ಚೆನ್ನೈ (ತಮಿಳುನಾಡು): ತಮಿಳುನಾಡಿನ ಚೆನ್ನೈನಲ್ಲಿ ಬಿಜೆಪಿಯ ಎಸ್‌ಸಿ-ಎಸ್‌ಟಿ ವಿಭಾಗದ ಜಿಲ್ಲಾ ಕಾರ್ಯದರ್ಶಿ ಬಾಲಚಂದರ್ (34) ಅವರನ್ನು ಕೊಲೆ ಮಾಡಲಾಗಿದೆ. ಯಾವುದೋ ಕಲಹದ ಕಾರಣದಿಂದ ಆರು ಜನರು ಸೇರಿಕೊಂಡು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ಚಿಂತದ್ರಿಪೇಟ್ನಲ್ಲಿ ಬಾಲಚಂದರ್ ವಾಸವಿದ್ದರು. ಇದೇ ಪ್ರದೇಶದ ನಿವಾಸಿಗಳಾದ ಮೋಹನ್ ಮತ್ತು ಈತನ ಮಗ ಪ್ರದೀಪ್ ಎಂಬುವವರೊಂದಿಗೆ ಕಲಹ ಉಂಟಾಗಿತ್ತು. ಅಲ್ಲದೇ, ಬಾಲಚಂದರ್ ಅವರಿಗೆ ಜೀವ ಬೆದರಿಕೆಯೂ ಇತ್ತು. ಹೀಗಾಗಿ ತಮಗೆ ಪೊಲೀಸ್ ಭದ್ರತೆ ಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಅಂತೆಯೇ ಅವರಿಗೆ ಗನ್‌ಮ್ಯಾನ್ ಒದಗಿಸಲಾಗಿದೆ. ಆದರೆ, ಈ ಗನ್‌ಮ್ಯಾನ್ ಟೀ ಕುಡಿಯಲೆಂದು ಹೋದಾಗ ಬಾಲಚಂದರ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜಿವಾಲ್, ಹಳೆಯ ವೈಷಮ್ಯದಿಂದ ಬಾಲಚಂದರ್ ಕೊಲೆಯಾಗಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೊಲೆ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದರು. ಇತ್ತ, ಧಾರ್ಮಿಕ ವಿಷಯಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಬಾಲಚಂದರ್ ಹಾಕುತ್ತಿದ್ದರು. ಈ ಸಂಬಂಧ ಕೂಡ ಅವರಿಗೆ ಜೀವ ಬೆದರಿಕೆಗಳು ಬಂದಿದ್ದವು ಎನ್ನಲಾಗುತ್ತಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ : ಮೂವರು ಪಾಕಿಸ್ತಾನಿ ಉಗ್ರರ ಎನ್ಕೌಂಟರ್