ETV Bharat / bharat

ಕರ್ನಾಟಕದಲ್ಲಿ ಬಿಜೆಪಿ ಹಿಡಿತ ಕಳೆದುಕೊಳ್ಳುತ್ತಿದೆ: ಶರದ್ ಪವಾರ್ ಭವಿಷ್ಯ - bharat jodo yatra

ಮುಂದಿನ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಹಿನ್ನಡೆ ಅನುಭವಿಸಬಹುದು - ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ವಾಗ್ದಾಳಿ - ನಾವು ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದ ಮಹಾ ನಾಯಕ

BJP may lose K'taka in next Assembly polls: Sharad Pawar
ಕರ್ನಾಟಕದಲ್ಲಿ ಬಿಜೆಪಿ ಹಿಡಿತ ಕಳೆದುಕೊಳ್ಳುತ್ತಿದೆ- ಶರದ್ ಪವಾರ್
author img

By

Published : Jan 28, 2023, 5:53 PM IST

ಕೊಲ್ಹಾಪುರ (ಮಹಾರಾಷ್ಟ್ರ): ಕರ್ನಾಟಕದಲ್ಲಿ ಬಿಜೆಪಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆ ನಂತರ ಅಧಿಕಾರದ ಬದಲಾವಣೆ ಆಗಲಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ರಾಜಮನೆತನದ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಆಗುವುದಿಲ್ಲ ಎಂಬ ಜನಾಭಿಪ್ರಾಯವಿದೆ ಎಂದು ಹೇಳಿದರು.

ನಾವು ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಬೇರೆ ಬೇರೆ ರಾಜ್ಯಗಳು ವಿಭಿನ್ನ ಸ್ಥಳೀಯ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದರು. ಇತ್ತೀಚಿನ ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆಯು ಜನಸಾಮಾನ್ಯರ ಮನಸ್ಸು ಬಿಜೆಪಿಯ ವಿರುದ್ಧ ಹೋಗುತ್ತಿದೆ ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಹಿನ್ನಡೆ ಅನುಭವಿಸಬಹುದು ಎಂದು ಬಹಿರಂಗಪಡಿಸಿದೆ ಎಂದು ಗಟ್ಟಿಯಾಗಿ ಹೇಳಿದರು.

"ಜನರು ಇನ್ಮುಂದೆ ಧಾರ್ಮಿಕ ವಿಷಯಗಳ ಆಧಾರದ ಮೇಲೆ ಮತ ಹಾಕುವುದಿಲ್ಲ. ಜನಸಾಮಾನ್ಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಗುತ್ತಿದ್ದು, ಈ ವಿಚಾರಗಳು ಇನ್ಮುಂದೆ ಕೆಲಸ ಮಾಡುವುದಿಲ್ಲ'' ಎಂದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕುರಿತು ಪ್ರತಿಕ್ರಿಯಿಸಿದರು, ''ಇದು ಸಾಮಾನ್ಯ ನಾಗರಿಕರ ಬೆಂಬಲವನ್ನು ಪಡೆದುಕೊಂಡಿದೆ. ರಾಹುಲ್​ ಗಾಂಧಿ ಯಾತ್ರೆ ಮೂಲಕ ಗಮನಸೆಳೆದಿದ್ದಾರೆ. ರಾಷ್ಟ್ರವ್ಯಾಪಿ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ತಪ್ಪುದಾರಿಗೆಳೆಯುವ ಪ್ರಯತ್ನಿಸಲಾಗಿದೆ'' ಎಂದು ಹೇಳಿದರು.

ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಟೀಕಿಸಿದ ಎನ್‌ಸಿಪಿ ಮುಖ್ಯಸ್ಥರು ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಹಿಂದಿನ ಪ್ರಮುಖರು ಇದನ್ನು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಬಣ್ಣಿಸಿದ್ದಾರೆ. ''ಕೇಂದ್ರ ಸರ್ಕಾರವು ಇಡಿ, ಸಿಬಿಐನಂತಹ ಫೆಡರಲ್ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ'' ಎಂಬ ವಂಚಿತ್ ಬಹುಜನ ಅಘಾಡಿ (ವಿಬಿಎ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರ ಹೇಳಿಕೆ ಉಲ್ಲೇಖಿಸಿದ ಪವಾರ್ ಮಾತನಾಡಿದ ಅವರು, ಸರ್ಕಾರವು ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸುತ್ತಿದೆ ಮತ್ತು ಜನರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡಿರುವ ವಿಬಿಎಗೆ ಪ್ರತಿಕ್ರಿಯಿಸಿದ ಪವಾರ್ ಅವರು, ''ಎಂವಿಎಗೆ ಸೇರುವ ಕುರಿತಂತೆ ಯಾವುದೇ ಮಾತುಕತೆ ನಡೆಸಿಲ್ಲ. ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ, ಯಾವುದೇ ಚರ್ಚೆ ನಡೆಸುವ ಪ್ರಶ್ನೆಯೇ ಇಲ್ಲ" ಎಂದರು. ಎಂವಿಎ ಬಗ್ಗೆ ಪುನರುಚ್ಚರಿಸಿದರು. ''ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸುತ್ತೇವೆ. ಮುಂದಿನ ವಾರ ನವದೆಹಲಿಯಲ್ಲಿ ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದೆ. ಎಲ್ಲ ನಾಯಕರೊಂದಿಗೆ ರಾಷ್ಟ್ರೀಯ ಏಕೀಕೃತ ವಿರೋಧ ಪಕ್ಷದ ಮುಂಭಾಗವನ್ನು ರೂಪಿಸುವ ಪ್ರಯತ್ನಗಳನ್ನು ಪುನರಾರಂಭಿಸಲಾಗುವುದು'' ಎಂದು ಹೇಳಿದರು.

"ನಾನು ಅನೇಕ ವಿರೋಧ ಪಕ್ಷದ ನಾಯಕರೊಂದಿಗೆ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದೇನೆ. ಏಕೆಂದರೆ ಕೆಲವು ರಾಜ್ಯಗಳಲ್ಲಿ ವಿವಿಧ ಪಕ್ಷಗಳು ತಮ್ಮ ಸ್ಥಳೀಯ ಅಥವಾ ಪ್ರಾದೇಶಿಕ ಸಮಸ್ಯೆಗಳಿಂದ ಪರಸ್ಪರ ವಿರುದ್ಧವಾಗಿ ನಿಂತಿರುವುದರಿಂದ ಆ ಅಂಶಗಳನ್ನು ಗಮನಿಸಿ ಚರ್ಚೆಸುತ್ತೇವೆ. ಮೊದಲು ಅವುಗಳನ್ನು ಪರಿಹರಿಸಲು ಮುಂದಾಗಬೇಕಿದೆ. ರಾಜ್ಯದಲ್ಲಿ ಮುಂಬರುವ ಎಂಎಲ್‌ಸಿ ದ್ವೈವಾರ್ಷಿಕ ಚುನಾವಣೆ ಮತ್ತು ಎಂಎಲ್‌ಎ ಉಪಚುನಾವಣೆಯಲ್ಲಿ ಎಂವಿಎ ಒಗ್ಗಟ್ಟಿನಿಂದ ಹೋರಾಡುತ್ತಿದೆ. ಅದೇ ಉತ್ಸಾಹದಲ್ಲೇ ಕಾರ್ಯಗಳನ್ನು ಮುಂದುವರಿಯುತ್ತದೆ'' ಎಂದು ಪವಾರ್​ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮುಖ್ಯಮಂತ್ರಿ ಬೊಮ್ಮಾಯಿ ವರ್ತನೆ ಸರಿಯಲ್ಲ: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.