ETV Bharat / bharat

ಸಲಿಂಗ ವಿವಾಹಕ್ಕೆ ಮಾನ್ಯತೆ ಬೇಡ; ಬಿಜೆಪಿ ಸಂಸದ ಸುಶೀಲ್ ಮೋದಿ ಒತ್ತಾಯ - ಮುಸ್ಲಿಂ ವೈಯಕ್ತಿಕ ಕಾನೂನು

ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಯಾವುದೇ ಲಿಖಿತ ರೂಪದ ಶಾಸನಬದ್ಧ ಕಾನೂನು ಅಥವಾ ಯಾವುದೇ ಲಿಖಿತವಲ್ಲದ ವೈಯಕ್ತಿಕ ಕಾನೂನಿನಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲಾಗಿಲ್ಲ. ಸಲಿಂಗ ವಿವಾಹವು ದೇಶದಲ್ಲಿ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನಕ್ಕೆ ಸಂಪೂರ್ಣ ಹಾನಿಯನ್ನುಂಟುಮಾಡುತ್ತದೆ ಎಂದು ಮೋದಿ ಹೇಳಿದರು.

ಸಲಿಂಗ ವಿವಾಹಕ್ಕೆ ಮಾನ್ಯತೆ ಬೇಡ; ಬಿಜೆಪಿ ಸಂಸದ ಸುಶೀಲ್ ಮೋದಿ ಒತ್ತಾಯ
bjp-mp-sushil-modi-opposes-same-sex-marriage-in-rajya-sabha
author img

By

Published : Dec 19, 2022, 7:52 PM IST

ನವದೆಹಲಿ: ದೇಶದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಯಾವುದೇ ಪ್ರಯತ್ನವನ್ನು ಬಲವಾಗಿ ವಿರೋಧಿಸಬೇಕು ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಸೋಮವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕೆಲ ಎಡಪಂಥೀಯರು ಹಾಗೂ ಕಾರ್ಯಕರ್ತರು ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತಾದ ಯಾವುದೇ ಪ್ರಯತ್ನಗಳ ಬಗ್ಗೆ ತಮ್ಮ ವಿರೋಧ ಸ್ಪಷ್ಟಪಡಿಸಿದ ಮೋದಿ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದರಿಂದ ದೇಶದಲ್ಲಿನ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುತ್ತದೆ ಎಂದು ಆರೋಪಿಸಿದರು. ಅವರು ದೇಶದಲ್ಲಿ ವಿವಾಹ ಬಂಧನದ ಬದ್ಧತೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು.

ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಯಾವುದೇ ಲಿಖಿತ ರೂಪದ ಶಾಸನಬದ್ಧ ಕಾನೂನು ಅಥವಾ ಯಾವುದೇ ಲಿಖಿತವಲ್ಲದ ವೈಯಕ್ತಿಕ ಕಾನೂನಿನಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲಾಗಿಲ್ಲ. ಸಲಿಂಗ ವಿವಾಹವು ದೇಶದಲ್ಲಿ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನಕ್ಕೆ ಸಂಪೂರ್ಣ ಹಾನಿಯನ್ನುಂಟುಮಾಡುತ್ತದೆ ಎಂದು ಮೋದಿ ಹೇಳಿದರು.

ಇಂಥ ನಿರ್ಣಾಯಕ ಸಾಮಾಜಿಕ ಸಮಸ್ಯೆಯನ್ನು ಇಬ್ಬರು ನ್ಯಾಯಾಧೀಶರು ಸೇರಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ಇದು ಸಂಸತ್ತಿನಲ್ಲಿ ಮತ್ತು ಸಮಾಜದಲ್ಲಿ ಚರ್ಚೆಯಾಗಬೇಕು. ಸರಕಾರವು ಸಲಿಂಗ ವಿವಾಹವನ್ನು ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ದಾವಣಗೆರೆ ಯುವತಿಯರ ಹೊಡೆದಾಟಕ್ಕೆ ಬಿಗ್ ಟ್ವಿಸ್ಟ್​: ಹಲ್ಲೆ ಹಿಂದಿತ್ತು ಇಬ್ಬರ ನಡುವಿನ ಸಲಿಂಗ ಪ್ರೇಮ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.