ETV Bharat / bharat

ರಾಜ್ಯದಲ್ಲಿ ನಡೆಯಲಿದೆ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ

author img

By

Published : Dec 27, 2022, 10:39 PM IST

ತುಮಕೂರು ಜಿಲ್ಲೆಯಲ್ಲಿ ಜನವರಿ 20 ಮತ್ತು 21ರಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಹಮ್ಮಿಕೊಳ್ಳಲಾಗಿದೆ. ಮಹಿಳಾ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೋರ್ಚಾದ ಅಧ್ಯಕ್ಷರು ತಿಳಿಸಿದ್ದಾರೆ.

bjp-mahila-morchas-national-executive-meet-in-karnataka-in-jan
ರಾಜ್ಯದಲ್ಲಿ ನಡೆಯಲಿದೆ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ

ನವದೆಹಲಿ: ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ 2023ರ ಜನವರಿ 20 ಮತ್ತು 21ರಂದು ಎರಡು ದಿನಗಳ ಕಾಲ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಸಭೆಯನ್ನು ಉದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಲಿದ್ದಾರೆ ಎಂದು ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ ತಿಳಿಸಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಹಿಳಾ ಸಮಸ್ಯೆಗಳ ಬಗ್ಗೆ ಆಳವಾದ ಚರ್ಚೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಾರೆ. ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರಧಾನಿ ಬಯಸುತ್ತಾರೆ. ಅವರ ಆಶಯದಂತೆ ಮಹಿಳೆಯರಿಗೆ ನಡೆಯುತ್ತಿರುವ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ನಾವು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೊಮ್ಮಾಯಿಗೆ ಪಂಚಮಸಾಲಿಗರ ಮೀಸಲಾತಿ ತಲೆಬಿಸಿ; ಬಿಜೆಪಿ ಸರ್ಕಾರದ ಮುಂದಿರುವ ಲೆಕ್ಕಾಚಾರಗಳೇನು?

ಮುಂದಿನ ಜಿ20 ಸಭೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ಬಗ್ಗೆಯೂ ಚರ್ಚಿಸಲಾಗುವುದು. ಪಕ್ಷದ ಗೆಲುವಿಗಾಗಿ ಹೊಸ ಯೋಜನೆಗಳನ್ನೂ ಸಹ ಕಾರ್ಯಕಾರಿಣಿಯಲ್ಲಿ ರೂಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಮಹಿಳಾ ದಿನದಂದು ಪ್ರಧಾನಿ ಮೋದಿ ಹೀಗೆ ಹೇಳಿದ್ದರು?: ಮಹಿಳೆಯರು ನೈತಿಕತೆ, ನಿಷ್ಠೆ, ನಿರ್ಣಾಯಕತೆ ಮತ್ತು ನಾಯಕತ್ವದ ಪ್ರತಿಫಲವಾಗಿದ್ದಾರೆ. ನಮ್ಮ ವೇದಗಳು ಮತ್ತು ಸಂಪ್ರದಾಯಗಳು ಸಹ ಮಹಿಳೆಯರು ರಾಷ್ಟ್ರಕ್ಕೆ ನಿರ್ದೇಶನ ನೀಡಲು ಸಮರ್ಥ ಮತ್ತು ಸಮರ್ಥರಾಗಿರಬೇಕು ಎಂದು ಕರೆ ಕೊಟ್ಟಿವೆ ಎಂದು ಈ ವರ್ಷದ ವಿಶ್ವ ಮಹಿಳಾ ದಿನದಂದು ಪ್ರಧಾನಿ ಮೋದಿ ಹೇಳಿದ್ದರು.

ಅಲ್ಲದೇ, ಪ್ರಗತಿ ಹೊಂದಿದ ಪ್ರತಿಯೊಬ್ಬ ಮಹಿಳೆಯರು ಯಾವಾಗಲೂ ರಾಷ್ಟ್ರದ ಸಬಲೀಕರಣಕ್ಕೆ ಶಕ್ತಿಯನ್ನು ನೀಡುತ್ತಾರೆ. ಇಂದು ದೇಶದ ಆದ್ಯತೆಯು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹಿಳೆಯರ ಸಂಪೂರ್ಣ ಭಾಗವಹಿಸುವಿಕೆಯೇ ಆಗಿದೆ. 'ಸ್ಟ್ಯಾಂಡಪ್ ಇಂಡಿಯಾ' ಅಡಿಯಲ್ಲಿ ಶೇ.80ಕ್ಕಿಂತ ಹೆಚ್ಚು ಸಾಲಗಳನ್ನು ಮಹಿಳೆಯರು ಪಡೆದಿದ್ದಾರೆ. ಅಲ್ಲದೇ, ಮುದ್ರಾ ಯೋಜನೆಯಡಿ ಶೇ.70 ರಷ್ಟು ಸಾಲವನ್ನು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ನೀಡಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಜ.2ರಿಂದ ಬೂತ್ ವಿಜಯ ಅಭಿಯಾನ, 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಗುರಿ

ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬಿಜೆಪಿ ಮಹಿಳಾ ಮೋರ್ಚಾದ ಸಭೆಗೆ ಸ್ಥಳದ ಆಯ್ಕೆಯೂ ಮಹತ್ವದ್ದಾಗಿದೆ. ಅಲ್ಲದೇ, ಈಗಾಗಲೇ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಈ ಬಾರಿ ಸ್ವತಃ ಬಲದೊಂದಿಗೆ ಅಧಿಕಾರಕ್ಕೆ ಬರಲು ಹೈಕಮಾಂಡ್​ ಕಾರ್ಯತಂತ್ರ ನಡೆಸುತ್ತಿದೆ. ಇದರ ಭಾಗವಾಗಿ ಬಿಜೆಪಿ ಹಿರಿಯ ನಾಯಕ, ಗೃಹ ಸಚಿವ ಅಮಿತ್​ ಶಾ ಇದೇ ಡಿ.30 ಮತ್ತು 31ರಂದು ರಾಜ್ಯ ಪ್ರವಾಸ ಮಾಡಲಾಗಿದ್ದಾರೆ.

ರಾಜ್ಯದಲ್ಲಿ ಪಕ್ಷ ಸಂಘಟನೆ, ಪಕ್ಷಕ್ಕೆ ಎದುರಾಗಿರುವ ಸವಾಲುಗಳು ಸೇರಿದಂತೆ ಸಂಘಟನಾತ್ಮಕ ವಿಚಾರಗಳ ಕುರಿತು ರಾಜ್ಯ ನಾಯಕರ ಜೊತೆ ಅಮಿತ್​ ಶಾ ಮಾತುಕತೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಜನವರಿಯಲ್ಲಿ ಯುವಜನೋತ್ಸವ: ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಧಾರವಾಡದಲ್ಲಿ ಜನವರಿ 12 ರಿಂದ 16ರವರೆಗೆ ಐದು ದಿನಗಳ ಕಾಲ ಯುವಜನೋತ್ಸವ ಆಯೋಜಿಸಲಾಗಿದೆ. ಜ. 12ರಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ

ಇದನ್ನೂ ಓದಿ: ಡಿ.30, 31ರಂದು ಅಮಿತ್ ಶಾ ರಾಜ್ಯ ಪ್ರವಾಸ: ಕಾರ್ಯಕ್ರಮಗಳ ವಿವರ ಇಲ್ಲಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.