ನವದೆಹಲಿ: 2021-22ರ ಹಣಕಾಸು ವರ್ಷದಲ್ಲಿ ಭಾರತೀಯ ಜನತಾ ಪಾರ್ಟಿ 1,917.12 ಕೋಟಿ ರೂ. ಗಳನ್ನು ಸಂಗ್ರಹಿಸಿದೆ ಎಂದು ವರದಿ ಮಾಡಿದೆ. ಇದರಲ್ಲಿ 1,033.7 ಕೋಟಿ ರೂಗಳನ್ನು ಚುನಾವಣಾ ಬಾಂಡ್ (ಎಲೆಕ್ಟೊರಲ್ ಬಾಂಡ್) ಮೂಲಕ ಪಡೆದುಕೊಂಡಿದ್ದು, 854.46 ಕೋಟಿ ರೂ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಇನ್ನು ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷವು 541.27 ಕೋಟಿ ರೂಪಾಯಿಗಳ ಮೊತ್ತವನ್ನು ಸಂಗ್ರಹ ಮಾಡಿದ್ದು, ಇದರಲ್ಲಿ 400.41 ಕೋಟಿ ರೂ. ವೆಚ್ಚವಾಗಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) 2.87 ಕೋಟಿ ರೂಪಾಯಿಗಳ ಮೊತ್ತವನ್ನು ಸಂಗ್ರಹಿಸಿದ್ದು, 1.18 ಕೋಟಿ ರೂಪಾಯಿ ವೆಚ್ಚದ ವರದಿಯನ್ನು ನೀಡಿದೆ ಎಂದು ಮಂಗಳವಾರ ಚುನಾವಣಾ ಆಯೋಗವು ವಾರ್ಷಿಕ ವರದಿಗಳನ್ನು ಸಾರ್ವಜನಿಕರಿಗಾಗಿ ಪ್ರಕಟಣೆ ಮಾಡಿದೆ.
ಚುನಾವಣಾ ಬಾಂಡ್ಗಳನ್ನು 2017ರಲ್ಲಿ ಆರಂಭಿಸಲಾಯಿತು. ಭಾರತದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ವ್ಯಕ್ತಿಗಳು ಮತ್ತು ಕಂಪನಿಗಳು ಖರೀದಿಸಬಹುದಾದ ಹಣಕಾಸಿನ ಸಾಧನ ಇದಾಗಿದೆ. ರಾಜಕೀಯ ಪಕ್ಷಗಳಿಗೆ ಚನಾವಣಾ ಬಾಂಡ್ಗಳು ಅನಾಮದೇಯ ದೇಣಿಗೆಗಳನ್ನು ನೀಡಲು ಅವಕಾಶ ಇರುವುದರಿಂದ ಭ್ರಷ್ಟಾಚಾರ ಮತ್ತು ಅಧಿಕಾರ ದುರಪಯೋಗ ಆಗುವ ಸಾಧ್ಯತೆ ಇದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವರು ಸುಪ್ರೀಂಕೋರ್ಟ್ನ ಕದ ಕೂಡಾ ತಟ್ಟಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 16 ರಂದು ತ್ರಿಪುರಾ, ಫೆಬ್ರವರಿ 27 ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ
ಸರ್ಕಾರೇತರ ಸಂಸ್ಥೆಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ:ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪ್ರಶ್ನಿಸಿ ಸಿಪಿಐ (ಎಂ), ಎಡಿಆರ್ ಮತ್ತು ಇತರ ಎನ್‌ಜಿಒಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಚುನಾವಣಾ ಬಾಂಡ್ ಯೋಜನೆಯು ಖಾಸಗಿ ಸಂಸ್ಥೆಗಳಿಂದ ರಾಜಕೀಯ ಪಕ್ಷಕ್ಕೆ ಹಣ ನೀಡುವುದರಿಂದ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತದೆ ಮತ್ತು ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ರಾಷ್ಟ್ರೀಯ ಯಾರು ಹಣವನ್ನು ನೀಡಿದ್ದಾರೆ ಎಂದು ತಿಳಿದುಕೊಳ್ಳಲು ಮತ್ತು ಸಾರ್ವಜನಿಕರ ನಡುವೆ ಪಾರದರ್ಶಕತೆಗೆ ಸಹಾಯವಾಗುತ್ತದೆ ಎಂದು ಸರ್ಕಾರೇತರ ಸಂಸ್ಥೆಗಳು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ವಾದ ಮಂಡಿಸಿವೆ.
ಸುಪ್ರೀಂ ಕೋರ್ಟ್‌ನಲ್ಲಿ ನೀಡಿದ ಅಫಿಡಿವಿಟ್ನಲ್ಲಿ ಕೇಂದ್ರ ಚುನಾವಣಾ ಆಯೋಗವೂ ಚುನಾವಣಾ ಬಾಂಡ್ಗೆ ಕಳವಳ ವ್ಯಕ್ತಪಡಿಸಿದೆ. ಚುನಾವಣಾ ಬಾಂಡ್ಗಳು ರಾಜಕೀಯ ಪಕ್ಷಗಳಿಗೆ ಶೆಲ್ ಕಂಪನಿಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಸೃಷ್ಠಿಸುತ್ತವೆ ಎಂದು ಚುನಾವಣಾ ಆಯೋಗದ ಅಫಿಡಿವಿಡ್ ಹೇಳುತ್ತದೆ. ಅರ್ಜಿಗಳ ತೀರ್ಪಿನವರೆಗೆ ಚುನಾವಣಾ ಬಾಂಡ್ಗಳಿಗೆ ತಡೆ ನೀಡಬೇಕೆಂಬ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈಗ ಇದೇ ತಿಂಗಳ ಅಂತ್ಯದಲ್ಲಿ ಸುಪ್ರೀಂ ಕೋರ್ಟ್ ಅರ್ಜಿಗಳನ್ನು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ಮದುರೈ: ಜಲ್ಲಿಕಟ್ಟು ಸ್ಪರ್ಧೆಯಲ್ಲಿ 53 ಜನರಿಗೆ ಗಾಯ, ಗೆದ್ದವನಿಗೆ 7 ಲಕ್ಷ ರೂ. ಬಹುಮಾನ!