ಲಖನೌ(ಉತ್ತರಪ್ರದೇಶ): ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣರ ಮತಗಳೇ ನಿರ್ಣಾಯಕವಾಗಲಿದ್ದು, ಹೀಗಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ದೆಹಲಿಯ ತಮ್ಮ ನಿವಾಸದಲ್ಲಿ ಪ್ರಚಾರಕ್ಕಾಗಿ ರಚಿಸಲಾಗಿರುವ ಬಿಜೆಪಿ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿದರು.
ಉತ್ತರಪ್ರದೇಶ ಚುನಾವಣೆಯಲ್ಲಿ ಬ್ರಾಹ್ಮಣ ಮತದಾರರನ್ನು ಓಲೈಸುವ ಮತ್ತು ಪಕ್ಷದ ಪ್ರಚಾರ ಜವಾಬ್ದಾರಿ ನೋಡಿಕೊಳ್ಳಲು ಬಿಜೆಪಿ ಭಾನುವಾರ ಸಮಿತಿಗಳನ್ನು ರಚಿಸಿದೆ. ಸಮಿತಿಯ ಸದಸ್ಯರು ತಮ್ಮ ಯೋಜನೆಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ನೀಲನಕ್ಷೆ ಅಂತಿಮಗೊಳಿಸಲು ಜೆಪಿ ನಡ್ಡಾ ಸಭೆ ಕರೆದಿದ್ದರು.
ಇದನ್ನೂ ಓದಿ: ಕೈ-ಕಾಲು ಇಲ್ಲದ ಶ್ರಮಜೀವಿಗೆ ಆನಂದ್ ಮಹೀಂದ್ರ ಉದ್ಯೋಗದ ಆಫರ್.. ಈತನ ಸ್ಟೋರಿ ಎಲ್ಲರಿಗೂ ಸ್ಫೂರ್ತಿ!
ಸಭೆಯಲ್ಲಿ ಬ್ರಾಹ್ಮಣರ ಮತಗಳನ್ನು ಬಿಜೆಪಿ ಸೆಳೆಯುವ ಮತ್ತು ಅವರಲ್ಲಿನ ಶೇ.10 ರಷ್ಟು ಬಡ ಜನರಿಗೆ ಮೀಸಲಾತಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿ ಮಾಡುವ ಕುರಿತು ಚರ್ಚೆ ನಡೆಸಲಾಯಿತು.
ಈ ವೇಳೆ, ಕೇಂದ್ರ ಸಚಿವ ಮತ್ತು ಉತ್ತರ ಪ್ರದೇಶದ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಶಿವ ಪ್ರತಾಪ್ ಶುಕ್ಲಾ, ಮಹೇಶ್ ಶರ್ಮಾ, ಬ್ರಿಜೇಶ್ ಪಾಠಕ್, ಶ್ರೀಕಾಂತ್ ಶರ್ಮಾ, ಆನಂದ್ ಸ್ವರೂಪ್ ಸಂಘಟನೆಯ ಸಚಿವ ಸುನಿಲ್ ಬನ್ಸಾಲ್ ಸೇರಿದಂತೆ ಇತರ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.