ETV Bharat / bharat

ರಾಹುಲ್ ವಿದೇಶದಲ್ಲಿ ಭೇಟಿಯಾಗುವ ಉದ್ಯಮಿಗಳ ಹೆಸರು ಬಹಿರಂಗಪಡಿಸಲು ಬಿಜೆಪಿ ಆಗ್ರಹ - ರಾಹುಲ್ ಗಾಂಧಿ

ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದು ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಅವರು ಕೂಡಾ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಿದರು.

BJP MP Ravi Shankar Prasad
ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್
author img

By

Published : Apr 10, 2023, 7:18 PM IST

ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಪಾಟ್ನಾ (ಬಿಹಾರ): ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಅವರು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಕ್ಸಮರ ನಡೆಸಿದರು. ರಾಹುಲ್ ವಿದೇಶ ಪ್ರವಾಸಕ್ಕೆ ಹೋದಾಗ ಭೇಟಿಯಾಗುವ 'ಅನಪೇಕ್ಷಿತ ಉದ್ಯಮಿಗಳ' ಬಗ್ಗೆ ಪ್ರಶ್ನಿಸಿದರು. ಪಾಟ್ನಾದಲ್ಲಿಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಪ್ರತಿ 4ರಿಂದ 5 ತಿಂಗಳಿಗೊಮ್ಮೆ ವಿದೇಶ ಪ್ರವಾಸ: ''ರಾಹುಲ್​ ಗಾಂಧಿ ವಿದೇಶ ಪ್ರವಾಸದಿಂದ ಹಿಂತಿರುಗಿದ ನಂತರ ಹೆಚ್ಚು ಆಕ್ರಮಣಕಾರಿಯಾಗುತ್ತಾರೆ'' ಎಂದು ಹೈಲೈಟ್ ಮಾಡಿದ ಅವರು, "ಅವರು ಪ್ರತಿ 4ರಿಂದ 5 ತಿಂಗಳಿಗೊಮ್ಮೆ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ಅಲ್ಲಿ ಅವರು ಯಾರನ್ನು ಭೇಟಿಯಾಗುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಅವರು ಭೇಟಿಯಾಗುವ ಈ ಅನಪೇಕ್ಷಿತ ಉದ್ಯಮಿಗಳು ಯಾರು? ಅವರು ಈ ಪ್ರವಾಸಗಳಿಂದ ಹಿಂದಿರುಗಿದ ನಂತರ, ಭಾರತದ ಮೇಲೆ, ಪ್ರಧಾನ ಮಂತ್ರಿಯ ಮೇಲೆ, ಭಾರತದ ಪ್ರಗತಿಯ ಬಗ್ಗೆ ತೀಕ್ಷ್ಣವಾಗಿ ದಾಳಿ ಮಾಡುವುದೇಕೆ? ಎಂದು ಕೇಳಿದರು.

''ಕಳೆದ 9 ವರ್ಷಗಳಲ್ಲಿ ರಾಹುಲ್ ಗಾಂಧಿ ದೇಶವನ್ನು ಹೊಗಳುವ ಒಂದೇ ಒಂದು ಪದವನ್ನೂ ಬಳಸಿಲ್ಲ'' ಎಂದ ಅವರು, "ಭಾರತ ಇಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶ. ಕೋವಿಡ್​ ಸಾಂಕ್ರಾಮಿಕ ಸಮಯದಲ್ಲಿ, ಜಾಗತಿಕ ಮಟ್ಟದಲ್ಲಿ ಭಾರತವು ತನ್ನ ಲಸಿಕೆ ಆವಿಷ್ಕಾರದೊಂದಿಗೆ ತನ್ನ ಛಾಪು ಮೂಡಿಸಿದಾಗ, ರಾಹುಲ್ ಅದನ್ನೂ ಕೂಡಾ ಸಹ ಪ್ರಶ್ನಿಸಿದರು. ಇದು ಭಾರತದ ಜಾಗತಿಕ ಇಮೇಜ್ ಹಾಳು ಮಾಡಲು ಬಯಸುವ ಭಾರತ ವಿರೋಧಿ ಉದ್ಯಮಿಯ ಇಚ್ಛೆಯಂತೆ ಕೆಲಸ ಮಾಡುತ್ತಿದ್ದಾರಾ ಎಂದು ಯೋಚಿಸುವಂತೆ ಮಾಡುತ್ತದೆ. ಅವರ ಅಜೆಂಡಾ ಏನು? ಎಂದರು.

ಆಜಾದ್ ಹೇಳಿಕೆ ಉಲ್ಲೇಖಿಸಿದ ರವಿಶಂಕರ್, ''ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ತುಂಬಾ ನಿಷ್ಠರಾಗಿದ್ದ ಗುಲಾಂ ನಬಿ ಆಜಾದ್, ರಾಹುಲ್ ವಿದೇಶದಲ್ಲಿ ಭೇಟಿಯಾಗುವ ಕನಿಷ್ಠ 10 ಅನಪೇಕ್ಷಿತ ಉದ್ಯಮಿಗಳ ಹೆಸರನ್ನು ಹೇಳಬಹುದು. ಅವರು ಯಾರೆಂದು ತಿಳಿದುಕೊಳ್ಳಲು ರಾಷ್ಟ್ರ ಕೂಡಾ ಬಯಸುತ್ತದೆ. ರಾಹುಲ್ ತಮ್ಮ ವಿದೇಶ ಪ್ರವಾಸದಲ್ಲಿ ಯಾರನ್ನು ಭೇಟಿ ಮಾಡುತ್ತಾರೆ ಎಂಬುದನ್ನು ಬಿಜೆಪಿ ತಿಳಿಯಲು ಬಯಸುತ್ತದೆ'' ಎಂದು ಅವರು ಪುನರುಚ್ಚರಿಸಿದರು.

  • …their entire family (the Gandhis) have all along had association with businessmen, including him (Rahul Gandhi). He (Rahul) goes abroad and meets undesirable businessmen…

    - Ghulam Nabi Azad

    Rahul Gandhi must explain who are these businessmen he meets and for what purpose? pic.twitter.com/2juk0GlvhW

    — BJP (@BJP4India) April 9, 2023 " class="align-text-top noRightClick twitterSection" data=" ">

ಗುಲಾಂ ನಬಿ ಆಜಾದ್ ಹೇಳಿದ್ದೇನು?: ನಿನ್ನೆ ಬಿಜೆಪಿಯ ಅಧಿಕೃತ ಟ್ವಿಟರ್​ ಖಾತೆಯ ಮೂಲಕ, ದೂರದರ್ಶನದಲ್ಲಿ ನಡೆದ ಸಂದರ್ಶನದ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ವಿಡಿಯೋದಲ್ಲಿ ಆಜಾದ್, "ಅವರ ಇಡೀ ಕುಟುಂಬ (ಗಾಂಧಿ) ಅವರು (ರಾಹುಲ್ ಗಾಂಧಿ) ಸೇರಿದಂತೆ ಉದ್ಯಮಿಗಳೊಂದಿಗೆ ಒಡನಾಟ ಹೊಂದಿದ್ದಾರೆ. ಅವರು (ರಾಹುಲ್) ವಿದೇಶಕ್ಕೆ ಹೋಗಿ ಅನಪೇಕ್ಷಿತ ಉದ್ಯಮಿಗಳನ್ನು ಭೇಟಿಯಾಗುತ್ತಾರೆ ಎಂದಿದ್ದರು.

ಸಂದರ್ಶನದಲ್ಲಿ ಆಜಾದ್, ಗಾಂಧಿ ಕುಟುಂಬದ ಮೇಲಿನ ಗೌರವದ ಕಾರಣ, ಯಾರ ಹೆಸರನ್ನೂ ಹೇಳಲು ನಿರಾಕರಿಸಿದರು. ಆದರೆ, ರಾಹುಲ್ ದೇಶದ ಹೊರಗಿನ ಅನಪೇಕ್ಷಿತ ಉದ್ಯಮಿಗಳನ್ನು ಭೇಟಿಯಾದ ಉದಾಹರಣೆಯನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆ ರಾಷ್ಟ್ರೀಯ ವಿಷಯವಲ್ಲ: ಶರದ್ ಪವಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.