ETV Bharat / bharat

ರಾಯ​ಗಡ​ದ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ: ಇಬ್ಬರು ಬಲಿ, 6 ಮಂದಿಗೆ ಗಾಯ - blast

ಖೋಪೋಲಿ ಬಳಿಯ ಸಜ್‌ಗಾಂವ್‌ನಲ್ಲಿರುವ ರಾಸಾಯನಿಕ ಉತ್ಪಾದನಾ ಕೈಗಾರಿಕಾ ಘಟಕದಲ್ಲಿ ಮುಂಜಾನೆ 3 ಗಂಟೆಗೆ ಸ್ಫೋಟ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. 6 ಜನರು ಗಾಯಗೊಂಡಿದ್ದಾರೆ.

blast in a chemical factory near khopoli of raigad district, 1 killed, 4 injured
ರಾಯ​ಗಡ​ದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: ಓರ್ವ ಬಲಿ, 4 ಮಂದಿಗೆ ಗಾಯ
author img

By

Published : Nov 5, 2020, 10:54 AM IST

ರಾಯ​ಗಡ​​(ಮಹಾರಾಷ್ಟ್ರ): ಖೋಪೋಲಿ ಬಳಿಯ ಸಜ್‌ಗಾಂವ್‌ನಲ್ಲಿರುವ ರಾಸಾಯನಿಕ ಉತ್ಪಾದನಾ ಕೈಗಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಮುಂಜಾನೆ 3 ಗಂಟೆಗೆ ಸ್ಫೋಟ ಸಂಭವಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ದುಧೆ ಸ್ಥಳಕ್ಕೆ ತೆರಳಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದರೆ. 6ಮಂದಿ ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ 10 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಮುಂದಾದವು.

ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, ಇಬ್ಬರು ಸಾವು

ಅರ್ಕೊಸ್​​​ (Arcos) ಕೈಗಾರಿಕಾ ಪ್ರದೇಶವು ಖಲಾಪುರ ತಾಲೂಕಿನ ಖೋಪೋಲಿ ಸಜ್‌ಗಾಂವ್‌ ಪ್ರದೇಶದಲ್ಲಿದ್ದು, ಸುತ್ತಮುತ್ತ ಕೆಲವು ಕಂಪನಿಗಳಿವೆ. ಕಂಪನಿಯ ರಿಯಾಕ್ಟರ್ ಮುಂಜಾನೆ 3 ಗಂಟೆ ಸುಮಾರಿಗೆ ಸ್ಫೋಟಗೊಂಡಿದ್ದು, ಕ್ಷಣಮಾತ್ರದಲ್ಲಿ ಅಗ್ನಿ ನಾಲ್ಕು ಕಿ.ಮೀ ಪ್ರದೇಶಕ್ಕೆ ಹರಡಿತ್ತು. ಹತ್ತಿರದಲ್ಲಿದ್ದ ಮನೆ, ಶೆಡ್​ಗಳು ಕೂಡ ಬೆಂಕಿಗಾಹುತಿಯಾಗಿವೆ.

ಒಟ್ಟು 10 ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿ ಶಮನಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.