ETV Bharat / bharat

ಬಾಲಕಿ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನಿಗೆ 25 ವರ್ಷ ದಂಡಸಹಿತ ಕಠಿಣ ಜೈಲು ಶಿಕ್ಷೆ - ಎಂಪಿ ಎಂಎಲ್‌ಎ ನ್ಯಾಯಾಲಯ

BJP MLA gets 25 years in jail for raping minor: ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ದುಡ್ಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮದುಲರ್ ಗೊಂಡ 25 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

BJP MLA in UP gets 25 years in jail for raping minor, faces disqualification from Assembly
ಬಾಲಕಿ ಮೇಲೆ ಅತ್ಯಾಚಾರ: ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​
author img

By PTI

Published : Dec 15, 2023, 10:06 PM IST

ಸೋನಭದ್ರ(ಉತ್ತರ ಪ್ರದೇಶ): ಒಂಬತ್ತು ವರ್ಷಗಳ ಹಿಂದೆ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಮದುಲರ್ ಗೊಂಡ ಅವರಿಗೆ ಇಲ್ಲಿನ ನ್ಯಾಯಾಲಯವು 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಇಂದು ಮಹತ್ವದ ತೀರ್ಪು ಪ್ರಕಟಿಸಿತು. ದುಡ್ಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಇವರು ಶಿಕ್ಷೆಗೆ ಗುರಿಯಾದ ಕಾರಣ ತಕ್ಷಣದಿಂದಲೇ ವಿಧಾನಸಭೆ ಸದಸ್ಯತ್ವ ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ.

2014ರ ನವೆಂಬರ್ 4ರಂದು ಅತ್ಯಾಚಾರ ಪ್ರಕರಣ ವರದಿಯಾಗಿತ್ತು. ರಾಮದುಲರ್​ ಗೊಂಡ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ 5ಎಲ್/6ರಡಿ ಪ್ರಕರಣ ದಾಖಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಸೋನಭದ್ರದಲ್ಲಿರುವ ಎಂಪಿ/ಎಂಎಲ್‌ಎ ನ್ಯಾಯಾಲಯವು ಡಿಸೆಂಬರ್ 12ರಂದು ರಾಮದುಲರ್ ಗೊಂಡ ಅವರನ್ನು 'ತಪ್ಪಿತಸ್ಥ' ಎಂದು ಘೋಷಿಸಿತ್ತು.

ಇಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಹ್ಸಾನ್ ಉಲ್ಲಾ ಖಾನ್​ ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿ, 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಈ ಮೊತ್ತವನ್ನು ಅತ್ಯಾಚಾರ ಸಂತ್ರಸ್ತೆಯ ಪುನರ್​ ವಸತಿಗೆ ಒದಗಿಸಲು ಆದೇಶಿಸಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸತ್ಯಪ್ರಕಾಶ್ ತ್ರಿಪಾಠಿ ತಿಳಿಸಿದರು. ತೀರ್ಪು ಪ್ರಕಟಿಸುವ ಮುನ್ನ ರಾಮದುಲರ್ ಗೊಂಡ ಪರ ವಕೀಲರು ಕನಿಷ್ಠ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಅಲ್ಲದೇ, ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಸಂಪೂರ್ಣ ಹೊಣೆಯನ್ನು ಶಾಸಕರೇ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಆದರೆ, ಇದನ್ನು ಪರಿಗಣಿಸದ ನ್ಯಾಯಾಲಯವು 25 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಅತ್ಯಾಚಾರ ಘಟನೆಯ ಸಮಯದಲ್ಲಿ ರಾಮದುಲರ್ ಗೊಂಡ ಅವರ ಪತ್ನಿ ಗ್ರಾಮ ಪ್ರಧಾನರಾಗಿದ್ದರು. ಆಗ ಗೊಂಡ ಶಾಸಕರಾಗಿರಲಿಲ್ಲ. ಸಂತ್ರಸ್ತೆಯ ಸಹೋದರನ ದೂರಿನ ಮೇರೆಗೆ ಮೈರ್‌ಪುರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಪ್ರಕರಣದ ವಿಚಾರಣೆ ಪೋಕ್ಸೊ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಗೊಂಡ ಶಾಸಕರಾಗಿ ಆಯ್ಕೆಯಾದ ನಂತರ ಪ್ರಕರಣವನ್ನು ಎಂಪಿ/ಎಂಎಲ್‌ಎ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಹಿತಿ ನೀಡಿದರು.

ಅತ್ಯಾಚಾರ ಸಂತ್ರಸ್ತೆ ಈಗ ಮದುವೆಯಾಗಿದ್ದು ಎಂಟು ವರ್ಷದ ಬಾಲಕಿಯ ತಾಯಿಯಾಗಿದ್ದಾರೆ. ನ್ಯಾಯಾಲಯದ ಈ ತೀರ್ಪನ್ನು ಸಂತ್ರಸ್ತೆಯ ಸಹೋದರ ಸ್ವಾಗತಿಸಿ, ಸುದೀರ್ಘ ಹೋರಾಟದ ನಂತರ ನ್ಯಾಯ ಸಿಕ್ಕಿದೆ ಎಂದರು. ಈಗಾಗಲೇ ಜಿಲ್ಲಾ ಕಾರಾಗೃಹದಲ್ಲಿದ್ದ ಶಾಸಕರ ಗೊಂಡ ಅವರನ್ನು ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ತೀರ್ಪು ಪ್ರಕಟವಾದ ಬಳಿಕ ಮತ್ತೆ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ, ಯಾವುದೇ ಚುನಾಯಿತ ವ್ಯಕ್ತಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದರೆ, ತಕ್ಷಣದಿಂದಲೇ ತಮ್ಮ ಸದಸ್ಯತ್ವದಿಂದ ಅನರ್ಹಗೊಳಿಸಲಾಗುತ್ತದೆ. ಈ ಅನರ್ಹತೆಯು ಮುಂದಿನ ಆರು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.

ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಪ್ರಕರಣ: ಮತ್ತಿಬ್ಬರು ವಶಕ್ಕೆ, ಲಲಿತ್​ ಝಾಗೆ ಪೊಲೀಸ್​ ಕಸ್ಟಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.