತ್ತು ಹವಾಮಾನ ಬದಲಾವಣೆ, ಪ್ರಾದೇಶಿಕ ಭದ್ರತೆ ಸೇರಿದಂತೆ ಹಲವು ವಿಷಯಗಳಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ನಡುವಿನ ಸಹಕಾರದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಓದಿ : ಭಾರತಕ್ಕೆ ರಫೇಲ್ ಎಂಟ್ರಿ.. ಚೀನಾ-ಪಾಕ್ಗೆ ನಡುಕ!
-
Good to meet US Secretary of State @SecBlinken today. I welcome President Biden's strong commitment to strengthen the India-US Strategic Partnership, which is anchored in our shared democratic values and is a force for global good. pic.twitter.com/HlNqKVTM95
— Narendra Modi (@narendramodi) July 28, 2021 " class="align-text-top noRightClick twitterSection" data="
">Good to meet US Secretary of State @SecBlinken today. I welcome President Biden's strong commitment to strengthen the India-US Strategic Partnership, which is anchored in our shared democratic values and is a force for global good. pic.twitter.com/HlNqKVTM95
— Narendra Modi (@narendramodi) July 28, 2021Good to meet US Secretary of State @SecBlinken today. I welcome President Biden's strong commitment to strengthen the India-US Strategic Partnership, which is anchored in our shared democratic values and is a force for global good. pic.twitter.com/HlNqKVTM95
— Narendra Modi (@narendramodi) July 28, 2021
ಪ್ರಧಾನಿ ನರೇಂದ್ರ ಮೋದಿ ಕೂಡ ಬ್ಲಿಂಕೆನ್ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದು, ಯುಎಸ್ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಅವರನ್ನು ಇಂದು ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ಭಾರತ - ಯುಎಸ್ ಕಾರ್ಯತಂತ್ರದ ಸಹಭಾಗಿತ್ವ ಬಲಪಡಿಸುವ ಅಧ್ಯಕ್ಷ ಜೋ ಬೈಡೆನ್ ಅವರ ದೃಢವಾದ ಬದ್ಧತೆಯನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಈ ಸಹಕಾರವು ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರಿತವಾಗಿದೆ ಮತ್ತು ಜಾಗತಿಕ ಒಳಿತಿನ ಒಂದು ಶಕ್ತಿಯಾಗಿದೆ ಎಂದು ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ.