ETV Bharat / bharat

ಕುರ್​ಕುರೆ-ನೂಡಲ್ಸ್​ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 10 ಮಂದಿ ಬಲಿ - Blast in Muzaffarpur Bihar

Blast in Kurkure Noodles factory: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಬೇಲಾ ಕೈಗಾರಿಕಾ ಪ್ರದೇಶದಲ್ಲಿರುವ 'ಮೋದಿ ಕುರ್​ಕುರೆ ಮತ್ತು ನೂಡಲ್ಸ್ ಕಾರ್ಖಾನೆ'ಯಲ್ಲಿ ಬಾಯ್ಲರ್ ಸ್ಫೋಟಗೊಂಡು 10 ಮಂದಿ ಸಾವನ್ನಪ್ಪಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

Blast in Kurkure Noodles factory in Muzaffarpur
ಕುರ್​ಕುರೆ-ನೂಡಲ್ಸ್​ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ
author img

By

Published : Dec 26, 2021, 12:26 PM IST

Updated : Dec 26, 2021, 12:34 PM IST

ಮುಜಾಫರ್‌ಪುರ (ಬಿಹಾರ): ಕುರ್​ಕುರೆ ಮತ್ತು ನೂಡಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು 10 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಕುರ್​ಕುರೆ-ನೂಡಲ್ಸ್​ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ

ಈ ದುರ್ಘಟನೆಯಲ್ಲಿ ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮುಜಾಫರ್‌ಪುರ ಜಿಲ್ಲೆಯ ಬೇಲಾ ಕೈಗಾರಿಕಾ ಪ್ರದೇಶದಲ್ಲಿರುವ 'ಮೋದಿ ಕುರ್​ಕುರೆ ಮತ್ತು ನೂಡಲ್ಸ್ ಕಾರ್ಖಾನೆ'ಯಲ್ಲಿ ದುರಂತ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.

ಇದನ್ನೂ ಓದಿ: ವಿಪರೀತ ಚಳಿ ತಡೆಯಲಾಗದೇ ತಾನೇ ಕದ್ದ ಬೈಕ್​ಗೆ ಬೆಂಕಿ ಇಟ್ಟ ಭೂಪ..

ಬಾಯ್ಲರ್ ಸ್ಫೋಟದ ಸದ್ದು 5 ಕಿ.ಮೀ ದೂರದವರೆಗೂ ಕೇಳಿ ಬಂದಿದ್ದು, ಸ್ಫೋಟದ ತೀವ್ರತೆಗೆ ಹತ್ತಿರದ ಹಲವಾರು ಕಾರ್ಖಾನೆಗಳು ಹಾನಿಗೊಳಗಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Last Updated : Dec 26, 2021, 12:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.