ETV Bharat / bharat

ಕಲಾಪದಲ್ಲಿ ತಂಬಾಕು ಜಗಿಯುವುದು, ಮೊಬೈಲ್​ ಗೇಮ್​ನಲ್ಲಿ ಬ್ಯುಸಿಯಾದ ಬಿಜೆಪಿ ಶಾಸಕರು

ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಉತ್ತರ ಪ್ರದೇಶದ ಬಿಜೆಪಿ ಶಾಸಕರು ತಂಬಾಕು ಸೇವನೆ ಮತ್ತು ಮೊಬೈಲ್​ನಲ್ಲಿ ಗೇಮ್ ಆಡಿದ ವಿಡಿಯೋವನ್ನ ಸಮಾಜವಾದಿ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಧಾನಸಭೆಯ ಘನತೆಗೆ ಬಿಜೆಪಿ ಶಾಸಕರು ಕುಂದು ತರುತ್ತಿದ್ದಾರೆ ಎಂದು ಎಸ್​ಪಿ ಆರೋಪಿಸಿದೆ.

author img

By

Published : Sep 25, 2022, 7:22 AM IST

bjp-mlas-playing-teen-patti-and-mixing-tobacco-in-up-assembly
ಕಲಾಪದಲ್ಲಿ ತಂಬಾಕು ಜಗಿಯುವುದು, ಮೊಬೈಲ್​ ಗೇಮ್​ನಲ್ಲಿ ಬ್ಯುಸಿಯಾದ ಬಿಜೆಪಿ ಶಾಸಕರು

ಮಹೋಬಾ (ಯುಪಿ): ಉತ್ತರ ಪ್ರದೇಶ ವಿಧಾನಸಭೆಯೊಳಗೆ ಬಿಜೆಪಿ ಶಾಸಕರು ಫೋನ್‌ನಲ್ಲಿ ಗೇಮ್ (ಕಾರ್ಡ್ಸ್)​​ ಆಡುತ್ತಿರುವ ಮತ್ತು ತಂಬಾಕು ಜಗಿಯುತ್ತಿರುವ ಎರಡು ವಿಡಿಯೋಗಳನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಶನಿವಾರ ಬಿಡುಗಡೆ ಮಾಡಿದ್ದು, ಸಭೆಯ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಒಂದು ವಿಡಿಯೋದಲ್ಲಿ ಮಹೋಬಾದ ಬಿಜೆಪಿ ಶಾಸಕ ರಾಕೇಶ್ ಗೋಸ್ವಾಮಿ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಡ್-ಗೇಮ್ 'ತೀನ್ ಪತ್ತಿ' ಆಡುತ್ತಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ಬಿಜೆಪಿಯ ಝಾನ್ಸಿ ಶಾಸಕ ರವಿ ಶರ್ಮಾ ಅವರು ಅಸೆಂಬ್ಲಿಯ ಮುಂಗಾರು ಅಧಿವೇಶನದಲ್ಲಿ ಕುಳಿತು ತಂಬಾಕು ಜಗಿಯುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಧರಣಿ ನಡುವೆ ನಾಲ್ಕು ವಿಧೇಯಕಗಳ ಅಂಗೀಕಾರ: ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಈ ವಿಡಿಯೋಗಳ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷ, ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರ ನೀಡದ ಬಿಜೆಪಿಯ ಶಾಸಕರು ವಿಧಾನಸಭೆಯ ಘನತೆ ಹಾಳು ಮಾಡುತ್ತಿದ್ದಾರೆ ಮತ್ತು ಅಸೆಂಬ್ಲಿಯನ್ನು ಮನರಂಜನಾ ಕೇಂದ್ರವನ್ನಾಗಿ ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದೆ. ಆದರೆ, ಈ ವಿಡಿಯೋಗಳಿಗೆ ಸಂಬಂಧಿಸಿದಂತೆ ಬಿಜೆಪಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.