ETV Bharat / bharat

ಬಿಜೆಪಿಗೆ ಒಲಿದ ಚಂಡೀಗಢ ಮಹಾನಗರ ಪಾಲಿಕೆ ಮೇಯರ್​ ಸ್ಥಾನ: ಒಂದು ಮತದ ಅಂತರದಿಂದ ಗೆದ್ದ ಅನೂಪ್​ ಗುಪ್ತಾ - ಚಂಡೀಘಡ ಮಹಾನಗರ ಪಾಲಿಕೆ

ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್​ ಚುನಾವಣೆ - ಒಂದು ಮತದಿಂದ ಗೆದ್ದ ಬಿಜೆಪಿಯ ಅನೂಪ್​ ಗುಪ್ತಾ - ಆಪ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ

bjps-anup-gupta-wins-chandigarh-mayor-election-by-one-vote
ಬಿಜೆಪಿಗೆ ಒಲಿದ ಚಂಡೀಘಡ ಮಹಾನಗರ ಪಾಲಿಕೆ ಮೇಯರ್​ ಸ್ಥಾನ : ಒಂದು ಮತದ ಅಂತರದಿಂದ ಗೆದ್ದ ಅನುಪ್​ ಗುಪ್ತಾ
author img

By

Published : Jan 17, 2023, 7:58 PM IST

ಚಂಡೀಗಢ : ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್​ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿಯ ಅನೂಪ್​ ಗುಪ್ತಾ ಅವರು ಮೇಯರ್​ ಆಗಿ ಆಯ್ಕೆಯಾಗಿದ್ದಾರೆ. ಅನೂಪ್​ ಗುಪ್ತಾ ಅವರು ಒಂದು ಮತದ ಅಂತರದಿಂದ ಆಪ್​ನ ಜಸ್ಬೀರ್​ ಸಿಂಗ್​​ ಲಾಡಿ ಅವರನ್ನು ಸೋಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಪ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

bjps-anup-gupta-wins-chandigarh-mayor-election-by-one-vote
ಒಂದು ಮತದ ಅಂತರದಿಂದ ಗೆದ್ದ ಅನುಪ್​ ಗುಪ್ತಾ

ಒಂದು ಮತದ ಅಂತರದಿಂದ ಬಿಜೆಪಿಗೆ ಗೆಲುವು : ಇಂದು ಪ್ರಕಟವಾದ ಮೇಯರ್​ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ಅನೂಪ್​​ ಗುಪ್ತಾ ಅವರು 15 ಮತಗಳನ್ನು ಪಡೆದರೆ, ಆಪ್​ನ ಜಸ್ಬೀರ್​ ಸಿಂಗ್​ ಲಾಡಿ ಅವರು 14 ಮತಗಳನ್ನು ಪಡೆದು ಕೇವಲ ಒಂದು ಮತಗಳಿಂದ ಪರಾಭವಗೊಂಡು ನಿರಾಶೆ ಅನುಭವಿಸಿದರು. ಒಟ್ಟು 29 ಮತಗಳು ಚಲಾವಣೆಯಾಗಿದ್ದವು.

ಕಾಂಗ್ರೆಸ್​, ಅಕಾಲಿದಳ ಚುನಾವಣೆಯಲ್ಲಿ ಭಾಗವಹಿಸದಿರಲು ನಿರ್ಧಾರ : ಇನ್ನು ಚಂಡೀಗಢ ಮಹಾನಗರ ಪಾಲಿಕೆಯ ಹಿರಿಯ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಅಕಾಲಿದಳ ಚುನಾವಣೆಯಲ್ಲಿ ಭಾಗವಹಿಸದಿರಲು ಈಗಾಗಲೇ ನಿರ್ಧರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕಾಂಗ್ರೆಸ್​ ಚುನಾವಣೆ ಬಹಿಷ್ಕರಿಸಿರುವುದರಿಂದ ಹಿರಿಯ ಉಪಮೇಯರ್ ಹುದ್ದೆಗೆ ಬಿಜೆಪಿಯ ಕನ್ವರ್ಜಿತ್ ರಾಣಾ ಮತ್ತು ಆಪ್​ನ ತರುಣಾ ಮೆಹ್ತಾ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಉಪಮೇಯರ್ ಸ್ಥಾನಕ್ಕೆ ಬಿಜೆಪಿಯು ಹರ್ಜೀತ್ ಸಿಂಗ್ ಅವರನ್ನು ನಾಮನಿರ್ದೇಶನ ಮಾಡಿದ್ದು, ಆಪ್ ಸುಮನ್ ಸಿಂಗ್ ಅವರನ್ನು ನಾಮನಿರ್ದೇಶನ ಮಾಡಿದೆ.

ಕಳೆದ ಬಾರಿಯೂ ಒಂದು ಮತದಿಂದ ಗೆದ್ದಿದ್ದ ಬಿಜೆಪಿ : ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 14 ಸ್ಥಾನಗಳನ್ನು ಗೆದ್ದಿತ್ತು. ಕೇವಲ 12 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯುವ ಮೂಲಕ ಅಧಿಕಾರ ನಗರ ಪಾಲಿಕೆಯ ಚುಕ್ಕಾಣಿಯನ್ನು ಹಿಡಿದಿತ್ತು. ಅಂದು ಆಪ್​ನ ಒಂದು ಮತ ಅನರ್ಹಗೊಂಡಿತ್ತು. ಹೀಗಾಗಿ ಬಿಜೆಪಿ ಸುಲಭವಾಗಿ ವಿಜಯ ಸಾಧಿಸಿ ಪಾಲಿಕೆ ಗದ್ದುಗೆ ಹಿಡಿದಿತ್ತು. ಈ ಸಲವೂ ಮೇಯರ್​ ಚುನಾವಣೆಯಲ್ಲಿ ಅಂತಹುದೇ ಫಲಿತಾಂಶ ಮರುಕಳಿಸಿದೆ. ಈ ಸಲವೂ ಬಿಜೆಪಿ 1 ಮತದ ಅಂತರದಿಂದ ಗೆದ್ದು ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಬಿಜೆಪಿಯಿಂದ ಅಭಿನಂದನೆ : ಚಂಡೀಗಢ ಬಿಜೆಪಿ ಘಟಕವು ಮೇಯರ್​ ಸ್ಥಾನ ಗೆದ್ದ ಅನೂಪ್​ ಗುಪ್ತಾ ಅವರಿಗೆ ಅಭಿನಂದನೆ ಸಲ್ಲಿಸಿದೆ. “ಚಂಡೀಗಢ ಮೇಯರ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ಅನೂಪ್ ಗುಪ್ತಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ. ಚುನಾವಣಾ ಫಲಿತಾಂಶದ ಹಿನ್ನಲೆ ನಗರದಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸ್​ ಇಲಾಖೆ ಕೈಗೊಂಡಿತ್ತು.

ಇದನ್ನೂ ಓದಿ :ವಿಮಾನದ ತುರ್ತು ಬಾಗಿಲು ತೆರೆದ ಪಕ್ಷವೊಂದಕ್ಕೆ ಸೇರಿದ ಪ್ರಯಾಣಿಕ.. ತಮಿಳುನಾಡು ಸಚಿವರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.