ETV Bharat / bharat

ರಾಜ್ಯಪಾಲರ ಹುದ್ದೆಯ ಪ್ರತಿಷ್ಠೆ ಕಡಿಮೆ ಮಾಡಲು ಬಿಜೆಪಿ ಯತ್ನ: ಪಂಜಾಬ್ ಸಿಎಂ ಗಂಭೀರ ಆರೋಪ - ಬಿಜೆಪಿ ಪಂಜಾಬ್ ಘಟಕದ ಟ್ವೀಟ್

ಪಂಜಾಬ್​​​​​​​​ ರಾಜ್ಯವನ್ನ ಅಮರಿಂದರ್ ಸಿಂಗ್ ಮತ್ತೊಂದು ಪಶ್ಚಿಮ ಬಂಗಾಳವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಘಟಕಕ್ಕೆ ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಬಿಜೆಪಿ ಗವರ್ನರ್​ ಕಚೇರಿಯ ಪ್ರತಿಷ್ಠೆಯನ್ನು ಕಡಿಮೆಗೊಳಿಸುವ ಕೆಟ್ಟ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

amarindar singh
amarindar singh
author img

By

Published : Jan 4, 2021, 9:16 AM IST

ಚಂಡೀಗಢ (ಪಂಜಾಬ್): ಸಾಂವಿಧಾನಿಕ ಅಧಿಕಾರವನ್ನು ಅಹಿತಕರ ವಿವಾದಗಳಿಗೆ ಎಳೆಯುವ ಮೂಲಕ ಗವರ್ನರ್​ ಕಚೇರಿಯ ಪ್ರತಿಷ್ಠೆಯನ್ನು ಕಡಿಮೆಗೊಳಿಸುವ ಕೆಟ್ಟ ಪ್ರಯತ್ನಗಳಿಗೆ ರಾಜ್ಯ ಬಿಜೆಪಿ ನಾಯಕತ್ವವನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಖಂಡಿಸಿದ್ದಾರೆ.

'ಪಂಜಾಬ್​ ರಾಜ್ಯವನ್ನ ಅಮರಿಂದರ್ ಸಿಂಗ್ ಮತ್ತೊಂದು ಪಶ್ಚಿಮ ಬಂಗಾಳವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಘಟಕದ ಟ್ವೀಟ್​ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕಾಗಿ ಕಾಯುತ್ತಿರುವ ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ತನ್ನ ಸ್ವಂತ ಹಿತಾಸಕ್ತಿಗಾಗಿ ಬಳಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

"ಅಧಿಕಾರಕ್ಕಾಗಿ ಬಿಜೆಪಿ ಏನು ಬೇಕಾದರೂ ಮಾಡಬಹುದು. ಇದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ, ಮಹಾರಾಷ್ಟ್ರದಲ್ಲಿ ಸಂಭವಿಸಿದೆ, ಮತ್ತು ಈಗ ಪಂಜಾಬ್‌ನಲ್ಲಿಯೂ ಸಹ ಅದೇ ರೀತಿ ಮಾಡಲು ಪ್ರಯತ್ನಿಸುತ್ತಿದೆ" ಎಂದು ಸಿಂಗ್ ಗರಂ ಆಗಿದ್ದಾರೆ.

ರೈತರ ಆಂದೋಲನವನ್ನು ರಾಜಕೀಯಗೊಳಿಸುವ ಬಿಜೆಪಿಯ ಪುನರಾವರ್ತಿತ ಪ್ರಯತ್ನಗಳು ಆಘಾತಕಾರಿಯಾಗಿವೆ ಎಂದು ಅಮರಿಂದರ್ ಸಿಂಗ್ ಇದೇ ವೇಳೆ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.