ಬರೇಲಿ (ಉತ್ತರ ಪ್ರದೇಶ): ಕಾರ್ಮಿಕರೊಬ್ಬರ ಗುಡಿಸಲು ಜಾಗವನ್ನು ಕಬಳಿಸುವ ಯತ್ನದ ಆರೋಪದ ಮೇಲೆ ಉತ್ತರ ಪ್ರದೇಶದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಮುಖಂಡ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಯಾದವ್ ಮತ್ತು ಧ್ಯಾನ್ಪಾಲ್ ಸಿಂಗ್ ಎಂಬುವವರೇ ಬಂಧಿತ ಮಗ ಮತ್ತು ತಂದೆಯಾಗಿದ್ದಾರೆ.
ಬರೇಲಿ ಜಿಲ್ಲೆಯ ಫರೀದ್‌ಪುರ ಪ್ರದೇಶದಲ್ಲಿ ತಳ್ಳು ಗಾಡಿ ಕಾರ್ಮಿಕ ಸೀತಾರಾಮ್ ಎಂಬುವವರು 2007ರಿಂದ ಗುಡಿಸಲಿನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಬಿಜೆಪಿ ಯುವ ಮೋರ್ಚಾದ ಮುಖಂಡರಾದ ಪ್ರದೀಪ್, ಕಾರ್ಮಿಕ ಸೀತಾರಾಮ್ ಅವರ ಕುಟುಂಬವನ್ನು ಬಲವಂತವಾಗಿ ಗುಡಿಸಲಿನಿಂದ ಹೊರಹಾಕಲು ಮತ್ತು ಭೂಮಿ ಕಬಳಿಸಲು ಯತ್ನ ಸಂಬಂಧ ಕೇಸ್ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ, ಈ ಬಗ್ಗೆ ಗಲಭೆ ಸೇರಿದಂತೆ ವಿವಿಧ ಕಾಯ್ದೆಗಳಡಿ ಎಫ್ಆರ್ಐ ದಾಖಲಿಸಿಕೊಳ್ಳಲಾಗಿತ್ತು. ಇದರ ಆಧಾರದ ಮೇಲೆ ಪ್ರದೀಪ್ ಮತ್ತು ಇತರ ಇಬ್ಬರನ್ನು ಬಂಧಿಸಿದ್ದೇವೆ ಎಂದು ಫರೀದ್‌ಪುರ ಪೊಲೀಸ್ ಠಾಣೆಯ ಅಧಿಕಾರಿ ದಯಾ ಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸೇನಾ ಸಮವಸ್ತ್ರ ಧರಿಸಿ ವಂಚನೆ: ಆರೋಪಿ ಬಂಧಿಸಿದ ಎಸ್‌ಟಿಎಫ್