ಚೆನ್ನೈ(ತಮಿಳುನಾಡು): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಭಾರತೀಯ ಜನತಾ ಪಾರ್ಟಿ ಇದೀಗ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಇದೇ ಕಾರಣಕ್ಕಾಗಿ ಎಐಎಡಿಎಂಕೆ ಜೊತೆಗಿನ ಸಂಬಂಧ ಮುರಿದುಬಿದ್ದಿದೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಸೀಟು ಹಂಚಿಕೆ ವಿಚಾರವಾಗಿ ಕಳೆದ ನಾಲ್ಕು ದಿನಗಳಿಂದ ಉಭಯ ಪಕ್ಷಗಳ ನಡುವೆ ನಿರಂತರ ಮಾತುಕತೆ ನಡೆದಿತ್ತು. ಆದರೆ, ಸೀಟು ಹಂಚಿಕೆ ಮಾತುಕತೆ ವಿಫಲವಾಗಿರುವ ಕಾರಣ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿರಿ: ಗುಜರಾತ್ನಲ್ಲಿ ಕಿಶನ್ ಹತ್ಯೆ ಪ್ರಕರಣ: ಪರಿಸ್ಥಿತಿ ಉದ್ವಿಗ್ನ, ಪೊಲೀಸರಿಂದ ಲಾಠಿಚಾರ್ಜ್
ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ತಮಿಳುನಾಡಿನಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದ್ದು, ಕಾರ್ಯಕರ್ತರ ನಿರ್ಧಾರಕ್ಕೆ ಮಣಿದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಹಂಚಿಕೊಂಡರು.
-
BJP will contest the upcoming urban local body elections in Tamil Nadu alone, announces State BJP chief K Annamalai
— ANI (@ANI) January 31, 2022 " class="align-text-top noRightClick twitterSection" data="
(File photo) pic.twitter.com/6DcPLIavyY
">BJP will contest the upcoming urban local body elections in Tamil Nadu alone, announces State BJP chief K Annamalai
— ANI (@ANI) January 31, 2022
(File photo) pic.twitter.com/6DcPLIavyYBJP will contest the upcoming urban local body elections in Tamil Nadu alone, announces State BJP chief K Annamalai
— ANI (@ANI) January 31, 2022
(File photo) pic.twitter.com/6DcPLIavyY
ಎಲ್ಲ ನಗರ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಖಾಡಕ್ಕಿಳಿಯಲಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು. ತಮಿಳುನಾಡಿನಲ್ಲಿ ಬಿಜೆಪಿ ಬಲಿಷ್ಠವಾಗಲು ಪಕ್ಷವನ್ನ ಮನೆ ಮನೆಗೆ ಕರೆದೊಯ್ಯಲು ನಾವು ಸಿದ್ಧರಾಗಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ನಡುವಿನ ಮೈತ್ರಿ ಮುಂದುವರೆಯಲಿದೆ ಎಂಬ ಮಾಹಿತಿಯನ್ನು ಸಹ ಇದೇ ವೇಳೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಎಐಎಡಿಎಂಕೆ ಸಂಪೂರ್ಣವಾಗಿ ಬೆಂಬಲ ನೀಡಲಿದ್ದು, 2024ರ ವಿಧಾನಸಭೆ ಚುನಾವಣೆಯವರೆಗೆ ಈ ಮೈತ್ರಿಯಲ್ಲಿ ಯಾವುದೇ ರೀತಿಯ ಅಪಸ್ವರ ಕೇಳಿ ಬರಲ್ಲ ಎಂದರು. ತಮಿಳುನಾಡಿನ 12,838 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 1,374 ನಗರ ಪಾಲಿಕೆ, 3,843 ಪುರಸಭೆ ವಾರ್ಡ್, 7,621 ಪಟ್ಟಣ ಪಂಚಾಯತ್ ವಾರ್ಡ್ಗಳು ಸೇರಿಕೊಂಡಿವೆ. ಫೆ. 19ರಂದು ಚುನಾವಣೆ ನಡೆಯಲಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ