ಮೀರತ್ (ಉತ್ತರ ಪ್ರದೇಶ): ದೇಶಾದ್ಯಂತ ಕೋವಿಡ್ನಿಂದ ಮಾತ್ರವಲ್ಲದೇ ಬ್ಲಾಕ್, ವೈಟ್, ಯೆಲ್ಲೋ ಫಂಗಸ್ ಅಥವಾ ಕಪ್ಪು, ಬಳಿ,ಹಳದಿ ಶಿಲೀಂಧ್ರ (ಮ್ಯೂಕೋರ್ಮೈಕೋಸಿಸ್) ಸೋಂಕಿಗೆ ಒಳಗಾಗುತ್ತಿದ್ದಾರೆ. ಅಪರೂಪದಲ್ಲಿ ಅಪರೂಪವೆಂಬಂತೆ ಇಲ್ಲೊಬ್ಬ ರೋಗಿಯಲ್ಲಿ ಕಪ್ಪು - ಬಿಳಿ ಎರಡೂ ಶಿಲೀಂಧ್ರ ಸೋಂಕು ತಗುಲಿರುವುದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಮೀರತ್ನ ಆನಂದ್ ಆಸ್ಪತ್ರೆಯಲ್ಲಿ ದಾಖಲಾಗಿರುವ 42 ವರ್ಷದ ವ್ಯಕ್ತಿಯೊಬ್ಬ ಕಪ್ಪು ಶಿಲೀಂಧ್ರದಿಂದ ಬಳಲುತ್ತಿದ್ದ. ಇದೀಗ ಆತನಲ್ಲಿ ಬಿಳಿ ಶಿಲೀಂಧ್ರದ ಲಕ್ಷಣಗಳೂ ಕಂಡು ಬಂದಿರುವುದು ಕಳವಳಕಾರಿ ಸಂಗತಿಯಾಗಿದೆ. ವೈಟ್ ಫಂಗಸ್ ದೃಢಪಡುತ್ತಿದ್ದಂತೆಯೇ ವೈದ್ಯರು ಕಣ್ಣಿನ ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿದ್ದು, ರೋಗಿಯ ದೃಷ್ಟಿಯನ್ನು ಉಳಿಸಿದ್ದಾರೆ.
ಇದನ್ನೂ ಓದಿ: ಕಪ್ಪು - ಬಿಳಿ ಶಿಲೀಂಧ್ರ ಜತೆ ಈಗ 'ಯೆಲ್ಲೊ ಫಂಗಸ್' ಹಾವಳಿ ಶುರು: ಏನಿದರ ಲಕ್ಷಣ, ಮುನ್ನೆಚ್ಚರಿಕೆ ಹೇಗೆ?
ಮ್ಯೂಕೋರ್ಮೈಕೋಸಿಸ್ ಇದೊಂದು ಶಿಲೀಂಧ್ರ ಸೋಂಕಾಗಿದ್ದು, ಕೋವಿಡ್ನಿಂದ ಚೇತರಿಸಿಕೊಂಡ ಹಲವಾರು ವ್ಯಕ್ತಿಗಳು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಕೋವಿಡ್-19 ಚಿಕಿತ್ಸೆಯ ಭಾಗವಾಗಿ ಸ್ಟೀರಾಯ್ಡ್‌ಗಳನ್ನು ತೆಗೆದುಕೊಳ್ಳುವ ರೋಗಿಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲಿಯೂ ವಿಶೇಷವಾಗಿ ಸೋಂಕಿನಿಂದ ಚೇತರಿಸಿಕೊಂಡ ಮಧುಮೇಹ ರೋಗಿಗಳಲ್ಲಿ ಇದು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಕಪ್ಪು ಮತ್ತು ಬಿಳಿ ಶಿಲೀಂಧ್ರ ಪ್ರಕರಣಗಳು ಹೊರಬಂದ ಬಳಿಕ ಉತ್ತರ ಪ್ರದೇಶ ಗಾಜಿಯಾಬಾದ್‌ನಲ್ಲಿ ಹಳದಿ ಶಿಲೀಂಧ್ರ (ಯೆಲ್ಲೊ ಫಂಗಸ್) ಪ್ರಕರಣ ಕೂಡ ವರದಿಯಾಗಿದೆ.