ETV Bharat / bharat

BJP: ಬೌದ್ಧ ಯುವತಿಯೊಂದಿಗೆ ಓಡಿಹೋದ ಮಗ; ಲಡಾಖ್ ಬಿಜೆಪಿ ಉಪಾಧ್ಯಕ್ಷ ನಜೀರ್ ಅಹ್ಮದ್ ವಜಾ - ಬಿಜೆಪಿ

Ladakh BJP Vice President Sacked: ಬೌದ್ಧ ಧರ್ಮದ ಯುವತಿಯೊಂದಿಗೆ ಓಡಿಹೋದ ಹಿನ್ನೆಲೆಯಲ್ಲಿ ಪಕ್ಷದ ಲಡಾಖ್ ಘಟಕದ ರಾಜ್ಯ ಉಪಾಧ್ಯಕ್ಷ ನಜೀರ್ ಅಹ್ಮದ್ ಅವರನ್ನು ಬಿಜೆಪಿ ವಜಾಗೊಳಿಸಿದೆ.

BJP sacks Ladakh party vice-president Nazir Ahmed after son elopes with Buddhist girl
ಲಡಾಖ್ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಜೀರ್ ಅಹ್ಮದ್ ವಜಾ
author img

By

Published : Aug 17, 2023, 6:48 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೇಂದ್ರಾಡಳಿತ ಪ್ರದೇಶ ಲಡಾಖ್ ಬಿಜೆಪಿ ಘಟಕದ ರಾಜ್ಯ ಉಪಾಧ್ಯಕ್ಷ ನಜೀರ್ ಅಹ್ಮದ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ. ನಜೀರ್​ ಅವರ ಪುತ್ರ ಮಂಜೂರ್​ ಅಹ್ಮದ್​ ಬೌದ್ಧ ಧರ್ಮದ ಯುವತಿಯೊಂದಿಗೆ ಓಡಿಹೋದ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಕಮಲ ಪಕ್ಷ ಈ ಕ್ರಮ ಕೈಗೊಂಡಿದೆ.

ಲೇಹ್‌ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಫುಂಚೋಕ್ ಸ್ಟಾಂಜಿನ್ ಅಧ್ಯಕ್ಷತೆಯಲ್ಲಿ ಬುಧವಾರ ಕಾರ್ಯಕಾರಿ ಸದಸ್ಯರ ಸಭೆ ನಡೆಸಲಾಗಿತ್ತು. ಸಭೆಯ ನಂತರ ನಜೀರ್ ಅಹ್ಮದ್‌ರನ್ನು ರಾಜ್ಯ ಉಪಾಧ್ಯಕ್ಷ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಪಕ್ಷದಿಂದ ಅಧಿಕೃತ ಸುತ್ತೋಲೆಯನ್ನೂ ಹೊರಡಿಸಲಾಗಿದೆ.

ಇದನ್ನೂ ಓದಿ: Ghulam Nabi Azad: ಹಿಂದೂ ಧರ್ಮ ಪುರಾತನವಾದದ್ದು; ಇಸ್ಲಾಂ ಹುಟ್ಟಿದ್ದೇ 1,500 ವರ್ಷಗಳ ಹಿಂದೆ- ಗುಲಾಂ ನಬಿ ಆಜಾದ್​

''ಪಕ್ಷದ ರಾಜ್ಯ ಉಪಾಧ್ಯಕ್ಷ ನಜೀರ್ ಅಹ್ಮದ್ ಅವರು ತಮ್ಮ ಮಗ ಮಂಜೂರ್ ಅಹ್ಮದ್​​ ಬೌದ್ಧ ಯುವತಿಯೊಂದಿಗೆ ಓಡಿಹೋಗಿರುವ ಸೂಕ್ಷ್ಮ ವಿಚಾರದಲ್ಲಿ ತಾವು ಭಾಗಿಯಾಗಿರುವುದನ್ನು ವಿವರಿಸಲು ಎಲ್ಲ ಅವಕಾಶಗಳನ್ನು ಹೊಂದಿದ್ದರು. ಆದರೆ, ಸೂಕ್ತ ವಿವರಣೆ ನೀಡಿಲ್ಲ'' ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುಂದುವರೆದು, ''ಘಟನೆಯು ಲಡಾಖ್‌ನಲ್ಲಿರುವ ಎಲ್ಲ ಧಾರ್ಮಿಕ ಸಮುದಾಯಗಳಿಗೆ ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಇದು ಈ ಪ್ರದೇಶದ ಕೋಮು ಸೌಹಾರ್ದತೆ ಮತ್ತು ಜನರ ನಡುವಿನ ಐಕ್ಯತೆಗೆ ಧಕ್ಕೆ ತರುತ್ತದೆ. ಆದ್ದರಿಂದ ಸೂಕ್ತ ಸ್ಪಷ್ಟನೆ ನೀಡಲು ನಿರಾಕರಿಸಿದ ಪರಿಣಾಮ ನಜೀರ್ ಅವರನ್ನು ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಲು ಪಕ್ಷದ ಘಟಕ ನಿರ್ಧರಿಸಿದೆ. ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬರಲಿದೆ'' ಎಂದು ಉಲ್ಲೇಖಿಸಲಾಗಿದೆ.

ರಾಜಸ್ಥಾನ ಸಚಿವ ವಜಾ ಪ್ರಕರಣ: ಕಳೆದ ತಿಂಗಳು ರಾಜಸ್ಥಾನ ಸಚಿವ ರಾಜೇಂದ್ರ ಗುಧಾ ಅವರನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿವ ಸ್ಥಾನದಿಂದ ವಜಾ ಮಾಡಿದ್ದರು. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿಧಾನಸಭೆಯಲ್ಲಿ ತಮ್ಮದೇ ಸರ್ಕಾರದ ವಿರುದ್ಧದ ವಾಗ್ದಾಳಿ ನಡೆಸಿದ ಕಾರಣಕ್ಕೆ ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿತ್ತು.

ರಾಜೇಂದ್ರ ಗುಧಾ ಸೈನಿಕ ಕಲ್ಯಾಣ್ (ಸ್ವತಂತ್ರ ಉಸ್ತುವಾರಿ), ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ, ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿದ್ದರು. ''ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜಸ್ಥಾನ ನಂಬರ್ ಒನ್ ಸ್ಥಾನದಲ್ಲಿದೆ. ಸತ್ಯ ಹೇಳಿದ್ದಕ್ಕೆ ನನಗೆ ಈ ಶಿಕ್ಷೆಯಾಗಿದೆ'' ಎಂದು ರಾಜೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಗೆಹ್ಲೋಟ್ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪವನ್ನೂ ಅವರು ಮಾಡಿದ್ದರು.

ಇದನ್ನೂ ಓದಿ: Assembly Elections: ಮಧ್ಯಪ್ರದೇಶ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.