ಮುಂಬೈ: ಮೀಸಲಾತಿ ಕೊಡಿಸಲಾಗದಿದ್ದರೆ ಮನೆಗೆ ಹೋಗಿ ಅಡುಗೆ ಮಾಡುತ್ತಾ ಕೂರಿ. ಸಂಸದರಾದ ನೀವು ದೆಹಲಿಗೆ ಹೋಗಲಾಗದಿದ್ದರೆ, ಮಸಣಕ್ಕೆ ಹೋಗಿ..!
ಈ ರೀತಿಯಾಗಿ, ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ವೈಯಕ್ತಿಕವಾಗಿ ನಿಂದಿಸಿದ್ದಾರೆ. ಇದು ವಿವಾದ ಸೃಷ್ಟಿಸಿದ್ದು, ಎನ್ಸಿಪಿ ಮತ್ತು ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಸರ್ಕಾರ ಮತ್ತು ವಿಪಕ್ಷ ಬಿಜೆಪಿ ಮಧ್ಯೆ ಒಬಿಸಿ ಮೀಸಲಾತಿ ಕದನ ತಾರಕಕ್ಕೇರಿದೆ. ಇಂದು ನಡೆದ ಬಿಜೆಪಿ ಸಭೆಯಲ್ಲಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚದ್ರಕಾಂತ್ ಪಾಟೀಲ್ ಅವರು, ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ವಿರುದ್ಧ ವೈಯಕ್ತಿಕ ನಿಂದನೆಯ ಪದ ಬಳಕೆ ಮಾಡಿದ್ದಾರೆ.
ಒಬಿಸಿಗೆ ರಾಜಕೀಯ ಮೀಸಲಾತಿ ಕೊಡಿಸಲಾಗದಿದ್ದರೆ ಮನೆಗೆ ಹೋಗಿ ಅಡುಗೆ ಮಾಡಿ. ಇಲ್ಲವೇ ಸಂಸದರಾದ ನೀವು ದೆಹಲಿಗೆ ಹೋಗಲು ಆಗದಿದ್ದರೆ, ಮಸಣಕ್ಕೆ ಹೋಗಿ. ಅಲ್ಲಿ ಮೀಸಲಾತಿ ಬಗ್ಗೆ ಹುಡುಕಾಟ ನಡೆಸಿ ಎಂದು ಕೀಳುಪದಗಳಲ್ಲಿ ಹಗುರವಾಗಿ ಟೀಕೆ ಮಾಡಿದ್ದಾರೆ.
ನೀವು ರಾಜಕೀಯದಲ್ಲಿ ಇರೋದು ಯಾಕೆ? ಮನೆಗೆ ಹೋಗೋದು ಒಳಿತು. ಮನೆಯಲ್ಲಿ ಅಡುಗೆ ಮಾಡೋದನ್ನು ಕಲಿಯಿರಿ. ನೀವು ಸಂಸದರಾಗಿರಲಿ, ಇಲ್ಲದಿರಲಿ. ಮುಖ್ಯಮಂತ್ರಿಯನ್ನು ಹೇಗೆ ಭೇಟಿ ಮಾಡಬೇಕೋ ಗೊತ್ತಿಲ್ಲ. ನಾನು ನಿಯೋಗವನ್ನು ಕಳುಹಿಸಲು ಬಯಸುತ್ತೇನೆ. ನೀವಿಗ ಮನೆಗೆ ಹೋಗುವ ಸಮಯ ಬಂದಿದೆ. ದೆಹಲಿಗೆ ಹೋಗಲಾಗದಿದ್ದರೆ ಮಸಣಕ್ಕೆ ಹೋಗಿ ಅಲ್ಲಿ ಮೀಸಲಾತಿಯನ್ನು ಹುಡುಕಿ ಕೊಡಿ ಎಂದು ಸುಪ್ರಿಯಾ ಸುಳೆ ಅವರ ವಿರುದ್ಧ ಚಂದ್ರಕಾಂತ್ ಪಾಟೀಲ್ ಕಟುವಾಗಿ ಟೀಕಿಸಿದ್ದಾರೆ.
ಓದಿ: ಮೋದಿ ಜೊತೆ ವೇದಿಕೆ ಹಂಚಿಕೊಂಡ ಸ್ಟಾಲಿನ್.. ಹಿಂದಿಯಂತೆ ತಮಿಳು ಅಧಿಕೃತ ಭಾಷೆ ಮಾಡಲು ಒತ್ತಾಯ