ಡೆಹ್ರಾಡೂನ್: ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಘರ್ವಾಲ್ ಸಂಸದ ತಿರಥ್ ಸಿಂಗ್ ರಾವತ್ ಅವರನ್ನು ನೇಮಕ ಮಾಡಲಾಗಿದೆ.
ನಿನ್ನೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ತ್ರಿವೇಂದ್ರ ಸಿಂಗ್ ರಾವತ್ ತಿರಥ್ ಸಿಂಗ್ ರಾವತ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದಾರೆ.
ಡೆಹ್ರಾಡೂನ್ನಲ್ಲಿ ನಡೆದ ಬಿಜೆಪಿ ಶಾಸಕಂಗ ಪಕ್ಷದ ಸಭೆಯಲ್ಲಿ ತಿರಥ್ ಸಿಂಗ್ ರಾವತ್ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿಯು ಉತ್ತರಾಖಂಡದ ತನ್ನ ಮುಂದಿನ ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಮಲಪ್ಪುರಂ ಕ್ಷೇತ್ರದಲ್ಲಿ ಕಮಲ ಅರಳಿಸಲು ಮುಂದಾದ ಎ.ಪಿ ಅಬ್ದುಲ್ಲಕುಟ್ಟಿ
ತಿರಥ್ ಸಿಂಗ್ ರಾವತ್, 9 ಫೆಬ್ರವರಿ 2013 ರಿಂದ 2015 ರ ಡಿಸೆಂಬರ್ 31 ರವರೆಗೆ ಭಾರತೀಯ ಜನತಾ ಪಕ್ಷದ ಉತ್ತರಾಖಂಡದ ಪಕ್ಷದ ಮುಖ್ಯಸ್ಥರಾಗಿ ಮತ್ತು 2012 ರಿಂದ 2017 ರವರೆಗೆ ಚೌಬ್ತಖಲ್ ಕ್ಷೇತ್ರದಿಂದ ಉತ್ತರಾಖಂಡ ವಿಧಾನಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.