ETV Bharat / bharat

ಕೇರಳದಲ್ಲಿ ಮೂಢನಂಬಿಕೆಗೆ 11 ವರ್ಷದ ಬಾಲಕಿ ಬಲಿ: ತಂದೆ, ಇಮಾಮ್ ಬಂಧನ

ಕೇರಳದ ಕಣ್ಣೂರಿನಲ್ಲಿ ಮೂಢನಂಬಿಕೆ ಮತ್ತು ಕಂದಾಚಾರದ ಕಾರಣದಿಂದಾಗಿ ಓರ್ವ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಬಾಲಕಿಯ ತಂದೆ ಸೇರಿ ಇಬ್ಬರ ಬಂಧನವಾಗಿದೆ.

Black magic claims life of 11-year-old girl; father and imam arrested
ಮೂಢನಂಬಿಕೆಗೆ ಬಲಿಯಾದ 11 ವರ್ಷದ ಬಾಲಕಿ: ತಂದೆ ಮತ್ತು ಇಮಾಮ್ ಬಂಧನ
author img

By

Published : Nov 3, 2021, 3:09 PM IST

ಕಣ್ಣೂರ್(ಕೇರಳ): ಮೂಢನಂಬಿಕೆ ದೇಶದ ಅತ್ಯಂತ ದೊಡ್ಡ ಪಿಡುಗು. ಇದು ವ್ಯಕ್ತಿಗತವಾದರೂ ಕೂಡಾ ಸಮಾಜದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ. ಕೇರಳದ ಕಣ್ಣೂರಿನಲ್ಲಿ ಮೂಢನಂಬಿಕೆ ಮತ್ತು ಕಂದಾಚಾರದ ಕಾರಣದಿಂದಾಗಿ ಓರ್ವ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೇವಲ 11 ವರ್ಷದ ಫಾತಿಮಾ ಸಾವನ್ನಪ್ಪಿದ ಬಾಲಕಿಯಾಗಿದ್ದು, ತಂದೆ ಸತ್ತಾರ್ ಮೂಢನಂಬಿಕೆಯ ಕಾರಣದಿಂದಾಗಿ ಬಾಲಕಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಸತ್ತಾರ್​​ ಆಸ್ಪತ್ರೆಗೆ ಕರೆದುಕೊಂಡು ಹೋಗದಿರುವುದೇ ಸಾವಿಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.

ಜ್ವರ ತೀವ್ರವಾದರೂ ತಲೆಕೆಡಿಸಿಕೊಳ್ಳದ ಸತ್ತಾರ್​ ಇಮಾಮ್ (ಮುಸ್ಲಿಂ ಧರ್ಮದ ಮುಖಂಡ, ಆಗಾಗ ಮುಸ್ಲಿಮರಿಗೆ ಕೌನ್ಸಿಲಿಂಗ್ ಮಾಡುವ ಅಧಿಕಾರ ಈತನಿಗಿರುತ್ತದೆ) ಉವೈಸ್​ ಬಳಿ ಬಾಲಕಿಯನ್ನು ಕರೆದೊಯ್ದು, ಧಾರ್ಮಿಕ ವಿಧಿವಿಧಾನಗಳ ಮೂಲಕ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಫಾತಿಮಾ ಸಾವನ್ನಪ್ಪಿದ್ದಾಳೆ.

ಸ್ಥಳೀಯರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲ ನ್ಯಾಯ ಕಾಯ್ದೆ (Juvenile Justice Act) ಅಡಿ ಬಾಲಕಿಯ ತಂದೆ ಮತ್ತು ಇಮಾಮ್​ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆಯೂ ನಡೆದಿದ್ದು, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಗೆ ಸರಿಯಾದ ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರೆ, ಬದುಕುಳಿಯುವ ಸಾಧ್ಯತೆಗಳು ದಟ್ಟವಾಗಿತ್ತು ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ಸರಿಯಾದ ಚಿಕಿತ್ಸೆ ದೊರೆಯದೇ ಸುಮಾರು 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: 100 ಕೋಟಿ ವ್ಯಾಕ್ಸಿನೇಷನ್‌ ನಂತರ ಲಸಿಕೆ ನೀಡಿಕೆ ಸಡಿಲಿಸಿದ್ರೆ ಹೊಸ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.. ಪ್ರಧಾನಿ ಮೋದಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.