ಹೈದರಾಬಾದ್(ತೆಲಂಗಾಣ): ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಬಂಧನವಾಗಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಹೈಕಮಾಂಡ್ ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದರ ಜೊತೆಗೆ ಪಕ್ಷದಿಂದ ಯಾಕೆ ಉಚ್ಚಾಟನೆ ಮಾಡಬಾರದು ಎಂಬುದಕ್ಕೆ ಮುಂದಿನ 10 ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.
ತೆಲಂಗಾಣದ ಗೋಶಾಮಹಲ್‌ನ ಶಾಸಕ ರಾಜಾ ಸಿಂಗ್ ರಿಲೀಸ್ ಮಾಡಿದ್ದ ವಿಡಿಯೋದಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಇದು ಹೆಚ್ಚಿನ ವಿರೋಧಕ್ಕೆ ಕಾರಣವಾಗುತ್ತಿದ್ದಂತೆ ತಮಾಷೆಗಾಗಿ ಈ ರೀತಿ ಮಾಡಿರುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಜೊತೆಗೆ ಪ್ರಕರಣ ಕೂಡ ದಾಖಲಾಗಿತ್ತು. ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಐಪಿಸಿಯ 295 (ಎ), 153 (ಎ) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಡಬೀರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
-
BJP suspends party's MLA in Telangana, T Raja Singh; asks him to show cause within 10 days as to why should he not be expelled from the party.
— ANI (@ANI) August 23, 2022 " class="align-text-top noRightClick twitterSection" data="
Earlier today, he was booked for his alleged derogatory comments against Prophet Muhammad.
(File photo) pic.twitter.com/WdWXXSdyML
">BJP suspends party's MLA in Telangana, T Raja Singh; asks him to show cause within 10 days as to why should he not be expelled from the party.
— ANI (@ANI) August 23, 2022
Earlier today, he was booked for his alleged derogatory comments against Prophet Muhammad.
(File photo) pic.twitter.com/WdWXXSdyMLBJP suspends party's MLA in Telangana, T Raja Singh; asks him to show cause within 10 days as to why should he not be expelled from the party.
— ANI (@ANI) August 23, 2022
Earlier today, he was booked for his alleged derogatory comments against Prophet Muhammad.
(File photo) pic.twitter.com/WdWXXSdyML
ಏನಿದು ಪ್ರಕರಣ: ಹೈದರಾಬಾದ್ನಲ್ಲಿ ಹಾಸ್ಯನಟ ಮುನಾವರ್ ಫರುಕಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಇವರ ವಿರುದ್ಧ ಮಾತನಾಡಿದ್ದ ಬಿಜೆಪಿ ಶಾಸಕ ರಾಜಾ ಸಿಂಗ್, ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಲಂಗಾಣದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದವು.
ಇದಕ್ಕೆ ಸಮಜಾಯಿಷಿ ನೀಡುವ ಕೆಲಸಕ್ಕೆ ಕೈಹಾಕಿದ್ದ ಶಾಸಕ, ಕಾಮಿಡಿಯಾಗಿ ಹೇಳಿರುವುದಾಗಿ ಪ್ರತಿಕ್ರಿಯೆ ನೀಡಿದ್ದರು. ಆದರೆ, ಇವರನ್ನ ಬಂಧನ ಮಾಡಬೇಕೆಂದು ಒತ್ತಾಯಿಸಿ, ಅನೇಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಜೊತೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಇಂದು ಬೆಳಗ್ಗೆ ಇವರನ್ನ ಪೊಲೀಸರು ಬಂಧನ ಮಾಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಅಮಾನತು ಮಾಡಿ ಮಹತ್ವದ ಆದೇಶ ಹೊರಹಾಕಿದೆ.
ಕಳೆದ ಕೆಲ ದಿನಗಳ ಹಿಂದೆ ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಕೂಡ ಟಿವಿ ಚರ್ಚೆವೊಂದರಲ್ಲಿ ಭಾಗಿಯಾಗಿ ಮಾತನಾಡ್ತಿದ್ದ ವೇಳೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದರು. ಇದಕ್ಕೆ ಸಿಕ್ಕಾಪಟ್ಟೆ ಟೀಕೆ ಮತ್ತು ಕೆಲವೆಡೆ ಹಿಂಸಾಚಾರಕ್ಕೂ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತು ಮಾಡಲಾಯಿತು. ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದಲ್ಲಿ ಓರ್ವ ವ್ಯಕ್ತಿಯ ಕೊಲೆ ಸಹ ಮಾಡಲಾಗಿತ್ತು.
ಈ ಹಿಂದೆ ನೂಪುರ್ ಶರ್ಮಾ ಹೇಳಿಕೆ ಪ್ರಕರಣದ ವಿಚಾರಣೆ ಸದ್ಯ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದ್ದು, ವಿವಾದಿತ ಹೇಳಿಕೆ ನೀಡಿದ್ದಕ್ಕಾಗಿ ಛೀಮಾರಿ ಸಹ ಹಾಕಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವುಗಳನ್ನ ಒಟ್ಟಿಗೆ ವಿಚಾರಣೆ ನಡೆಸುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ: ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನ