ETV Bharat / bharat

ಮುನ್ಸಿಪಲ್​ ಚುನಾವಣೆ ಮೇಲೆ ಕಣ್ಣು.. ಪ.ಬಂಗಾಳದಲ್ಲಿ ಬಿಜೆಪಿ ಪುನರ್​​ರಚನೆ.. - ಬಂಗಾಳದಲ್ಲಿ ಬಿಜೆಪಿ ಪುನರ್​​ರಚನೆ

ಪಶ್ಚಿಮ ಬಂಗಾಳ ರಾಜ್ಯ ಸಮಿತಿ ಕಾರ್ಯನಿರ್ವಹಣೆ ಬಗ್ಗೆ ಈಗಾಗಲೇ ಆರ್​ಎಸ್​ಎಸ್​​ ಅತೃಪ್ತಿ ಹೊಂದಿದೆ. 2021ರ ಸೋಲಿನ ನಂತರ ಈಗಾಗಲೇ ತನ್ನ ಅಸಮಾಧಾನ ಸಹ ಹೊರ ಹಾಕಿದೆ. ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಪ್ರಮುಖವಾಗಿ ಹೌರಾ ಮತ್ತು ಕೋಲ್ಕತ್ತಾ ಮೇಲೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಲಾಗಿದೆ..

BJP reshuffle in Bengal
BJP reshuffle in Bengal
author img

By

Published : Oct 18, 2021, 8:59 PM IST

ಕೋಲ್ಕತ್ತಾ (ಪಶ್ಚಿಮಬಂಗಾಳ) : ಮುಂಬರುವ ಮುನ್ಸಿಪಲ್​ ಚುನಾವಣೆ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಾರ್ಟಿ, ಇದೀಗ ಪಕ್ಷದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಹೀಗಾಗಿ, ರಾಜ್ಯ ಬಿಜೆಪಿಯಲ್ಲಿ ಕೆಲ ಸ್ಥಾನ ಪುನರ್​​ ರಚನೆ ಮಾಡಲು ಇರಾದೆ ಇಟ್ಟುಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಅನೇಕ ಬಿಜೆಪಿ ಮುಖಂಡರು ಟಿಎಂಸಿ ಸೇರಿದ್ದಾರೆ. ಹೀಗಾಗಿ, ಅಲ್ಲಿನ ಪಕ್ಷದ ಪುನರ್​ರಚನೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

ರಾಜ್ಯ ಸಮಿತಿ ರಚನೆ ಸೇರಿದಂತೆ ಎಲ್ಲ ವಿಭಾಗ ಇದೀಗ ಪುನರ್​ರಚನೆಯಾಗಲಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಸ್ಥಾನಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ. ಪ್ರಮುಖವಾಗಿ ದೇಬೋಜಿತ್​ ಸರ್ಕಾರ್, ಡಾ. ಇಂದ್ರನಿಲ್​​ ಖಾ, ಲೋಕನಾಥ್​ ಚಟ್ಟೋಪಾಧ್ಯಾಯ ಮತ್ತು ದೇಬ್ತಾನು ಭಟ್ಟಾಚಾರ್ಯರಂತಹ ಯುವ ಮುಖಗಳಿಗೆ ರಾಜ್ಯ ಸಮಿತಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರ್​​ಎಸ್​ಎಸ್​ಗೆ ಹತ್ತಿರ ಇರುವ ಮುಖಗಳಿಗೆ ರಾಜ್ಯ ಸಮಿತಿಯಲ್ಲಿ ಚಾನ್ಸ್​ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಚೀನಾಗೆ ಕೌಂಟರ್​ ನೀಡಲು ಹೊಸ ಆಯುಧ.. ಭಾರತೀಯ ಸೇನೆಗೆ ತ್ರಿಶೂಲ್​, ವಜ್ರ!

ಪಶ್ಚಿಮ ಬಂಗಾಳ ರಾಜ್ಯ ಸಮಿತಿ ಕಾರ್ಯನಿರ್ವಹಣೆ ಬಗ್ಗೆ ಈಗಾಗಲೇ ಆರ್​ಎಸ್​ಎಸ್​​ ಅತೃಪ್ತಿ ಹೊಂದಿದೆ. 2021ರ ಸೋಲಿನ ನಂತರ ಈಗಾಗಲೇ ತನ್ನ ಅಸಮಾಧಾನ ಸಹ ಹೊರ ಹಾಕಿದೆ. ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಪ್ರಮುಖವಾಗಿ ಹೌರಾ ಮತ್ತು ಕೋಲ್ಕತ್ತಾ ಮೇಲೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಲಾಗಿದೆ.

ಹೀಗಾಗಿ, ಉತ್ತರ ಕೋಲ್ಕತ್ತಾ ಜಿಲ್ಲಾ ಅಧ್ಯಕ್ಷರಾಗಿರುವ ಶಿಬಾಜಿ ಸಿನ್ಹರಾಯ್​ ಅವರ ಸ್ಥಾನಕ್ಕೆ ಸಜಲ್ ಘೋಷ್​, ದಕ್ಷಿಣ ಕೋಲ್ಕತ್ತಾ ಜಿಲ್ಲಾ ಅಧ್ಯಕ್ಷರಾಗಿ ಇಂದ್ರಜಿತ್​ ಖಾಟಿಕ್​​ ಅಧಿಕಾರ ವಹಿಸಿಕೊಳ್ಳಬಹುದು ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್ ಮಜುಂದಾರ್, ನಿರ್ದಿಷ್ಟ ಹುದ್ದೆಯಲ್ಲಿರುವ ಕೆಲವರ ಹುದ್ದೆ ಬದಲಾವಣೆ ಮಾಡುವುದು ಬಿಜೆಪಿ ಸಂಪ್ರದಾಯ. ದೀಪಾವಳಿ ಮುಗಿದ ಬಳಿಕ ಈ ಪ್ರಕ್ರಿಯೆ ಆರಂಭವಾಗಲಿದೆ. ಪಕ್ಷದ ಹೈಕಮಾಂಡ್​​ ನಿರ್ದೇಶನದಂತೆ ಎಲ್ಲವೂ ಬದಲಾವಣೆಯಾಗಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.