ಶಿವಕಾಶಿ/ವಿರುಧುನಗರ: ಪಟಾಕಿ ತಯಾರಿಕೆಗೆ ಖ್ಯಾತಿಯಾಗಿರುವ ತಮಿಳುನಾಡಿನ ಶಿವಕಾಶಿಯ ಎರಡು ಕಾರ್ಖಾನೆಗಳಲ್ಲಿ ಮಂಗಳವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಮಂದಿ ಸುಟ್ಟು ಕರಕಲಾಗಿದ್ದಾರೆ. 15ಕ್ಕೂ ಅಧಿಕ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿಜಯದಶಮಿ ಮತ್ತು ದೀಪಾವಳಿಯ ಸಂಭ್ರಮದ ಹೊತ್ತಲ್ಲೇ ದುರಂತ ಸಂಭವಿಸಿದೆ.
-
#WATCH | Tamil Nadu: An explosion took place at a firecracker manufacturing factory near Sivakasi in Virudhunagar district, fire extinguisher reaches the spot: Fire and Rescue department pic.twitter.com/CqE1kCAJ3S
— ANI (@ANI) October 17, 2023 " class="align-text-top noRightClick twitterSection" data="
">#WATCH | Tamil Nadu: An explosion took place at a firecracker manufacturing factory near Sivakasi in Virudhunagar district, fire extinguisher reaches the spot: Fire and Rescue department pic.twitter.com/CqE1kCAJ3S
— ANI (@ANI) October 17, 2023#WATCH | Tamil Nadu: An explosion took place at a firecracker manufacturing factory near Sivakasi in Virudhunagar district, fire extinguisher reaches the spot: Fire and Rescue department pic.twitter.com/CqE1kCAJ3S
— ANI (@ANI) October 17, 2023
ವಿರುಧುನಗರ ಸಮೀಪದ ಶಿವಕಾಶಿಯಲ್ಲಿ ಎರಡು ಪ್ರತ್ಯೇಕ ಸ್ಫೋಟಗಳು ಸಂಭವಿಸಿವೆ. ಬೂದುಪಟ್ಟಿ ರೆಂಗಪಾಳ್ಯಂ ಪ್ರದೇಶದಲ್ಲಿರುವ ಕಾನಿಷ್ಕರ್ ಪಟಾಕಿ ಕಾರ್ಖಾನೆಯಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ 9 ಮಂದಿ ಬೆಂಕಿಗೆ ಆಹುತಿಯಾದರು. ಘಟನೆಯ ಪ್ರದೇಶ ಸುತ್ತ ದೊಡ್ಡ ಸ್ಫೋಟಕ ಸದ್ದು ಕೇಳಿಬಂದಿತು. ಬೆಂಕಿಗೆ ಕೆನ್ನಾಲಿಗೆಗೆ ಸಿಲುಕಿದ ಕೆಲ ಕಾರ್ಮಿಕರು ಸುಟ್ಟ ಗಾಯಕ್ಕೀಡಾಗಿದ್ದಾರೆ. ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೊಂದು ಸ್ಫೋಟವು ರೆಡ್ಡಿಪಟ್ಟಿ ಪ್ರದೇಶದಲ್ಲಿರುವ ಮುತ್ತು ವಿಜಯನ್ ಒಡೆತನದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿತು. ಇಲ್ಲಿ ಓರ್ವ ಕಾರ್ಮಿಕ ಬೆಂಕಿಗೆ ಬಲಿಯಾಗಿದ್ದಾನೆ. ಹಲವು ತೀವ್ರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಸಾವುನೋವುಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕಾರ್ಖಾನೆಗಳು ಭಸ್ಮ: ಹಬ್ಬದ ಹಿನ್ನೆಲೆಯಲ್ಲಿ ಎರಡೂ ಕಾರ್ಖಾನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಶೇಖರಿಸಿಡಲಾಗಿತ್ತು. ಯಾವ ಕಾರಣಕ್ಕಾಗಿ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡೂ ಕಾರ್ಖಾನೆಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಪಟಾಕಿ ತಯಾರಿಕಾ ಕ್ಷೇತ್ರ ನಷ್ಟ ಅನುಭವಿಸುತ್ತಿರುವ ನಡುವೆ ಈ ದುರಂತಗಳು ಸಂಭವಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಕಾರಣ ಪತ್ತೆಗೆ ತನಿಖೆ ಪ್ರಾರಂಭಿಸಿದ್ದಾರೆ.
ಕರ್ನಾಟಕದಲ್ಲಿ ಪಟಾಕಿ ದುರಂತ: ಈಚೆಗೆ ಬೆಂಗಳೂರಿನ ಹೊರವಲಯದಲ್ಲಿರುವ ಅತ್ತಿಬೆಲೆಯಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಉಂಟಾಗಿ 16 ಮಂದಿ ಸಾವನ್ನಪ್ಪಿದ್ದರು. ಸ್ಫೋಟದಲ್ಲಿ ಮೊದಲು 12 ಮಂದಿ ಸುಟ್ಟು ಕರಕಲಾಗಿದ್ದರು. ಇದಾದ ಬಳಿಕ ತೀವ್ರವಾಗಿ ಗಾಯಗೊಂಡಿದ್ದವರಲ್ಲಿ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳೆರಡೂ ಪರಿಹಾರ ಘೋಷಿಸಿದ್ದವು. ಮೃತರಿಗೆ ತಲಾ 5 ಲಕ್ಷ ರೂ ಪರಿಹಾರ ಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದರೆ, ತಮಿಳುನಾಡು ಸರ್ಕಾರವು 3 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಮತ್ತು ಸಾಧಾರಣ ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರ ಘೋಷಿಸಿದೆ.
ಜೊತೆಗ ಪಟಾಕಿ ಗೋದಾಮು ಸ್ಫೋಟ ಪ್ರಕರಣ ಕುರಿತ ತನಿಖೆಯನ್ನು ಕರ್ನಾಟಕ ಸರ್ಕಾರ ಸಿಐಡಿಗೆ ವಹಿಸಿದೆ. ದುರಂತದಲ್ಲಿ ಮೃತಪಟ್ಟವರದಲ್ಲಿ ತಮಿಳುನಾಡಿನಿಂದ ಕೆಲಸಕ್ಕೆ ಬಂದವರೇ ಹೆಚ್ಚಾಗಿದ್ದಾರೆ. ಅಷ್ಟೇ ಅಲ್ಲ ಒಂದೇ ಗ್ರಾಮದ 8 ವಿದ್ಯಾರ್ಥಿಗಳು ದುರಂತಕ್ಕೆ ಬಲಿಯಾಗಿದ್ದಾರೆ. ರಜೆಯ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪಟಾಕಿ ಗೋದಾಮಿನಲ್ಲಿ ಕೆಲಸಕ್ಕೆ ಸೇರಿದ್ದರು.
ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಭೀಕರ ಸ್ಫೋಟ: 9 ಮಂದಿ ದುರ್ಮರಣ, ಪರಿಹಾರ ಘೋಷಿಸಿದ ಸಿಎಂ