ETV Bharat / bharat

ಕೊರೊನಾ ಭೀತಿ: ರಾಜಸ್ಥಾನದಲ್ಲಿ ಜನಾಕ್ರೋಶ​ ಯಾತ್ರೆ ಸ್ಥಗಿತಗೊಳಿಸಿದ ಬಿಜೆಪಿ

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ರಾಜಸ್ಥಾನದಲ್ಲಿ ಜನಾಕ್ರೋಶ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಬಿಜೆಪಿಗೆ ರಾಜಕೀಯಕ್ಕಿಂತ ಜನರು ಮುಖ್ಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.

bjp-suspends-jan-aakrosh-yatra-in-view-of-global-rise-in-covid-cases
ಕೊರೊನಾ ಭೀತಿ: ರಾಜಸ್ಥಾನದಲ್ಲಿ ಜನಾಕ್ರೋಶ​ ಯಾತ್ರೆ ಸ್ಥಗಿತಗೊಳಿಸಿದ ಬಿಜೆಪಿ
author img

By

Published : Dec 22, 2022, 4:03 PM IST

Updated : Dec 22, 2022, 4:13 PM IST

ನವದೆಹಲಿ: ಜಾಗತಿಕವಾಗಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನದಲ್ಲಿ ಬಿಜೆಪಿ ನಡೆಸುತ್ತಿದ್ದ 'ಜನಾಕ್ರೋಶ​ ಯಾತ್ರೆ'ಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಗುರುವಾರ ಹೇಳಿದ್ದಾರೆ.

ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಡಿಸೆಂಬರ್ 1ರಂದು ಜನಾಕ್ರೋಶ​ ಯಾತ್ರೆಗೆ ಚಾಲನೆ ನೀಡಿದ್ದರು. ರೈತರ ಸಮಸ್ಯೆ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಬಿಜೆಪಿ 'ಜನಾಕ್ರೋಶ ಯಾತ್ರೆ' ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ: ಹೆಚ್ಚುತ್ತಿರುವ ಕೋವಿಡ್​ ಭೀತಿ: ರಾಜ್ಯಗಳಲ್ಲಿ ಕೊರೊನಾ ತುರ್ತು ಸಭೆ

ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ರಾಜಸ್ಥಾನದಲ್ಲಿ ಜನಾಕ್ರೋಶ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಬಿಜೆಪಿಗೆ ರಾಜಕೀಯಕ್ಕಿಂತ ಜನರು ಮುಖ್ಯ. ಜನರ ಸುರಕ್ಷತೆ, ಅವರ ಆರೋಗ್ಯವೇ ನಮ್ಮ ಆದ್ಯತೆಯಾಗಿದೆ ಎಂದು ಅರುಣ್​ ಸಿಂಗ್ ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯನ್ನು 'ಬೆಳಗ್ಗೆ ಮತ್ತು ಸಂಜೆಯ ನಡಿಗೆ' ಎಂದು ಗೇಲಿ ಮಾಡಿರುವ ಅರುಣ್​ ಸಿಂಗ್, ಕಾಂಗ್ರೆಸ್​ ಪಕ್ಷವು ರಾಜಕೀಯಕ್ಕಾಗಿ ಜನರ ಜೀವನದ ಜೊತೆ ಆಟವಾಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಫ್ಲಾಪ್ ಶೋ ಆಗಿದೆ. ಇದು ಬೆಳಗಿನ ಸಂಜೆಯ ನಡಿಗೆ ಬಿಟ್ಟರೆ ಬೇರೇನೂ ಅಲ್ಲ. ಕಾಂಗ್ರೆಸ್ ತನ್ನ ಕ್ಷುಲ್ಲಕ ರಾಜಕೀಯಕ್ಕಾಗಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ಭಾರತ್​ ಜೋಡೋ ಯಾತ್ರೆಗೆ ಅಡ್ಡಿ ಯತ್ನ: ಕರ್ನಾಟಕ ಬಿಜೆಪಿ ಯಾತ್ರೆ ಪ್ರಶ್ನಿಸಿದ ಕಾಂಗ್ರೆಸ್​

ಇತ್ತ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಜಾಗತಿಕವಾಗಿ ಕೋವಿಡ್​ ಪ್ರಕರಣಗಳ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷಾಚರಣೆಗಳ ದೃಷ್ಟಿಯಿಂದ ಫೇಸ್ ಮಾಸ್ಕ್ ಧರಿಸುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಲೋಕಸಭೆಯಲ್ಲಿ ಹೇಳಿಕೆ ನೀಡಿರುವ ಮಾಂಡವಿಯಾ, ಕೊರೊನಾ ವೈರಸ್‌ ನಿರಂತರವಾಗಿ ಉಲ್ಬಣವಾಗುತ್ತಿದ್ದು, ಪ್ರತಿಯೊಂದು ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಸದ್ಯ ದೇಶದಲ್ಲಿ ಪ್ರತಿದಿನ ಸರಾಸರಿ 153 ಕೋವಿಡ್​ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಪ್ರಪಂಚದಾದ್ಯಂತ ಪ್ರತಿದಿನ 5.87 ಲಕ್ಷ ಪ್ರಕರಣಗಳು ದೃಢಪಡುತ್ತಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​ ಹೆಚ್ಚಳ; ಚೀನಾದಿಂದ ಬರುವ ವಿಮಾನಗಳ ನಿಷೇಧ ಸದ್ಯಕ್ಕಿಲ್ಲ

Last Updated : Dec 22, 2022, 4:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.