ETV Bharat / bharat

2024ರ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸೀಟು ಗೆದ್ದು 3ನೇ ಅವಧಿಗೆ ಮೋದಿ ಪ್ರಧಾನಿ: ಅಮಿತ್ ಶಾ ಭವಿಷ್ಯ - ಬಿಹು ಸಂಗೀತದ ಬಡಿತ

ಈಶಾನ್ಯ ರಾಜ್ಯದ 14 ಲೋಕಸಭಾ ಸ್ಥಾನಗಳ ಪೈಕಿ 12ರಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂನ ದಿಬ್ರುಗಢದಲ್ಲಿ ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
author img

By

Published : Apr 11, 2023, 6:01 PM IST

ದಿಬ್ರುಗಢ (ಅಸ್ಸಾಂ) : ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದು ಸತತ ಮೂರನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದಿಬ್ರುಗಢದಲ್ಲಿಂದು ಬಿಜೆಪಿ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಶಾ, ಈಶಾನ್ಯ ರಾಜ್ಯದ 14 ಲೋಕಸಭಾ ಸ್ಥಾನಗಳ ಪೈಕಿ 12ರಲ್ಲಿ ಕೇಸರಿ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿಯ ಹಿರಿಯ ನಾಯಕ, ಈಶಾನ್ಯವನ್ನು ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗಿತ್ತು. ಆದರೆ ರಾಹುಲ್ ಗಾಂಧಿಯವರ ಯಾತ್ರೆ (ಭಾರತ್ ಜೋಡೋ ಯಾತ್ರೆ) ಹೊರತಾಗಿಯೂ ಕೈ ಪಕ್ಷ ಮೂರು ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ ಎಂದು ಟೀಕಿಸಿದರು.

ಇತ್ತೀಚೆಗಷ್ಟೇ ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಇತರ ಎರಡು ರಾಜ್ಯಗಳಲ್ಲಿ ಮೈತ್ರಿ ಪಾಲುದಾರರಾಗಿ ಅಧಿಕಾರಕ್ಕೆ ಬಂದಿದೆ.

'ದೇಶಕ್ಕೆ ಅವಮಾನ ಮಾಡಿದ ರಾಹುಲ್‌': ರಾಹುಲ್ ಗಾಂಧಿ ಅವರು ಯುನೈಟೆಡ್ ಕಿಂಗ್‌ಡಮ್ ಭೇಟಿಯ ವೇಳೆ ಭಾರತವನ್ನು ಅವಮಾನಿಸಿದರು. ಅವರು ಸುಳ್ಳಿನ ಮೂಲಕ ದೇಶ ಮತ್ತು ಸರ್ಕಾರದ ಮಾನಹಾನಿ ಮಾಡುವುದನ್ನು ಮುಂದುವರೆಸಿದರೆ, ಭವಿಷ್ಯದಲ್ಲಿ ಕಾಂಗ್ರೆಸ್ ಇಡೀ ದೇಶದಿಂದಲೇ ಮಾಯವಾಗಲಿದೆ ಎಂದು ಎಚ್ಚರಿಕೆ ಕೊಟ್ಟರು.

ಮುಂದುವರೆದು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಎಷ್ಟು ಕೆಟ್ಟದಾಗಿ ಟೀಕಿಸುತ್ತಾರೋ ಅಷ್ಟು ಬಿಜೆಪಿ ಬೆಳೆಯುತ್ತದೆ. ವಿವಾದಾತ್ಮಕ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ, 1958 ಅಥವಾ AFSPA ಅನ್ನು ಅಸ್ಸಾಂನ ಶೇಕಡಾ 70 ರಷ್ಟು ಪ್ರದೇಶದಿಂದ ತೆಗೆದು ಹಾಕಲಾಗಿದೆ. ಬೋಡೋಲ್ಯಾಂಡ್ ಮತ್ತು ಕರ್ಬಿ ಆಂಗ್ಲಾಂಗ್ ಪ್ರದೇಶಗಳು ಶಾಂತಿಯುತವಾಗಿವೆ. ನೆರೆಯ ರಾಜ್ಯಗಳೊಂದಿಗಿನ ಗಡಿ ವಿವಾದಗಳನ್ನು ಪರಿಹರಿಸಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು.

ಇದನ್ನೂ ಓದಿ : ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಇಂದು ವಯನಾಡ್​ಗೆ ರಾಹುಲ್​ ಗಾಂಧಿ ಮೊದಲ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.