ಗೋಪಿಬಲ್ಲಾವ್‌ಪುರ (ಪಶ್ಚಿಮಬಂಗಾಳ) : ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷ ಬಿಜೆಪಿ ತನ್ನನ್ನು ಮನೆಯೊಳಗೆ ಕೂರಿಸಲು ಬಯಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
"ಚುನಾವಣೆಯ ಸಮಯದಲ್ಲಿ ನಾನು ಹೊರ ಹೋಗಬಾರದು ಎಂದು ಬಿಜೆಪಿಯವರು ನನ್ನನ್ನು ಮನೆಯೊಳಗೆ ಇರಿಸಲು ಬಯಸಿದ್ದರು. ಹಾಗಾಗಿ, ಅವರು ನನ್ನ ಕಾಲಿಗೆ ಗಾಯ ಮಾಡಿಸಿದರು" ಎಂದು ಗಾಲಿಕುರ್ಚಿಯಲ್ಲಿ ಕುಳಿತೇ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಬ್ಯಾನರ್ಜಿ ಹೇಳಿದರು.
"ಅವರು ನನ್ನ ಧ್ವನಿಯನ್ನು ತಡೆಯಲು ಸಾಧ್ಯವಿಲ್ಲ, ನಾವು ಬಿಜೆಪಿಯನ್ನು ಸೋಲಿಸುತ್ತೇವೆ. ನಮ್ಮ ಅಭ್ಯರ್ಥಿಗಳಿಗೆ ನೀವು ಹಾಕುವ ಪ್ರತಿ ಮತಗಳು ನನಗಾಗಿರುತ್ತವೆ" ಎಂದರು. ಹಾಗಾಗಿ, ಎಲ್ಲರೂ ತಪ್ಪದೇ ಟಿಎಂಸಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಜನರಿಗೆ ಮನವಿ ಮಾಡಿದರು.