ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಅನೇಕ ಮಕ್ಕಳು ತಮ್ಮ ಕುಟುಂಬ ಕಳೆದುಕೊಂಡು ಅನಾಥವಾಗಿದ್ದು, ಅಂತಹ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ವಿಶೇಷ ಯೋಜನೆ ರೂಪಿಸಲು ಮುಂದಾಗಿದೆ.
ಅನಾಥವಾಗಿರುವ ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮ ಸಿದ್ಧಪಡಿಸುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಈಗಾಗಲೇ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಸೂಚನೆ ನೀಡಿದೆ. ಮೇ. 30ರಂದು ಮೋದಿ ಸರ್ಕಾರ ಏಳು ವರ್ಷಗಳ ಅಧಿಕಾರ ಪೂರ್ಣಗೊಳಿಸಲಿರುವ ಕಾರಣ ಈ ಯೋಜನೆ ಜಾರಿಗೊಳ್ಳಲಿದೆ.
ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳಿಗೆ ನಡ್ಡಾ ಪತ್ರ ಬರೆದಿದ್ದು, ತಮ್ಮ ರಾಜ್ಯಗಳ ಪರಿಸ್ಥಿತಿ, ಅಗತ್ಯತೆ ಮತ್ತು ಸಂಪ್ರದಾಯ ಆಧರಿಸಿ ಕೋವಿಡ್ನಿಂದ ಪೋಷಕರ ಕಳೆದಕೊಂಡಿರುವ ಮಕ್ಕಳ ಕಲ್ಯಾಣಕ್ಕಾಗಿ ಕರಡು ಸಿದ್ಧಪಡಿಸಿ ಎಂದಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದ ಮಗನ ಕಳೆದುಕೊಂಡ ತಂದೆಗೆ 1 ಕೋಟಿ ರೂ. ಪರಿಹಾರ ನೀಡಿದ ಕೇಜ್ರಿವಾಲ್
ಪ್ರಧಾನಿ ಮೋದಿ ಅಧಿಕಾರವಧಿ ಏಳು ವರ್ಷ ಪೂರೈಕೆ ಮಾಡುತ್ತಿರುವ ಕಾರಣ ಈ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಆದರೆ, ಯಾವುದೇ ರೀತಿಯ ಸಮಾರಂಭ ನಡೆಸಲು ಮುಂದಾಗಿಲ್ಲ.
ಸಾಂಕ್ರಾಮಿಕ ರೋಗ ಭಾರತ ಮಾತ್ರವಲ್ಲ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿದೆ. ಅನೇಕ ಪ್ರೀತಿ - ಪಾತ್ರರನ್ನ ಕಳೆದುಕೊಂಡಿದೆ. ಇದರಿಂದ ಅನೇಕ ಮಕ್ಕಳು ಅನಾಥವಾಗಿವೆ. ಇದೀಗ ಅವರ ಭವಿಷ್ಯದ ಬಗ್ಗೆ ಯೋಚಿಸಬೇಕಾಗಿದ್ದು, ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ಎನ್ಡಿಎ ಏಳು ವರ್ಷ ಪೂರೈಕೆ ಮಾಡುತ್ತಿರುವ ಕಾರಣ ಸೇವಾ ಹೈ ಸಂಗಥನ್ ಹೈ ಎಂಬ ಮಂತ್ರದೊಂದಿಗೆ ಈ ಯೋಜನೆ ಜಾರಿಗೊಳ್ಳಲಿದೆ.