ETV Bharat / bharat

ಇಂದೋರ್​​ನ ಈ ಆಸ್ಪತ್ರೆಯಲ್ಲಿ ರೋಗಿಗಳ ಮಿದುಳಿನಲ್ಲಿ ಕಪ್ಪು ಶಿಲೀಂಧ್ರ ಪತ್ತೆ! - ಇಂದೋರ್‌ನ ಮಹಾರಾಜ ಯಶ್ವಂತರಾವ್ ಆಸ್ಪತ್ರೆ

ಮಧ್ಯಪ್ರದೇಶದ ಇಂದೋರ್‌ನ ಮಹಾರಾಜ ಯಶ್ವಂತರಾವ್ ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ರೋಗಿಗಳ ಮಿದುಳಿನಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್​ ಫಂಗಸ್​​ ಕಂಡು ಬಂದಿದೆ.

fungus
fungus
author img

By

Published : May 31, 2021, 10:50 PM IST

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನ ಸರ್ಕಾರಿ ಮಹಾರಾಜ ಯಶ್ವಂತರಾವ್ ಆಸ್ಪತ್ರೆಯಲ್ಲಿ ಸೋಂಕಿಗೆ ದಾಖಲಾದ ಕನಿಷ್ಠ ಶೇ.15 ರಷ್ಟು ರೋಗಿಗಳ ಮಿದುಳಿನಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಪತ್ತೆಯಾಗಿದೆ ಎಂದು ಹಿರಿಯ ವೈದ್ಯರು ಸೋಮವಾರ ತಿಳಿಸಿದ್ದಾರೆ.

ಎಂವೈಹೆಚ್‌ನಲ್ಲಿ ದಾಖಲಾದ 368 ಮ್ಯೂಕೋರ್ಮೈಕೋಸಿಸ್ ರೋಗಿಗಳಲ್ಲಿ, ಅವರಲ್ಲಿ 55 ಮಂದಿಗೆ ಮಿದುಳಿನಲ್ಲಿ ಸೋಂಕು ಇದೆ ಎಂದು ಪ್ರಾಥಮಿಕ ಅಧ್ಯಯನದಿಂದ ತಿಳಿದು ಬಂದಿದ್ದು, ಸಿಟಿ ಸ್ಕ್ಯಾನ್​​ ಮತ್ತು ಎಂಆರ್‌ಐ ಸ್ಕ್ಯಾನ್‌ಗಳು ಇದನ್ನು ದೃಢಪಡಿಸಿವೆ ಎಂದು ನರಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ರಾಕೇಶ್ ಗುಪ್ತಾ ಹೇಳಿದರು. ಆಸ್ಪತ್ರೆಗೆ ದಾಖಲಾಗುವ ಮೊದಲು ಸೋಂಕು ಈ ಸೈನಸ್ ಮೂಲಕ ಈ ರೋಗಿಗಳ ಮಿದುಳಿಗೆ ತಲುಪಿದೆ ಎಂದು ಅವರು ಹೇಳಿದರು.

ಮಿದುಳಿನಲ್ಲಿ ಬ್ಲ್ಯಾಕ್​ ಫಂಗಸ್ ಸೋಂಕಿನ ಆರಂಭಿಕ ಲಕ್ಷಣಗಳು ತಲೆನೋವು ಮತ್ತು ವಾಂತಿ. ಕೆಲವು ರೋಗಿಗಳು ಸೋಂಕು ಹರಡುತ್ತಿದ್ದಂತೆ ಪ್ರಜ್ಞೆ ಕಳೆದುಕೊಳ್ಳುತ್ತಾರೆ ಎಂದು ವೈದ್ಯರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.