ರಾಂಚಿ(ಜಾರ್ಖಂಡ್) : ಹೊಸ ವಿಧಾನಸಭೆಯಲ್ಲಿ ನಮಾಜ್ ಮಾಡಲು ಪ್ರತ್ಯೇಕ ಕೊಠಡಿಯೊಂದನ್ನು ನೀಡಿ ಜಾರ್ಖಂಡ್ ವಿಧಾನಸಭಾ ಸಚಿವಾಲಯ ಆದೇಶ ಹೊರಡಿಸಿದೆ. ಆದರೆ, ಅದೇ ಆದೇಶ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.
ಬಿಜೆಪಿ ಶಾಸಕರು ಸಿಎಂ ಹೇಮಂತ್ ಸೊರೆನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಟ್ವೀಟ್ ಮೂಲಕ ಸರ್ಕಾರದ ನಿರ್ಧಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ಬಾಬುಲಾಲ್ ಮರಾಂಡಿ ಟ್ವೀಟ್ ಮಾಡಿ, ಪ್ರಜಾಪ್ರಭುತ್ವದ ದೇವಾಲಯವಾದ ವಿಧಾನಸಭೆ ಪ್ರಜಾಪ್ರಭುತ್ವದ ದೇವಾಲಯವಾಗಿ ಉಳಿಯಬೇಕು ಎಂದಿದ್ದಾರೆ.
ಮತ್ತೊಬ್ಬ ಬಿಜೆಪಿ ಶಾಸಕ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಸಿ ಪಿ ಸಿಂಗ್ ಪ್ರಾರ್ಥನಾ ಕೊಠಡಿ ನೀಡಿರುವುದಕ್ಕೆ ನನ್ನಿಂದ ಯಾವುದೇ ಆಕ್ಷೇಪವಿಲ್ಲ. ಆದರೆ, ಜಾರ್ಖಂಡ್ ವಿಧಾನಸಭಾ ಸಂಕೀರ್ಣದಲ್ಲಿ ದೇವಸ್ಥಾನವೊಂದನ್ನು ನಿರ್ಮಿಸಬೇಕು ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
-
विधानसभा लोकतंत्र का वह मंदिर है, जिसे किसी धर्म या पंथ की परिधि में समेट कर नहीं रखा जा सकता।
— Babulal Marandi (@yourBabulal) September 4, 2021 " class="align-text-top noRightClick twitterSection" data="
लेकिन झारखंड विधानसभा में किसी वर्ग विशेष के लिए नमाज कक्ष का आवंटन किया जाना न केवल एक गलत परंपरा की शुरुआत है बल्कि लोकतांत्रिक मूल्यों के भी विपरीत है। pic.twitter.com/Tefpo2Ad7B
">विधानसभा लोकतंत्र का वह मंदिर है, जिसे किसी धर्म या पंथ की परिधि में समेट कर नहीं रखा जा सकता।
— Babulal Marandi (@yourBabulal) September 4, 2021
लेकिन झारखंड विधानसभा में किसी वर्ग विशेष के लिए नमाज कक्ष का आवंटन किया जाना न केवल एक गलत परंपरा की शुरुआत है बल्कि लोकतांत्रिक मूल्यों के भी विपरीत है। pic.twitter.com/Tefpo2Ad7Bविधानसभा लोकतंत्र का वह मंदिर है, जिसे किसी धर्म या पंथ की परिधि में समेट कर नहीं रखा जा सकता।
— Babulal Marandi (@yourBabulal) September 4, 2021
लेकिन झारखंड विधानसभा में किसी वर्ग विशेष के लिए नमाज कक्ष का आवंटन किया जाना न केवल एक गलत परंपरा की शुरुआत है बल्कि लोकतांत्रिक मूल्यों के भी विपरीत है। pic.twitter.com/Tefpo2Ad7B
ಹನುಮಾನ್ ದೇವಸ್ಥಾನವನ್ನು ವಿಧಾನಸಭಾ ಸಂಕೀರ್ಣದಲ್ಲಿ ಸ್ಥಾಪನೆ ಮಾಡಬೇಕು. ಸ್ಪೀಕರ್ ಅನುಮೋದಿಸಿದರೆ, ನಾನು ಸ್ವಂತ ಖರ್ಚಿನಲ್ಲಿ ದೇವಸ್ಥಾನವನ್ನು ನಿರ್ಮಿಸುತ್ತೇನೆ ಎಂದು ಸಿ ಪಿ ಸಿಂಗ್ ಹೇಳಿದ್ದಾರೆ.
-
आदरणीय अध्यक्ष महोदय @Rabindranathji जीअगला दिन मंगलवार है #बजरंगबली के दिन के रूप में मानते है ,#हनुमान चालीसा का पाठ हेतु विधानसभा में अलग कक्ष आवंटन का हेतु पूर्व अनुरोध आपसे कर ही देते है ।#झारखंड_विधानसभा#लोकतंत्र_के_मंदिर में #नमाज़_कक्ष का आवंटन #तुष्टिकरण की पराकाष्ठा https://t.co/xW9UVYYRFc
— Anant Ojha BJP (@Anant_Ojha_BJP) September 4, 2021 " class="align-text-top noRightClick twitterSection" data="
">आदरणीय अध्यक्ष महोदय @Rabindranathji जीअगला दिन मंगलवार है #बजरंगबली के दिन के रूप में मानते है ,#हनुमान चालीसा का पाठ हेतु विधानसभा में अलग कक्ष आवंटन का हेतु पूर्व अनुरोध आपसे कर ही देते है ।#झारखंड_विधानसभा#लोकतंत्र_के_मंदिर में #नमाज़_कक्ष का आवंटन #तुष्टिकरण की पराकाष्ठा https://t.co/xW9UVYYRFc
— Anant Ojha BJP (@Anant_Ojha_BJP) September 4, 2021आदरणीय अध्यक्ष महोदय @Rabindranathji जीअगला दिन मंगलवार है #बजरंगबली के दिन के रूप में मानते है ,#हनुमान चालीसा का पाठ हेतु विधानसभा में अलग कक्ष आवंटन का हेतु पूर्व अनुरोध आपसे कर ही देते है ।#झारखंड_विधानसभा#लोकतंत्र_के_मंदिर में #नमाज़_कक्ष का आवंटन #तुष्टिकरण की पराकाष्ठा https://t.co/xW9UVYYRFc
— Anant Ojha BJP (@Anant_Ojha_BJP) September 4, 2021
ರಾಜಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಂತ್ ಓಜಾ ಕೂಡ ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರದ ನಿರ್ಧಾರವನ್ನು ಓಲೈಕೆಯ ಪರಮಾವಧಿ ಎಂದು ಟೀಕಿಸಿದ್ದಾರೆ.
ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ನಮ್ಮ ಆರಾಧ್ಯ ದೇವತೆಗಳಿಗೂ ಕೊಠಡಿಗಳನ್ನು ಮಂಜೂರು ಮಾಡುವಂತೆ ಅಸೆಂಬ್ಲಿ ಸ್ಪೀಕರ್‌ಗೆ ಟ್ವೀಟ್ ಮಾಡಿ ಅನಂತ್ ಓಜಾ ವಿನಂತಿಸಿಕೊಂಡಿದ್ದಾರೆ.
ಮತ್ತೆ ಕೆಲವು ಟ್ವೀಟ್ಗಳಲ್ಲಿ ಮಂಗಳವಾರವನ್ನು ಭಜರಂಗಬಲಿಯ ದಿನವೆಂದು ಪರಿಗಣಿಸಲಾಗಿದ್ದು, ಈ ವೇಳೆ ಹನುಮಾನ್ ಚಾಲೀಸಾ ಪಠಣಕ್ಕಾಗಿ ಒಂದು ಕೊಠಡಿಯನ್ನು, ಸೋಮವಾರ ಶಿವನ ದಿನವಾದ್ದರಿಂದ ಶಿವಸ್ತೋತ್ರವನ್ನು ಪಠಿಸಲು ಒಂದು ಕೊಠಡಿ ನಿಗದಿಪಡಿಸಬೇಕೆಂದು ಹೇಳಿದ್ದಾರೆ.
ಇದನ್ನೂ ಓದಿ: SIMBEX-2021 : ಭಾರತ, ಸಿಂಗಾಪುರ ನಡುವೆ ನೌಕಾ ಸಮರಾಭ್ಯಾಸ ಅಂತ್ಯ