ETV Bharat / bharat

ನೀವೇ ಬದಲಾಗಿ, ಇಲ್ಲವೇ ಬದಲಾವಣೆಗೆ ಸಿದ್ಧರಾಗಿ: ಅಧಿವೇಶನಕ್ಕೆ ಗೈರಾಗುವ ಸಂಸದರಿಗೆ ಮೋದಿ ಎಚ್ಚರಿಕೆ - ಸಂಸದರ ವಿರುದ್ಧ ಪ್ರಧಾನಿ ಮೋದಿ ಅಸಮಾಧಾನ

ಸಂಸತ್ತಿನಲ್ಲಿ ಪ್ರತಿನಿಧಿಸುವ ಸಲುವಾಗಿಯೇ ಜನರು ತಮ್ಮನ್ನು ಆಯ್ಕೆ ಮಾಡಿರುವುದರಿಂದ ಅಧಿವೇಶನಕ್ಕೆ ಹಾಜರಾಗುವುದು ಸಂಸದರ ಕರ್ತವ್ಯ ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ.

BJP parliamentary party meeting: MPs told to regularly attend Parl sessions
ಬಿಜೆಪಿ ಸಂಸದೀಯ ಸಭೆ: ಅಧಿವೇಶನಕ್ಕೆ ಗೈರಾಗದಂತೆ ಸಂಸದರಿಗೆ ಪ್ರಧಾನಿ ಸೂಚನೆ
author img

By

Published : Dec 7, 2021, 12:44 PM IST

ನವದೆಹಲಿ: ಪಾರ್ಲಿಮೆಂಟ್​ನ ಚಳಿಗಾಲದ ಅಧಿವೇಶನದಲ್ಲಿ ಸಂಸದರ ಹಾಜರಾತಿ ಕಡಿಮೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ​, ಅಧಿವೇಶನಕ್ಕೆ ಹಾಜರಾಗಲು ಎಲ್ಲಾ ಸಂಸದರು ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ, ನೀವೇ ಬದಲಾಗಿ, ಇಲ್ಲವೇ ಬದಲಾವಣೆಗೆ ಸಿದ್ಧರಾಗಿ ಎಂದು ಖಡಕ್‌ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ.

ನವದೆಹಲಿಯ ಡಾ.ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಮಂಗಳವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಮೋದಿ, ಅಧಿವೇಶನಕ್ಕೆ ಹಾಜರಾಗದ ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೂಲಗಳ ಪ್ರಕಾರ, ತಮ್ಮನ್ನು ತಾವು ಪರಿವರ್ತಿಸಿಕೊಳ್ಳದ ಹೊರತು ಬದಲಾವಣೆಗಳು ಆಗುವುದಿಲ್ಲ ಎಂದು ಪ್ರಧಾನಿ ಸಂಸದೀಯ ಪಕ್ಷದ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಪ್ರತಿನಿಧಿಸುವ ಸಲುವಾಗಿಯೇ ಜನರು ತಮ್ಮನ್ನು ಆಯ್ಕೆ ಮಾಡಿರುವುದರಿಂದ, ಅಧಿವೇಶನಕ್ಕೆ ಹಾಜರಾಗುವುದು ಸಂಸದರ ಕರ್ತವ್ಯ ಎಂದು ಒತ್ತಿ ಹೇಳಿದ್ದಾರೆ. ಇದಕ್ಕೂ ಮೊದಲು ಮುಂಗಾರು ಅಧಿವೇಶನದಲ್ಲಿ ಹಾಗೂ ಬಜೆಟ್ ಅಧಿವೇಶನದಲ್ಲಿಯೂ ಸಂಸದರಿಗೆ ಮೋದಿ ಎಚ್ಚರಿಕೆ ನೀಡಿದ್ದರು.

ಅಂದಹಾಗೆ, ಈ ಮೊದಲು ಸಂಸದೀಯ ಸಭೆ ನಡೆಯುತ್ತಿದ್ದ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಇದೇ ಮೊದಲ ಬಾರಿಗೆ ಸಂಸತ್​ನಿಂದ ಹೊರಗೆ, ಡಾ.ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್​ನಲ್ಲಿ ಮಹತ್ವದ ಸಭೆ ನಡೆಸಲಾಗಿದೆ.

ಸಭೆಯಲ್ಲಿ ಚರ್ಚಿಸಿದ ಮತ್ತಷ್ಟು ವಿಚಾರಗಳು..

ಸಂಸತ್ ಅಧಿವೇಶನ ಮುಗಿದ ನಂತರ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲು ಕಾರ್ಯಕ್ರಮಗಳನ್ನು ನಡೆಸುವಂತೆ ಆಯಾ ಕ್ಷೇತ್ರಗಳ ಸಂಸದರಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಸಂಸದರು ಮತ್ತು ಶಾಸಕರು ಆಯಾ ಕ್ಷೇತ್ರಗಳಲ್ಲಿ ಕ್ರೀಡಾಕೂಟಗಳನ್ನು ನಡೆಸುವಂತೆ ಮೋದಿ ಹೇಳಿದ್ದಾರೆ.

ಸೂರ್ಯ ನಮಸ್ಕಾರದ ಮಹತ್ವವನ್ನು ತಿಳಿಸಿದ ಪ್ರಧಾನಿ, ಡಿಸೆಂಬರ್ 14ರಂದು ವಾರಣಾಸಿಯಲ್ಲಿ ಜಿಲ್ಲಾ ಮತ್ತು ಮಂಡಲ ಅಧ್ಯಕ್ಷರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಕಿಸಾನ್ ಸಮ್ಮೇಳನ ನಡೆಸಬೇಕು ಮತ್ತು ಕೃಷಿ ಪದ್ಧತಿಯ ಸುಧಾರಣೆಗೆ ಮುಂದಾದ ರೈತರನ್ನು ಸಮ್ಮೇಳನದಲ್ಲಿ ಸನ್ಮಾನಿಸಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Nagaland firing : AFSPA ಹಿಂಪಡೆಯಲು ಆಗ್ರಹ.. ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.